ಕರ್ನಾಟಕ

karnataka

ETV Bharat / sports

ವಿರಾಟ್ ಕೊಹ್ಲಿ ನನಗಾಗಿ​​​ ತಮ್ಮ 3ನೇ ಬ್ಯಾಟಿಂಗ್​ ಕ್ರಮಾಂಕ ತ್ಯಾಗ ಮಾಡಿದ್ದಾರೆ: ಸೂರ್ಯಕುಮಾರ್ - ಟೀಂ ಇಂಡಿಯಾ ಕ್ರಿಕೆಟ್

ಅನೇಕ ಪಂದ್ಯಗಳಲ್ಲಿ ವಿರಾಟ್​ ಕೊಹ್ಲಿ ನನಗಾಗಿ 3ನೇ ಬ್ಯಾಟಿಂಗ್ ಕ್ರಮಾಂಕ ತ್ಯಾಗ ಮಾಡಿದ್ದಾರೆಂದು ಸ್ಫೋಟಕ ಬ್ಯಾಟರ್​ ಸೂರ್ಯಕುಮಾರ್​ ಯಾದವ್​ ಹೇಳಿಕೊಂಡಿದ್ದಾರೆ.

Virat Kohli
Virat Kohli

By

Published : Nov 19, 2021, 4:26 PM IST

ಹೈದರಾಬಾದ್​:ವಿರಾಟ್​ ಕೊಹ್ಲಿ (Virat Kohli) ಭಾರತ ತಂಡಕ್ಕೆ ಮರಳಿದ ನಂತರವೂ ಸೂರ್ಯಕುಮಾರ್ ಯಾದವ್ (Suryakumar Yadav)​ 3ನೇ ಕ್ರಮಾಂಕದಲ್ಲೇ ಆಡಬೇಕೆಂದು ಟೀಂ ಮಾಜಿ ಆರಂಭಿಕ ಬ್ಯಾಟರ್​ ಗೌತಮ್​ ಗಂಭೀರ್ (Gautam Gambhir)​ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಇದರ ಬೆನ್ನಲ್ಲೇ ಸೂರ್ಯಕುಮಾರ್​ ಯಾದವ್​ ತಮ್ಮ ಅಭಿಪ್ರಾಯ ಹೊರಹಾಕಿದ್ದಾರೆ.

ಪ್ರವಾಸಿ ನ್ಯೂಜಿಲ್ಯಾಂಡ್ ​(New Zealand) ವಿರುದ್ಧದ ಮೊದಲ ಟಿ20 ಪಂದ್ಯದಲ್ಲಿ ಮೂರನೇ ಕ್ರಮಾಂಕದಲ್ಲಿ ಬ್ಯಾಟ್​ ಬೀಸಿ, ಟೀಂ ಇಂಡಿಯಾ ಗೆಲುವಿನಲ್ಲಿ ಪ್ರಮುಖ ಪಾತ್ರ ನಿರ್ವಹಿಸಿರುವ ಯಾದವ್ ಮಹತ್ವದ ಮಾಹಿತಿ ಹಂಚಿಕೊಂಡಿದ್ದಾರೆ. ವಿರಾಟ್​​ ಕೊಹ್ಲಿ ನನಗಾಗಿ ತಮ್ಮ 3ನೇ ಬ್ಯಾಟಿಂಗ್ ಕ್ರಮಾಂಕ ತ್ಯಾಗ ಮಾಡಿದ್ದಾರೆಂದು ತಿಳಿಸಿದ್ದಾರೆ.

ಇದನ್ನೂ ಓದಿ:ಕೊಹ್ಲಿಗಿಂತಲೂ ಸೂರ್ಯಕುಮಾರ್​ಗೆ​ 3ನೇ ಬ್ಯಾಟಿಂಗ್ ಕ್ರಮಾಂಕ ಹೆಚ್ಚು ಸೂಕ್ತ: ಗೌತಮ್ ಗಂಭೀರ್

ಅನೇಕ ಪಂದ್ಯಗಳಲ್ಲಿ ವಿರಾಟ್​​ ಕೊಹ್ಲಿ ತಮ್ಮ ಬ್ಯಾಟಿಂಗ್ ಕ್ರಮಾಂಕ ನನಗಾಗಿ ತ್ಯಾಗ ಮಾಡಿದ್ದಾರೆ ಎಂದಿರುವ ಯಾದವ್​, ಟೀಂ ಇಂಡಿಯಾಗೆ (Team India) ನಾನು ಪದಾರ್ಪಣೆ (ಇಂಗ್ಲೆಂಡ್​ ವಿರುದ್ಧದ ಸರಣಿ) ಮಾಡಿದ್ದ ವೇಳೆ ವಿರಾಟ್​​​ ನನಗಾಗಿ ಮೂರನೇ ಕ್ರಮಾಂಕ ಬಿಟ್ಟು, 4ನೇ ಸ್ಥಾನದಲ್ಲಿ ಬ್ಯಾಟ್​ ಬೀಸಿದ್ದರು ಎಂಬ ಮಾಹಿತಿ ಹಂಚಿಕೊಂಡಿದ್ದಾರೆ.

ವಿಶ್ವಕಪ್ ವೇಳೆ ಕೂಡ ಅನೇಕ ಪಂದ್ಯಗಳಲ್ಲಿ ನನಗೆ ಮೂರನೇ ಕ್ರಮಾಂಕದಲ್ಲಿ ಬ್ಯಾಟ್ ಮಾಡಲು ಹೋಗುವಂತೆ ಅವರು ತಿಳಿಸಿದ್ದಾರೆ. ತಂಡದಲ್ಲಿ ನಾನು ಯಾವುದೇ ಕ್ರಮಾಂಕದಲ್ಲೂ ಬ್ಯಾಟ್ ಮಾಡಲು ಸಿದ್ಧ. ಆರಂಭಿಕನಾಗಿ ಕಣಕ್ಕಿಳಿದು, 7ನೇ ಕ್ರಮಾಂಕದವರೆಗೂ ನಾನು ಬ್ಯಾಟ್​ ಬೀಸಿದ್ದೇನೆ. ಐಪಿಎಲ್​​ನಲ್ಲಿ ಕಳೆದ ಮೂರು ವರ್ಷಗಳಿಂದ ಮೂರನೇ ಕ್ರಮಾಂಕದಲ್ಲಿ ಬ್ಯಾಟ್​ ಮಾಡುತ್ತಿದ್ದೇನೆ ಎಂದು ತಿಳಿಸಿದ್ದಾರೆ.

ನ್ಯೂಜಿಲ್ಯಾಂಡ್​ ವಿರುದ್ಧದ ಮೊದಲ ಟಿ20 ಪಂದ್ಯದಲ್ಲಿ ಮೂರನೇ ಕ್ರಮಾಂಕದಲ್ಲಿ ಬ್ಯಾಟ್​ ಬೀಸಿರುವ ಸೂರ್ಯಕುಮಾರ್ ಯಾದವ್​​​ 40 ಎಸೆತಗಳಲ್ಲಿ 62ರನ್​ಗಳಿಕೆ ಮಾಡಿದ್ದರು.

ABOUT THE AUTHOR

...view details