ಐಪಿಎಲ್ ಇತಿಹಾಸದಲ್ಲಿ ಕೊಹ್ಲಿ ಅತ್ಯಂತ ಕಿರಿಯ ನಾಯಕ: ಪಂತ್, ಗಿಲ್ ಸೇರಿ ಈ ಪಟ್ಟಿಯಲ್ಲಿ ಯಾರಿದ್ದಾರೆ?
Young IPL Captains: ಟೀಂ ಇಂಡಿಯಾದ ಯಂಗ್ ಬ್ಯಾಟರ್ ಶುಭ್ಮನ್ ಗಿಲ್ ತಮ್ಮ 24ನೇ ವಯಸ್ಸಿನಲ್ಲಿ ಐಪಿಎಲ್‌ನಲ್ಲಿ ತಂಡದ ಸಾರಥ್ಯ ವಹಿಸಿಕೊಳ್ಳಲಿದ್ದಾರೆ. ಈ ಹಿನ್ನೆಲೆಯಲ್ಲಿ ಐಪಿಎಲ್ ಕ್ರಿಕೆಟ್ ಇತಿಹಾಸವನ್ನೊಮ್ಮೆ ಕೆದಕೋಣ.
ಹೈದರಾಬಾದ್:ಟೀಂ ಇಂಡಿಯಾದ ಯುವ ಬ್ಯಾಟರ್ ಶುಭ್ಮನ್ ಅವರು ಐಪಿಎಲ್‌ನಲ್ಲಿ ಬಡ್ತಿ ಪಡೆದಿದ್ದಾರೆ. 2024ರ ಸೀಸನ್ನಲ್ಲಿ ಅವರು ಗುಜರಾತ್ ಟೈಟಾನ್ಸ್ ತಂಡವನ್ನು ಮುನ್ನಡೆಸುವರು. ಐಪಿಎಲ್‌ನಲ್ಲಿ ಟೀಂ ಇಂಡಿಯಾದ ಸ್ಟಾರ್ ಆಲ್‌ರೌಂಡರ್ ಹಾರ್ದಿಕ್ ಪಾಂಡ್ಯ ಮುಂಬೈ ಇಂಡಿಯನ್ಸ್ ತಂಡಕ್ಕೆ ಟ್ರೇಡ್ ಆಗಿದ್ದರಿಂದ ಗಿಲ್‌ಗೆ ನಾಯಕತ್ವದ ಸದಾವಕಾಶ ಸಿಕ್ಕಿದೆ.
ಗಿಲ್ ಎರಡು ವರ್ಷಗಳಿಂದ ಅತ್ಯುತ್ತಮ ಫಾರ್ಮ್‌ನಲ್ಲಿದ್ದಾರೆ. ಹೀಗಾಗಿ, ಮುಂಬರುವ ಐಪಿಎಲ್‌ನಲ್ಲಿ ಗುಜರಾತ್ ಟೈಟಾನ್ಸ್ ತಂಡವನ್ನು ಮುನ್ನಡೆಸಲು ಅವರು ಸಿದ್ಧರಾಗಿದ್ದಾರೆ. ಈ ಹೊಸ ಪ್ರಯಾಣವನ್ನು ಪ್ರಾರಂಭಿಸಲಿರುವ ಗಿಲ್‌ಗೆ ಆಲ್ ದಿ ಬೆಸ್ಟ್ ಎಂದು ಗುಜರಾತ್ ತಂಡ ಎಕ್ಸ್ ಮೂಲಕ ಪೋಸ್ಟ್ ಮಾಡಿ ಅಭಿನಂದನೆ ಸಲ್ಲಿಸಿದೆ.
ಇದಕ್ಕೆ ಪ್ರತಿಕ್ರಿಯಿಸಿದ ಗಿಲ್, ಗುಜರಾತ್ ಟೈಟಾನ್ಸ್ ತಂಡದ ನಾಯಕನಾಗಿರುವುದಕ್ಕೆ ಹೆಮ್ಮೆ ಇದೆ. ನಾಯಕತ್ವದ ಜವಾಬ್ದಾರಿ ವಹಿಸಿದ್ದಕ್ಕಾಗಿ ಟೀಮ್ ಮ್ಯಾನೇಜ್‌ಮೆಂಟ್‌ಗೆ ಧನ್ಯವಾದಗಳು. ಎರಡು ಸೀಸನ್‌ಗಳಲ್ಲಿ ಆಡಿದ ಅನುಭವದೊಂದಿಗೆ ತಂಡವನ್ನು ಮುನ್ನಡೆಸುತ್ತೇನೆ ಎಂದು ಹೇಳಿದ್ದಾರೆ.
ಶುಭ್ಮನ್ ಗಿಲ್ 24ನೇ ವಯಸ್ಸಿನಲ್ಲಿ ಐಪಿಎಲ್ ತಂಡದ ಸಾರಥ್ಯ ಪಡೆಯಲಿದ್ದಾರೆ. ಈ ಅನುಕ್ರಮದಲ್ಲಿ, ಅವರು ಐಪಿಎಲ್‌ನಲ್ಲಿ ಕಿರಿಯ ವಯಸ್ಸಿನಲ್ಲಿ ನಾಯಕತ್ವ ವಹಿಸಿದ ಆಟಗಾರರ ಪಟ್ಟಿಯಲ್ಲಿ ಅಗ್ರ 10ರೊಳಗೆ ಸೇರಿಕೊಂಡಿದ್ದಾರೆ. ಈ ಪಟ್ಟಿಯಲ್ಲಿ ರನ್ ಮಷಿನ್ ವಿರಾಟ್ ಕೊಹ್ಲಿ ಅತ್ಯಂತ ಕಿರಿಯ ನಾಯಕ ಎಂಬ ದಾಖಲೆ ಬರೆದಿದ್ದಾರೆ.
ಕಿರಿಯ ವಯಸ್ಸಿನಲ್ಲಿ ಕ್ಯಾಪ್ಟನ್‌ಶಿಪ್: ಅಗ್ರ 10 ಆಟಗಾರರು ಯಾರು?
ಕ್ರಮ ಸಂಖ್ಯೆ
ಆಟಗಾರರ ಹೆಸರು
ವಯಸ್ಸು
ತಂಡಗಳು
ವರ್ಷ
1
ವಿರಾಟ್ ಕೊಹ್ಲಿ
22 ವರ್ಷ
ರಾಯಲ್ ಚಾಲೆಂಜರ್ಸ್ ಬೆಂಗಳೂರು
2011
2
ಸ್ಟೀವ್ ಸ್ಮಿತ್
22 ವರ್ಷ
ಪುಣೆ ವಾರಿಯರ್ಸ್ ಇಂಡಿಯಾ
2012
3
ಸುರೇಶ್ ರೈನಾ
23 ವರ್ಷ
ಚೆನ್ನೈ ಸೂಪರ್ ಕಿಂಗ್ಸ್
2010
4
ಶ್ರೇಯಸ್ ಅಯ್ಯರ್
23 ವರ್ಷ
ದೆಹಲಿ ಕ್ಯಾಪಿಟಲ್ಸ್
2018
5
ರಿಷಭ್ ಪಂತ್
23 ವರ್ಷ
ದೆಹಲಿ ಕ್ಯಾಪಿಟಲ್ಸ್
2021
6
ರಶೀದ್ ಖಾನ್
23 ವರ್ಷ
ಗುಜರಾತ್ ಟೈಟಾನ್ಸ್
2022
7
ದಿನೇಶ್ ಕಾರ್ತಿಕ್
24 ವರ್ಷ
ದೆಹಲಿ ಕ್ಯಾಪಿಟಲ್ಸ್
2010
8
ಸ್ಯಾಮ್ ಕರಣ್
24 ವರ್ಷ
ಪಂಜಾಬ್ ಕಿಂಗ್ಸ್
2023
9
ಶುಭ್ಮನ್ ಗಿಲ್
24 ವರ್ಷ
ಗುಜರಾತ್ ಟೈಟಾನ್ಸ್
2024
ಮುಂಬರುವ ಐಪಿಎಲ್ ಟೂರ್ನಿ ಆರಂಭಕ್ಕೂ ಮುನ್ನ 10 ತಂಡಗಳು ತಮ್ಮ ಆಟಗಾರರನ್ನು ಉಳಿಸಿಕೊಂಡಿರುವ ಪಟ್ಟಿಯನ್ನು ಭಾನುವಾರ ಬಿಡುಗಡೆ ಮಾಡಿದ್ದವು. ಇದರಲ್ಲಿ ಸಾಕಷ್ಟು ಸ್ಟಾರ್ ಆಟಗಾರರನ್ನು ತಂಡಗಳು ಕೈ ಬಿಟ್ಟಿದ್ದು, ಅವರು ಹರಾಜು ಪ್ರಕ್ರಿಯೆಯಲ್ಲಿದ್ದಾರೆ. ಈ ನಡುವೆ ಹಾರ್ದಿಕ್ ಪಾಂಡ್ಯ ಮರಳಿ ಮುಂಬೈ ಇಂಡಿಯನ್ಸ್ ಸೇರಿದ್ದಾರೆ. ಹೀಗಾಗಿ ಭಾರತದ ಆರಂಭಿಕ ಬ್ಯಾಟರ್ ಶುಭ್ಮಮನ್ ಗಿಲ್ ಅವರನ್ನು ಗುಜರಾತ್ ಟೈಟಾನ್ಸ್ ನಾಯಕನಾಗಿ ನೇಮಿಸಿತು.