ವಿರಾಟ್ ಕೊಹ್ಲಿ ಅವರಿಗೆ ಸಾಮಾಜಿಕ ಜಾಲತಾಣಗಳಲ್ಲಿ ಹೆಚ್ಚಿನ ಸಂಖ್ಯೆಯ ಫಾಲೋವರ್ಗಳಿದ್ದಾರೆ. ಈ ಸಲದ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಸಮಯದಲ್ಲಿ ಹೆಚ್ಚು ಟ್ರೆಂಡಿಂಗ್ನಲ್ಲಿದ್ದ ಆಟಗಾರನೂ ಇವರೇ ಎಂಬ ಅಂಕಿ-ಅಂಶ ದೊರೆತಿದೆ. ಎಂ.ಎಸ್. ಧೋನಿ ಸೋಷಿಯಲ್ ಮೀಡಿಯಾದಲ್ಲಿ ಹೆಚ್ಚು ಸಕ್ರಿಯವಾಗಿಲ್ಲದಿದ್ದರೂ ಅವರ ಫ್ಯಾನ್ ಬೇಸ್ ಮಾತ್ರ ಕಡಿಮೆ ಇಲ್ಲ.
ಐಪಿಎಲ್ ಸಂದರ್ಭದಲ್ಲಿ ಕೊಹ್ಲಿ ಮಾತ್ರ ಧೋನಿಯನ್ನು ಸೋಷಿಯಲ್ ಮೀಡಿಯಾ ಟ್ರೆಂಡ್ನಲ್ಲಿ ಹಿಂದಿಕ್ಕಿದ್ದಾರೆ. ಸಾಮಾಜಿಕ ಮಾಧ್ಯಮದ ಹೆಚ್ಚು ಬಳಕೆಯಾದ ಹೆಸರಿನಲ್ಲಿ ಕೊಹ್ಲಿ ಟಾಪರ್ ಆಗಿದ್ದಾರೆ. ಈ ಬಗ್ಗೆ ಐಪಿಜಿ ಮೀಡಿಯಾಬ್ರಾಂಡ್ಸ್ ಇಂಡಿಯಾದ ಡಿಜಿಟಲ್ನ ಅಂಗ ಇಂಟರಾಕ್ಟಿವ್ ಅವೆನ್ಯೂಸ್ ವರದಿ ಮಾಡಿದೆ.
ಐಪಿಎಲ್ 2023ರಲ್ಲಿ ಸಾಮಾಜಿಕ ಜಾಲತಾಣದಲ್ಲಿ ಹೆಚ್ಚು ಬಳಕೆಯಾದ ಉಲ್ಲೇಖಗಳಲ್ಲಿ ವಿರಾಟ್ ಹೆಸರು ಹೆಚ್ಚಾಗಿದೆ. 7 ಮಿಲಿಯನ್ ಬಾರಿ ಸೋಷಿಯಲ್ ಮೀಡಿಯಾದಲ್ಲಿ ಕೊಹ್ಲಿ ಹೆಸರು ಗೋಚರಿಸಿದೆ. ಆರ್‌ಸಿಬಿ ಪ್ಲೇಆಫ್‌ನಿಂದ ಹೊರಗುಳಿದಿದ್ದರೂ ಸಾಮಾಜಿಕ ಮಾಧ್ಯಮದಲ್ಲಿ ಅತ್ಯಂತ ಜನಪ್ರಿಯ ಆಟಗಾರನಾಗಿ ಹೊರಹೊಮ್ಮಿದ್ದಾರೆ. ಈ ಬಾರಿಯೂ ಸೇರಿ 5ನೇ ಬಾರಿಗೆ ಚೆನ್ನೈ ಸೂಪರ್ ಕಿಂಗ್ಸ್ಗೆ (ಸಿಎಸ್ಕೆ) ಕಪ್ ಗೆಲ್ಲಿಸಿದ್ದ ಎಂಎಸ್ಡಿ 6 ವಿಲಿಯನ್ ಬಾರಿ ಉಲ್ಲೇಖ ಆಗಿದ್ದಾರೆ.
ಮುಂಬೈ ಇಂಡಿಯನ್ಸ್ (ಎಂಐ) ನಾಯಕ ರೋಹಿತ್ ಶರ್ಮಾ 3 ಮಿಲಿಯನ್ ಸಾಮಾಜಿಕ ಮಾಧ್ಯಮ ಉಲ್ಲೇಖಗಳೊಂದಿಗೆ ಮೂರನೇ ಸ್ಥಾನದಲ್ಲಿದ್ದಾರೆ. ಚೆನ್ನೈ ಸೂಪರ್ ಕಿಂಗ್ಸ್ನ ರವೀಂದ್ರ ಜಡೇಜಾ, ಗುಜರಾತ್ ಟೈಟಾನ್ಸ್‌ನ ಶುಭ್‌ಮನ್ ಗಿಲ್ ಮತ್ತು ಎಂಐನ ಸೂರ್ಯಕುಮಾರ್ ಯಾದವ್ ತಲಾ 1 ಮಿಲಿಯನ್ ಸಾಮಾಜಿಕ ಮಾಧ್ಯಮದ ಉಲ್ಲೇಖಗಳನ್ನು ಹೊಂದಿದ್ದಾರೆ.