ಹೈದರಾಬಾದ್:ದಿಢೀರ್ ಬೆಳವಣಿಗೆವೊಂದರಲ್ಲಿ ಟೀಂ ಇಂಡಿಯಾ ಟೆಸ್ಟ್ಗೂ ಡೆಲ್ಲಿ ಡ್ಯಾಶರ್ ವಿರಾಟ್ ಕೊಹ್ಲಿ ರಾಜೀನಾಮೆ ನೀಡಿದ್ದಾರೆ. 2014ರಲ್ಲಿ ಮಹೇಂದ್ರ ಸಿಂಗ್ ಧೋನಿ ಟೆಸ್ಟ್ ನಾಯಕತ್ವದಿಂದ ಹಠಾತ್ ಆಗಿ ಕೆಳಗಿಳಿಯುತ್ತಿದ್ದಂತೆ ಆ ಜವಾಬ್ದಾರಿ ವಹಿಸಿಕೊಂಡ ರನ್ ಮಷಿನ್ ತಂಡವನ್ನು ನಂಬರ್ 1 ಪಟ್ಟಕೇರಿಸಿರುವ ಸಾಧನೆ ಮಾಡಿದ್ದು ವಿಶೇಷ ದಾಖಲೆ ಮತ್ತು ಇತಿಹಾಸದ ಪುಟಗಳಲ್ಲಿ ಸೇರಿದೆ.
ಕಾಂಗರೂ ನಾಡಲ್ಲಿ, ಇಂಗ್ಲೆಂಡ್ ನೆಲದಲ್ಲಿ ಐತಿಹಾಸಿಕ ಟೆಸ್ಟ್ ಸರಣಿ ಗೆದ್ದಿರುವ ವಿರಾಟ್ ಕೊಹ್ಲಿ ತಂಡವನ್ನ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ನಲ್ಲಿ ಫೈನಲ್ವರೆಗೆ ತೆಗೆದುಕೊಂಡು ಹೋಗಿದ್ದರು. ಟೆಸ್ಟ್ ಕ್ರಿಕೆಟ್ನಲ್ಲಿ ಅತ್ಯಂತ ಯಶಸ್ವಿ ನಾಯಕ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದ ವಿರಾಟ್ ಇದೀಗ ದಿಢೀರ್ ಆಗಿ ರಾಜೀನಾಮೆ ನೀಡಿದ್ದು, ಕೇವಲ ಆಟಗಾರನಾಗಿ ತಂಡದಲ್ಲಿ ಇರುವುದಾಗಿ ತಿಳಿಸಿದ್ದಾರೆ.
ಆಸ್ಟ್ರೇಲಿಯಾ ನೆಲದಲ್ಲಿ ಐತಿಹಾಸಿಕ ಸರಣಿ ಗೆದ್ದ ವಿರಾಟ್ ಪಡೆ ತಾವು ಟೆಸ್ಟ್ ನಾಯಕತ್ವ ತ್ಯಜಿಸಿರುವ ಬಗ್ಗೆ ಭಾವನಾತ್ಮಕ ಪತ್ರವನ್ನು ಟ್ವಿಟ್ಟರ್ನಲ್ಲಿ ಶೇರ್ ಮಾಡಿಕೊಂಡಿದ್ದು, ಟೀಂ ಇಂಡಿಯಾ ಮಾಜಿ ಕ್ಯಾಪ್ಟನ್ ಮಹೇಂದ್ರ ಸಿಂಗ್ ಧೋನಿಗೆ ಧನ್ಯವಾದ ಅರ್ಪಿಸಿದ್ದಾರೆ.
ಇದನ್ನೂ ಓದಿರಿ:ಟೆಸ್ಟ್ ತಂಡದ ನಾಯಕತ್ವಕ್ಕೂ ರಾಜೀನಾಮೆ ಘೋಷಿಸಿದ ಕೊಹ್ಲಿ.. ದಾಖಲೆಗಳ ವೀರ ಬರೆದ್ರು ಭಾವನಾತ್ಮಕ ಪತ್ರ
ಟೆಸ್ಟ್ ಕ್ರಿಕೆಟ್ನಲ್ಲಿ ನಾಯಕನಾಗಿ ನನ್ನನ್ನು ನಂಬಿದ, ಭಾರತೀಯ ಕ್ರಿಕೆಟ್ ಮುನ್ನಡೆಸಬಲ್ಲ ಸಮರ್ಥ ವ್ಯಕ್ತಿ ಎಂದುಕೊಂಡ ಮಹೇಂದ್ರ ಸಿಂಗ್ ಧೋನಿಗೆ ಧನ್ಯವಾದ ಎಂದಿರುವ ವಿರಾಟ್ ಕೊಹ್ಲಿ, ಭಾರತೀಯ ಕ್ರಿಕೆಟ್ ಅನ್ನು ಮತ್ತಷ್ಟು ಎತ್ತರಕ್ಕೆ ಕೊಂಡೊಯ್ಯುವ ಸಾಮರ್ಥ್ಯ ನನ್ನಲ್ಲಿ ಇದೆ ಎಂದು ಗುರುತಿಸಿದವರು ಅವರು. ನನ್ನ ಅದ್ಭುತ ಜರ್ನಿ ಹಿಂದೆ ಅವರ ಪಾಲು ಯಾವಾಗಲು ಇರುತ್ತದೆ ಎಂದು ಕೃತಜ್ಞತೆ ಸಲ್ಲಿಸಿದ್ದಾರೆ.
ಮಾಜಿ ಕೋಚ್ ರವಿಶಾಸ್ತ್ರಿಗೂ ಥ್ಯಾಂಕ್ಸ್
ರವಿಶಾಸ್ತ್ರಿಗೆ ಧನ್ಯವಾದ ಹೇಳಿದ ವಿರಾಟ್ ಕೊಹ್ಲಿ ಇದರ ಜೊತೆಗೆ ತಂಡದ ಕೋಚ್ ಆಗಿದ್ದ ರವಿಶಾಸ್ತ್ರಿಗೂ ಥ್ಯಾಂಕ್ಸ್ ಹೇಳಿರುವ ವಿರಾಟ್ ಕೊಹ್ಲಿ, ತನಗೆ ಕೊಟ್ಟ ಜವಾಬ್ದಾರಿಯನ್ನು ಯಶಸ್ವಿಯಾಗಿ ನಿರ್ವಹಿಸಲು ಅವಕಾಶ ನೀಡಿರುವ ಭಾರತೀಯ ಕ್ರಿಕೆಟ್ ಮಂಡಳಿಗೂ ಧನ್ಯವಾದ ತಿಳಿಸಿದ್ದಾರೆ. ಟೆಸ್ಟ್ ಕ್ರಿಕೆಟ್ನಲ್ಲಿ ತಂಡವನ್ನ ಮೇಲಕ್ಕೆ ತೆಗೆದುಕೊಂಡು ಹೋಗಲು ತಂಡದ ವಾಹನಕ್ಕೆ ರವಿ ಭಾಯ್ ಎಂಜಿನ್ ಆಗಿದ್ದರು. ಅವರು ನಿರ್ವಹಿಸಿದ ಪಾತ್ರಕ್ಕೆ ನಾನು ಆಭಾರಿಯಾಗಿರುತ್ತೇನೆ ಎಂದು ಕೊಹ್ಲಿ ಹೊಗಳಿದ್ದಾರೆ.
ವಿರಾಟ್ ಕೊಹ್ಲಿ ಒಟ್ಟು 68 ಟೆಸ್ಟ್ ಪಂದ್ಯಗಳಲ್ಲಿ ತಂಡದ ಸಾರಥ್ಯ ವಹಿಸಿದ್ದು, 40 ಟೆಸ್ಟ್‌ಗಳಲ್ಲಿ ಗೆಲುವು, 17 ಟೆಸ್ಟ್‌ಗಳಲ್ಲಿ ಸೋಲು ಕಂಡಿದ್ದು, 11 ಪಂದ್ಯಗಳು ಡ್ರಾ ಆಗಿವೆ.