ದುಬೈ:ನಾಳೆ ನಡೆಯುವ ಪಾಕಿಸ್ತಾನ ವಿರುದ್ಧದ ಪಂದ್ಯಕ್ಕೆ ಸಿದ್ಧತೆ ನಡೆಸುತ್ತಿರುವ ಭಾರತ ತಂಡ ಕಠಿಣ ಅಭ್ಯಾಸ ಮಾಡುತ್ತಿದೆ. ಟೂರ್ನಿಯಲ್ಲಿ ಅತಿ ಹೆಚ್ಚು ಸುದ್ದಿಯಾಗಿರುವ ವಿರಾಟ್ ಕೊಹ್ಲಿ ಅಭ್ಯಾಸದ ವೇಳೆ ಎತ್ತರದ ಮಾಸ್ಕ್ (high Altitude Mask) ಅನ್ನು ಧರಿಸಿ ತಾಲೀಮು ಮಾಡಿದ್ದಾರೆ. ಹೈ ಆಲ್ಟಿಟ್ಯೂಡ್ ಮಾಸ್ಕ್ ಧರಿಸಿದ ವಿರಾಟ್ ಓಡುತ್ತಿರುವ ಚಿತ್ರಗಳನ್ನು ಬಿಸಿಸಿಐ ಟ್ವೀಟ್ ಮಾಡಿದೆ.
ನಾಳಿನ ಪಂದ್ಯದಲ್ಲಿ ಗೆದ್ದು ಪಾಕ್ ವಿರುದ್ಧ ಪಾರಮ್ಯ ಮುಂದುವರಿಸಲು ಭಾರತ ಯೋಜಿಸಿದೆ. ಇದಕ್ಕಾಗಿ ಆಟಗಾರರು ಕಠಿಣ ತಾಲೀಮು ನಡೆಸುತ್ತಿದ್ದಾರೆ. ದುಬೈ ಮೈದಾನದಲ್ಲಿ ಅಭ್ಯಾಸ ನಡೆಸಿದ ವಿರಾಟ್ ಕೊಹ್ಲಿ ಗಾಳಿಯ ಕೊರತೆ ನೀಗಿಸಲು ಎತ್ತರದ ಮಾಸ್ಕ್ ಅನ್ನು ಧರಿಸಿ ಕಸರತ್ತು ಮಾಡಿ ಬೆವರು ಹರಿಸಿದರು.
ಏನಿದು ಹೈ ಆಲ್ಟಿಟ್ಯೂಡ್ ಮಾಸ್ಕ್:ಸಮುದ್ರ ಮಟ್ಟದಿಂದ ಎತ್ತರದಲ್ಲಿ ವ್ಯಕ್ತಿ ಸಾಗಿದಾಗ ಆಮ್ಲಜನಕದ ಕೊರತೆ ಉಂಟಾಗುತ್ತದೆ. ಇದನ್ನು ಸರಿದೂಗಿಸಲು ವೈದ್ಯರು ಎತ್ತರದ ಮಾಸ್ಕ್ ಎಂದು ಕರೆಯುವ ಹೈ ಆಲ್ಟಿಟ್ಯೂಡ್ ಅನ್ನು ಬಳಸಲು ಸೂಚಿಸುತ್ತಾರೆ. ಇದು ದೇಹಕ್ಕೆ ಅಗತ್ಯವಾದ ಆಮ್ಲಜನಕವನ್ನು ಸರಬರಾಜು ಮಾಡುತ್ತದೆ.