ಮುಂಬೈ (ಮಹಾರಾಷ್ಟ್ರ):ಇಂದು ವಿಶ್ವ ತಾಯಂದಿರ ದಿನ, ಮಮತೆಯ ಇನ್ನೊಂದು ರೂಪವಾಗಿರುವ ತಾಯಿಯನ್ನು ಸಂಭ್ರಮಿಸುವ ದಿನ. ಇದನ್ನು ಕ್ರಿಕೆಟಿಗೆ ವಿರಾಟ್ ಕೊಹ್ಲಿ ವಿಶೇಷವಾಗಿ ಸೆಲಬ್ರೇಟ್ ಮಾಡಿದ್ದಾರೆ. ಅನುಷ್ಕಾ ಶರ್ಮಾ ಮತ್ತು ಮಗಳು ವಮಿಕಾ ಇರುವ ಫೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.
ಇನ್ಸ್ಟಾಗ್ರಾಮ್ ಮತ್ತು ಟ್ವಿಟರ್ನಲ್ಲಿ ವಿರಾಟ್ "ತಾಯಂದಿರ ದಿನದ ಶುಭಾಶಯಗಳು @anushkasharma" ಎಂಬ ಶೀರ್ಷಿಕೆಯೊಂದಿಗೆ ಚಿತ್ರಗಳ ಸರಣಿಯನ್ನು ಹಂಚಿಕೊಂಡಿದ್ದಾರೆ. ಮೊದಲ ಚಿತ್ರವು ಅನುಷ್ಕಾ ಮತ್ತು ವಾಮಿಕಾ ಅವರ ಬಾಲ್ಕನಿಯಿಂದ ಪ್ರಶಾಂತ ನೋಟವನ್ನು ಆನಂದಿಸುತ್ತಿರುವ ನೆರಳು ಬೆಳಕಿನ ಫೋಟೋವನ್ನು ಹಂಚಿಕೊಂಡಿದ್ದಾರೆ. ಎರಡನೇ ಮತ್ತು ಮೂರನೇ ಚಿತ್ರಗಳು ಅವರ ತಾಯಿ ಮತ್ತು ಅನುಷ್ಕಾ ಅವರು ಒಟ್ಟಿಗೆ ಇರುವ ಮದುವೆಯ ಕ್ಷಣದ ಚಿತ್ರಗಳನ್ನು ಹಂಚಿಕೊಂಡಿದ್ದಾರೆ.
ವಿರಾಟ್ ತಾಯಂದಿರ ದಿನದ ಶುಭಾಶಯದ ಪೋಸ್ಟ್ ಹಂಚಿಕೊಳ್ಳುತ್ತಿದ್ದಂತೆ ಒಂದೆಡೆ ಅಭಿಮಾನಿಗಳು ಮುಗಿ ಬಿದ್ದು, ಹಾರ್ಟ್ ಮತ್ತು ಫೈರ್ ಎಮೋಜಿಗಳನ್ನು ಕಮೆಂಟ್ ಬಾಕ್ಸ್ನಲ್ಲಿ ತುಂಬಿಸಿದರೆ, ಮಡದಿ ಅನುಷ್ಕಾ ಪ್ರೀತಿಯಿಂದ ಧನ್ಯವಾದ ಎಂದು ಬರೆದಿದ್ದಾರೆ. ಈ ನಡುವೆ ಅಭಿಮಾನಿ ಒಬ್ಬ ‘ಅಮ್ಮಂದಿರ ದಿನದ ಶುಭಾಶಯಗಳು ಅನುಷ್ಕಾ ನ್ಯಾಮ್’ ಎಂದು ಕಾಮೆಂಟ್ ಮಾಡಿದ್ದಾನೆ.
ವಿರಾಟ್ ಮತ್ತು ಅನುಷ್ಕಾ ಡಿಸೆಂಬರ್ 11 ರಂದು ಇಟಲಿಯಲ್ಲಿ ವಿವಾಹವಾದರು ಮತ್ತು ಅತ್ಯಂತ ಪ್ರೀತಿಯ ಸೆಲೆಬ್ರಿಟಿ ಜೋಡಿಗಳಲ್ಲಿ ಒಬ್ಬರು. ಈ ಜೋಡಿಗೆ ಜನವರಿ 11, 2021 ರಂದು ಹೆಣ್ಣು ಮಗುವಿನ ಜನನವಾಗಿತ್ತು. ವಿರಾಟ್ ಅನುಷ್ಕಾ ಅವರು ವಾಮಿಕಾ ಎಂದು ನಾಮಕರಣ ಮಾಡಿದರು. ವಿರಾಟ್ ಯಾವಾಗಲೂ ಅನುಷ್ಕಾರನ್ನು ತನ್ನ ಶಕ್ತಿ ಎಂದು ಕರೆಯುತ್ತಿರುತ್ತಾರೆ. ಅದರಂತೆ ಚಿತ್ರರಂಗದಲ್ಲಿ ಬಿಡುವು ಮಾಡಿಕೊಂಡು ಅನುಷ್ಕಾ ಶರ್ಮಾ ಕ್ರಿಕೆಟ್ ಪಂದ್ಯಗಳಿಗೆ ಹಾಜರಾಗುತ್ತಾರೆ.