ಕರ್ನಾಟಕ

karnataka

ETV Bharat / sports

Asia Cup 2022: ಪಾಕಿಸ್ತಾನ ಕ್ಯಾಪ್ಟನ್​ ಬಾಬರ್ ಆಜಂ ಭೇಟಿ ಮಾಡಿದ ವಿರಾಟ್​​ ಕೊಹ್ಲಿ - Etv bharat kannada

ಏಷ್ಯಾ ಕಪ್​ ಟೂರ್ನಿಯಲ್ಲಿ ಭಾರತ-ಪಾಕಿಸ್ತಾನ ಆಗಸ್ಟ್​ 28ರಂದು ಮುಖಾಮುಖಿಯಾಗಲಿವೆ. ಇದರ ಮಧ್ಯೆ ಉಭಯ ತಂಡದ ಆಟಗಾರರು ಮುಖಾಮುಖಿಯಾಗಿದ್ದು, ಕುಶಲೋಪರಿ ವಿಚಾರಿಸಿದರು.

Virat Kohli Meets Pakistan Captain Babar Azam
Virat Kohli Meets Pakistan Captain Babar Azam

By

Published : Aug 25, 2022, 3:14 PM IST

ದುಬೈ:ಪ್ರತಿಷ್ಠಿತ ಏಷ್ಯಾ ಕಪ್​ ಟಿ20 ಟೂರ್ನಮೆಂಟ್​​​ ಆರಂಭಗೊಳ್ಳಲು ಕೇವಲ ಎರಡು ದಿನ ಮಾತ್ರ ಬಾಕಿ. ಈಗಾಗಲೇ ಎಲ್ಲ ತಂಡಗಳು ಅರಬ್​​ ನಾಡಲ್ಲಿ ಬೀಡುಬಿಟ್ಟಿವೆ. ರೋಹಿತ್​ ಶರ್ಮಾ ನಾಯಕತ್ವದ ಟೀಂ ಇಂಡಿಯಾ ಈಗಾಗಲೇ ನೆಟ್‌ ಪ್ರಾಕ್ಟಿಸ್‌ ಶುರು ಮಾಡಿದೆ. ಈ ನಡುವೆ ವಿರಾಟ್​ ಕೊಹ್ಲಿ ಪಾಕ್​​ ತಂಡದ ಕ್ಯಾಪ್ಟನ್​ ಬಾಬರ್ ಆಜಂ ಅವರನ್ನು ಭೇಟಿ ಮಾಡಿದ್ದು, ಕುಶಲೋಪರಿ ವಿಚಾರಿಸಿದರು.

ಆಗಸ್ಟ್​​ 27 ರಿಂದ ಏಷ್ಯಾ ಕಪ್​ ಟಿ20 ಟೂರ್ನಿ ನಡೆಯಲಿದೆ. ಆಗಸ್ಟ್​​ 28ರಂದು ಸಾಂಪ್ರದಾಯಿಕ ಎದುರಾಳಿ ತಂಡಗಳಾದ ಭಾರತ-ಪಾಕಿಸ್ತಾನ ಪೈಪೋಟಿ ನಡೆಸಲಿವೆ. ಈ ಸಂದರ್ಭದಲ್ಲಿ ಉಭಯ ತಂಡದ ಆಟಗಾರರು ಕೆಲಕಾಲ ಮಾತುಕತೆ ನಡೆಸಿದ್ದು ಗಮನ ಸೆಳೆಯಿತು. ಅಫ್ಘಾನಿಸ್ತಾನದ ಆಟಗಾರರು ಕೂಡಾ​ ಉಪಸ್ಥಿತರಿದ್ದರು. ಇದರ ವಿಡಿಯೋ ತುಣುಕನ್ನು ಬಿಸಿಸಿಐ ತನ್ನ ಟ್ವಿಟರ್​ ಅಕೌಂಟ್​​ನಲ್ಲಿ ಶೇರ್ ಮಾಡಿದೆ.

ಇದನ್ನೂ ಓದಿ:ರಾಹುಲ್​​​​ ದ್ರಾವಿಡ್​​ಗೆ ಕೋವಿಡ್​​... ಏಷ್ಯಾ ಕಪ್​​ಗೆ ಟೀಂ ಇಂಡಿಯಾ ಕೋಚ್​ ಆಗಿ ಲಕ್ಷ್ಮಣ್ ನೇಮಕ

ಈ ವಿಡಿಯೋದಲ್ಲಿ ಹಾರ್ದಿಕ್ ಪಾಂಡ್ಯ, ಯಜುವೇಂದ್ರ ಚಹಲ್​​, ಅಫ್ಘಾನಿಸ್ತಾನದ ರಶೀದ್ ಖಾನ್​, ಮೊಹಮ್ಮದ್​​ ನಬಿ ಸಹ ಇದ್ದು, ಪಾಕಿಸ್ತಾನದ ನಾಯಕ ಬಾಬರ್​ ಆಜಂ ಅವರನ್ನು ವಿರಾಟ್​ ಕೊಹ್ಲಿ ಭೇಟಿ ಮಾಡಿರುವುದನ್ನು ನೋಡಬಹುದು. ವಿಶ್ವದ ಅಗ್ರ ಬ್ಯಾಟರ್​​​​ಗಳಲ್ಲಿ ಬಾಬರ್ ಆಜಂ ಒಬ್ಬರಾಗಿದ್ದು ಈ ಹಿಂದಿನಿಂದಲೂ ಇಬ್ಬರು ಆಟಗಾರರ​​ ನಡುವೆ ಹೋಲಿಕೆ ಮಾಡಲಾಗ್ತಿದೆ. ಏಷ್ಯಾ ಕಪ್​​​ನಲ್ಲಿ ಭಾರತ ಯಶಸ್ವಿ ತಂಡ. ಪಾಕಿಸ್ತಾನ ಕೂಡ ಎರಡು ಸಲ ಚಾಂಪಿಯನ್​ ಆಗಿದೆ. ಉಳಿದಂತೆ ಬಾಂಗ್ಲಾದೇಶ, ಶ್ರೀಲಂಕಾ, ಅಫ್ಘಾನಿಸ್ತಾನ ಸಹ ಟೂರ್ನಿಯಲ್ಲಿ ಭಾಗಿಯಾಗಲಿವೆ.

ನಿನ್ನೆ ಅಫ್ಘಾನಿಸ್ತಾನ​​ ಹಾಗೂ ಪಾಕ್​ ತಂಡದ ಆಟಗಾರರು ಮುಖಾಮುಖಿಯಾಗಿ ಮಾತುಕತೆ ನಡೆಸಿದ್ದರು. ಅದರ ವಿಡಿಯೋ ತುಣುಕನ್ನು ಪಿಸಿಬಿ ಟ್ವೀಟ್ ಮಾಡಿತ್ತು.

ABOUT THE AUTHOR

...view details