ಲಂಡನ್:ಟೀಂ ಇಂಡಿಯಾ ಮಾಜಿ ಕ್ಯಾಪ್ಟನ್ ವಿರಾಟ್ ಕೊಹ್ಲಿ ಬರೋಬ್ಬರಿ ಎರಡೂವರೆ ವರ್ಷಗಳಿಂದ ಬ್ಯಾಟಿಂಗ್ ವೈಫಲ್ಯ ಅನುಭವಿಸ್ತಿದ್ದಾರೆ. ಅವರ ಬ್ಯಾಟ್ನಿಂದ ಒಂದೇ ಒಂದು ಶತಕ ಸಹ ಸಿಡಿದಿಲ್ಲ. ಹೀಗಾಗಿ, ಅನೇಕ ಕ್ರಿಕೆಟ್ ದಿಗ್ಗಜರು ಕೊಹ್ಲಿ ಕುರಿತಾಗಿ ಟೀಕೆ ವ್ಯಕ್ತಪಡ್ತಿದ್ದಾರೆ. ಈ ಬೆನ್ನಲ್ಲೇ ಸ್ಫೂರ್ತಿದಾಯಕ ಸಂದೇಶವಿರುವ ಲೈನ್ಗಳಿರುವ ಚಿತ್ರದ ಮುಂದೆ ನಿಂತು ತೆಗೆಸಿಕೊಂಡಿರುವ ಫೋಟೋವನ್ನು ಟ್ವೀಟರ್ನಲ್ಲಿ ಶೇರ್ ಮಾಡಿದ್ದಾರೆ.
ಭಾರತ-ಇಂಗ್ಲೆಂಡ್ ನಡುವೆ ನಾಳೆ ಮೂರನೇ ಏಕದಿನ ಪಂದ್ಯ ನಡೆಯಲಿದ್ದು, ವಿರಾಟ್ ಕೊಹ್ಲಿಗೆ ಕೊನೆಯ ಅವಕಾಶವಾಗಲಿದೆ. ಇದರ ಮಧ್ಯೆ ಸ್ಫೂರ್ತಿದಾಯಕ ಲೈನ್ಗಳಿರುವ ಸಂದೇಶದೊಂದಿಗೆ ಫೋಟೋ ಹಂಚಿಕೊಂಡಿದ್ದಾರೆ. ಈ ಮೂಲಕ ತಾವು ಕಮ್ಬ್ಯಾಕ್ ಮಾಡುವ ಮುನ್ಸೂಚನೆ ನೀಡಿದ್ದಾರೆ.
'ವಾಟ್ ಇಫ್ ಐ ಫಾಲ್!? ಓಹೋ ಬಟ್ ಮೈ ಡಾರ್ಲಿಂಗ್, ವಾಟ್ ಇಫ್ ಯು ಫ್ಲೈ ?' ಎಂಬ ಲೈನ್ಗಳಿರುವ ಹಾಗೂ ಎರಡು ರೆಕ್ಕೆಗಳಿರುವ ಕಲಾತ್ಮಕ ಫೋಟೋ ಮುಂದೆ ಕುಳಿತುಕೊಂಡು ಫೋಟೋ ಕ್ಲಿಕ್ಕಿಸಿಕೊಂಡಿದ್ದಾರೆ. ಈ ಮೂಲಕ ತಮ್ಮ ವಿರುದ್ಧ ವ್ಯಕ್ತವಾಗುತ್ತಿರುವ ಟೀಕಾಕಾರಿಗೆ ಕಮ್ಬ್ಯಾಕ್ ಮಾಡುವ ಕಠಿಣ ಸಂದೇಶ ರವಾನಿಸಿದ್ದಾರೆ.