ಕರ್ನಾಟಕ

karnataka

ETV Bharat / sports

ಟಿ20 ಶ್ರೇಯಾಂಕ: ವಿರಾಟ್​ ಕೊಹ್ಲಿ 15, ಭುವನೇಶ್ವರ್​ಗೆ 4ನೇ ಸ್ಥಾನ - ಐಸಿಸಿ ಟಿ20 ಶ್ರೇಯಾಂಕ

ಏಷ್ಯಾ ಕಪ್​ ಟೂರ್ನಿಯಲ್ಲಿ ಉತ್ತಮ ಪ್ರದರ್ಶನ ತೋರಿದ ಬ್ಯಾಟಿಂಗ್​ ಕಿಂಗ್​ ವಿರಾಟ್ ಕೊಹ್ಲಿ ಐಸಿಸಿ ಟಿ20 ಶ್ರೇಯಾಂಕದಲ್ಲಿ ಏರಿಕೆ ಕಂಡಿದ್ದಾರೆ. ವೇಗಿ ಭುವನೇಶ್ವರ್​ ಕೂಡ ಹೆಚ್ಚಳ ದಾಖಲಿಸಿದ್ದಾರೆ.

virat-kohli-rises-14-spots
ಟಿ20 ಶ್ರೇಯಾಂಕ

By

Published : Sep 14, 2022, 4:58 PM IST

Updated : Sep 14, 2022, 10:35 PM IST

ದುಬೈ:ಐಸಿಸಿ ಪ್ರಕಟಿಸಿ ನೂತನ ಟಿ20 ರ‍್ಯಾಂಕಿಂಗ್​ ಪಟ್ಟಿಯಲ್ಲಿ ಮೂರು ವರ್ಷಗಳ ಬಳಿಕ ಶತಕ ಸಾಧನೆ ಮಾಡಿದ ಬ್ಯಾಟಿಂಗ್​ ಕಿಂಗ್​ ವಿರಾಟ್ ಕೊಹ್ಲಿ ಏರಿಕೆ ಕಂಡಿದ್ದಾರೆ. 14 ಸ್ಥಾನಗಳ ಏರಿಕೆ ಸಾಧಿಸಿ 15ನೇ ಶ್ರೇಯಾಂಕ ಪಡೆದಿದ್ದಾರೆ.

2019ಕ್ಕೂ ಮೊದಲು ಅವರು ಚುಟುಕು ಕ್ರಿಕೆಟ್​ನಲ್ಲಿ ಉತ್ತುಂಗದಲ್ಲಿದ್ದರು. ಬಳಿಕ ಲಯದ ಸಮಸ್ಯೆಯಿಂದ ಟಾಪ್​ 10 ರಿಂದ ಹೊರಬಿದ್ದಿದ್ದರು. ಇದಾದ 3 ವರ್ಷಗಳಿಂದ ಶ್ರೇಯಾಂಕದಿಂದ ದೂರವೇ ಇದ್ದ ವಿರಾಟ್​ ಕೊಹ್ಲಿ ಏಷ್ಯಾಕಪ್​ ಟೂರ್ನಿಯಲ್ಲಿ ತೋರಿದ ಅದ್ಭುತ ಪ್ರದರ್ಶನದಿಂದ ಮತ್ತೆ ಸ್ಪರ್ಧಾತ್ಮಕ ಕ್ರಿಕೆಟ್​ಗೆ ಮರಳಿದರು. ಇದೇ ರ‍್ಯಾಂಕಿಂಗ್​ನಲ್ಲಿ ಭಾರತದ ಆರಂಭಿಕ ಬ್ಯಾಟರ್​ ಕೆ ಎಲ್​ ರಾಹುಲ್​ 7ಸ್ಥಾನ ಏರಿಕೆ ಕಂಡು 23 ಶ್ರೇಯಾಂಕ ಪಡೆದಿದ್ದಾರೆ.

ಟಿ20 ಬೌಲರ್‌ಗಳ ಪಟ್ಟಿ:ಆರಂಭಿಕ ಪಂದ್ಯಗಳಲ್ಲಿ ವಿಕೆಟ್​ ಪಡೆಯದೇ ಟೀಕೆಗೆ ಗುರಿಯಾಗಿದ್ದ ಭಾರತದ ವೇಗಿ ಭುವನೇಶ್ವರ್ ಕುಮಾರ್ 4 ನೇ ಸ್ಥಾನ ಪಡೆದುಕೊಂಡಿದ್ದಾರೆ.

ಶ್ರೀಲಂಕಾದ ಹಸರಂಗಗೆ ಲಕ್​:ಏಷ್ಯಾ ಕಪ್​ ಚಾಂಪಿಯನ್​ ತಂಡದ ವನಿಂದು ಹಸರಂಗ ಭಾರೀ ಏರಿಕೆ ಕಂಡಿದ್ದಾರೆ. ಟೂರ್ನಿಯಲ್ಲಿ ಅವರು ಅದ್ಭುತ ಪ್ರದರ್ಶನ ತೋರಿ ಪ್ಲೇಯರ್​ ಆಫ್​ ಟೂರ್ನ್​ಮೆಂಟ್​ ಪ್ರಶಸ್ತಿಯನ್ನು ಜಯಿಸಿದ್ದರು. ಇದರಿಂದ ಹಸರಂಗ ಬೌಲರ್​ ವಿಭಾಗದಲ್ಲಿ 3 ಸ್ಥಾನ ಏರಿ 6 ಕ್ಕೆ ಬಂದರೆ, ಆಲ್​ರೌಂಡರ್​ ಪಟ್ಟಿಯಲ್ಲಿ 7 ಸ್ಥಾನ ಜಿಗಿದು 4 ನೇ ಶ್ರೇಯಾಂಕ ಪಡೆದಿದ್ದಾರೆ.

ಓದಿ:ಭಾರತ vs ಆಸ್ಟ್ರೇಲಿಯಾ ಸರಣಿ: ಕಾಂಗರೂ ತಂಡದಿಂದ ಮಾರ್ಷ್​, ಸ್ಟಾರ್ಕ್​, ಸ್ಟೋಯ್ನಿಸ್​ ಔಟ್​​

Last Updated : Sep 14, 2022, 10:35 PM IST

ABOUT THE AUTHOR

...view details