ಕರ್ನಾಟಕ

karnataka

ETV Bharat / sports

ನಾಲ್ಕನೇ ಕ್ರಮಾಂಕದ ಬ್ಯಾಟಿಂಗ್​ಗೆ ವಿರಾಟ್ ಕೊಹ್ಲಿ​ ಫಿಟ್​ ಅಂಡ್​​ ಪರ್ಫೆಕ್ಟ್​ ಆಗಿದ್ದಾರೆ: ಮಿಸ್ಟರ್​ 360 - 4ನೇ ಕ್ರಮಾಂಕದಲ್ಲಿ ವಿರಾಟ್ ಕೊಹ್ಲಿ

ಭಾರತ ತಂಡದ ಮಾಜಿ ನಾಯಕ ವಿರಾಟ್ ಕೊಹ್ಲಿ ನಾಲ್ಕನೇ ಕ್ರಮದಲ್ಲಿ ಆಡಲು ಫಿಟ್ ಆಗಿದ್ದಾರೆ. ಅವರು ಮಧ್ಯಮ ಕ್ರಮಾಂಕದಲ್ಲಿ ಯಾವುದೇ ಪಾತ್ರವನ್ನು ವಹಿಸಬಹುದು ಎಂದು ಎಬಿ ಡಿವಿಲಿಯರ್ಸ್ ಹೇಳಿದ್ದಾರೆ.

Virat Kohli is perfect  AB de Villiers on India No 4  2023 World Cup  ನಾಲ್ಕನೇ ಕ್ರಮಾಂಕದ ಬ್ಯಾಟಿಂಗ್  ವಿರಾಟ್ ಕೊಹ್ಲಿ​ ಫಿಟ್​ ಆ್ಯಂಡ್​ ಪರ್ಫೆಕ್ಟ್​ ವಭಾರತ ತಂಡದ ಮಾಜಿ ನಾಯಕ ವಿರಾಟ್ ಕೊಹ್ಲಿ  ವಿರಾಟ್ ಕೊಹ್ಲಿ ನಾಲ್ಕನೇ ಕ್ರಮದಲ್ಲಿ ಆಡಲು ಫಿಟ್  ಭಾರತ ತಂಡದ ಮಾಜಿ ನಾಯಕ ವಿರಾಟ್ ಕೊಹ್ಲಿ  ಏಷ್ಯಾಕಪ್ ಮತ್ತು ವಿಶ್ವಕಪ್‌ಗೂ ಮುನ್ನ ಟೀಂ ಇಂಡಿಯಾ  ಟೀಂ ಇಂಡಿಯಾ ಬ್ಯಾಟಿಂಗ್ ನಾಲ್ಕನೇ ಸ್ಥಾನದ ಬಗ್ಗೆ ಚರ್ಚೆ  ಎಬಿ ಡಿವಿಲಿಯರ್ಸ್ 360  4ನೇ ಕ್ರಮಾಂಕದಲ್ಲಿ ವಿರಾಟ್ ಕೊಹ್ಲಿ  ಆಲೂರಿನಲ್ಲಿ ಟೀಂ ಇಂಡಿಯಾದ ಪ್ರ್ಯಾಕ್ಟಿಸ್​
ಮಿಸ್ಟರ್​ 360

By ETV Bharat Karnataka Team

Published : Aug 26, 2023, 1:04 PM IST

ಮುಂಬೈ, ಮಹಾರಾಷ್ಟ್ರ: ಏಷ್ಯಾಕಪ್ ಮತ್ತು ವಿಶ್ವಕಪ್‌ಗೂ ಮುನ್ನ ಟೀಂ ಇಂಡಿಯಾ ಬ್ಯಾಟಿಂಗ್ ನಾಲ್ಕನೇ ಸ್ಥಾನದ ಬಗ್ಗೆ ಚರ್ಚೆ ನಡೆಯುತ್ತಿದೆ. ಶ್ರೇಯಸ್ ಅಯ್ಯರ್ ಮತ್ತು ಕೆಎಲ್ ರಾಹುಲ್ ಗಾಯಗೊಂಡ ನಂತರ ಸೂರ್ಯಕುಮಾರ್ ಯಾದವ್ ಸೇರಿದಂತೆ ಅನೇಕ ಬ್ಯಾಟ್ಸ್‌ಮನ್‌ಗಳನ್ನು ಈ ಸ್ಥಾನದಲ್ಲಿ ಪ್ರಯತ್ನಿಸಲಾಯಿತು. ಆದರೆ, ಯಾವುದೇ ಬ್ಯಾಟ್ಸ್‌ಮನ್ ಯಶಸ್ವಿಯಾಗಲಿಲ್ಲ. ಇಂತಹ ಪರಿಸ್ಥಿತಿಯಲ್ಲಿ ಹಲವು ಮಾಜಿ ಆಟಗಾರರು ಕೂಡ ವಿರಾಟ್ ಕೊಹ್ಲಿಯನ್ನು ಈ ಸ್ಥಾನದಲ್ಲಿ ಆಡಿಸಬೇಕು ಎಂದು ಸಲಹೆ ನೀಡಿದ್ದಾರೆ.

ಶ್ರೇಯಸ್ ಅಯ್ಯರ್ ಮತ್ತು ಕೆಎಲ್ ರಾಹುಲ್ ಏಷ್ಯಾಕಪ್ ತಂಡದಲ್ಲಿ ಆಯ್ಕೆಯಾಗಿದ್ದಾರೆ. ಇದಾದ ನಂತರವೂ ಈ ಬ್ಯಾಟಿಂಗ್ ಸ್ಥಾನದ ಬಗ್ಗೆ ಚರ್ಚೆ ಮುಂದುವರಿದಿದೆ. ಇದೀಗ ದಕ್ಷಿಣ ಆಫ್ರಿಕಾದ ಮಾಜಿ ಅನುಭವಿ ಆಟಗಾರ ಹಾಗೂ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್)ನಲ್ಲಿ ವಿರಾಟ್ ಕೊಹ್ಲಿ ಜೊತೆಗಾರ ಎಬಿ ಡಿವಿಲಿಯರ್ಸ್ ಟೀಂ ಇಂಡಿಯಾಗೆ ಸಲಹೆವೊಂದನ್ನು ನೀಡಿದ್ದಾರೆ. ಮಿಸ್ಟರ್ 360 ಡಿಗ್ರಿ ಕೊಹ್ಲಿಗೆ ಈ ಕ್ರಮದಲ್ಲಿ ಬ್ಯಾಟಿಂಗ್​ ಮಾಡಲು ಅವಕಾಶ ನೀಡಬೇಕು ಎಂದು ಹೇಳಿದ್ದಾರೆ.

ತಮ್ಮ ಯೂಟ್ಯೂಬ್ ಚಾನೆಲ್ ‘ಎಬಿ ಡಿವಿಲಿಯರ್ಸ್ 360’ಯಲ್ಲಿ ಮಾತನಾಡಿದ ಅವರು, ನಾವು ನಂ.4 ಕ್ರಮಾಂಕದ ಬ್ಯಾಟ್ಸ್‌ಮನ್ ಯಾರು ಎಂಬುದರ ಕುರಿತು ಮಾತನಾಡುತ್ತಿದ್ದೇವೆ. ಈ ಸ್ಥಾನದಲ್ಲಿ ವಿರಾಟ್ ಆಡುವುದನ್ನು ಕೇಳಿದ್ದೇನೆ. ನಾನು ವಿರಾಟ್​ನ ದೊಡ್ಡ ಅಭಿಮಾನಿ. ನನ್ನ ಪ್ರಕಾರ ವಿರಾಟ್ ನಂ.4ರಲ್ಲಿ ಆಡುವ ಪರಿಪೂರ್ಣ ಬ್ಯಾಟ್ಸ್‌ಮನ್. ಅವರು ಮಧ್ಯಮ ಕ್ರಮಾಂಕದಲ್ಲಿ ಯಾವುದೇ ಪಾತ್ರವನ್ನು ವಹಿಸಬಹುದು. ಕೊಹ್ಲಿ ಅವರು ಸಂಖ್ಯೆ 3 ಅನ್ನು ಇಷ್ಟಪಡುತ್ತಾರೆ ಎಂದು ನಮಗೆ ತಿಳಿದಿದೆ. ಅವರು ಆ ಸ್ಥಾನದಲ್ಲಿ ಸಾಕಷ್ಟು ರನ್ ಗಳಿಸಿದ್ದಾರೆ ಎಂದು ಹೇಳಿದರು.

4ನೇ ಕ್ರಮಾಂಕದಲ್ಲಿ ವಿರಾಟ್ ಕೊಹ್ಲಿ ಅವರ ದಾಖಲೆ ಉತ್ತಮವಾಗಿದೆ. ಅವರು ತಮ್ಮ 46 ODI ಶತಕಗಳಲ್ಲಿ ಏಳನ್ನು ಈ ಸ್ಥಾನದಲ್ಲಿ ಗಳಿಸಿದ್ದಾರೆ. ಅವರು 39 ಇನ್ನಿಂಗ್ಸ್‌ಗಳಲ್ಲಿ 55.21 ಸರಾಸರಿ ಮತ್ತು 90.66 ಸ್ಟ್ರೈಕ್ ರೇಟ್‌ನಲ್ಲಿ 1767 ರನ್ ಕಲೆ ಹಾಕಿದ್ದಾರೆ. ಆದರೆ, ಮೂರು ವರ್ಷಗಳ ಹಿಂದೆ ಮುಂಬೈನಲ್ಲಿ ನಡೆದ ಆಸ್ಟ್ರೇಲಿಯಾ ವಿರುದ್ಧದ ಏಕದಿನ ಪಂದ್ಯದಲ್ಲಿ ಅವರು ಕೊನೆಯದಾಗಿ ನಾಲ್ಕನೇ ಕ್ರಮಾಂಕದಲ್ಲೇ ಬ್ಯಾಟಿಂಗ್ ಮಾಡಿದ್ದರು.

ಶ್ರೇಯಸ್ ಅಯ್ಯರ್​ಗೆ ಬೆನ್ನು ನೋವು ಮತ್ತು ಕೆಎಲ್ ರಾಹುಲ್ ಅವರಿಗೆ ತೊಡೆ ಭಾಗದಲ್ಲಿ ಗಾಯಗೊಂಡಿದ್ದಾರೆ. ಹೀಗಾಗಿ ಇವರ ಬದಲಿಗೆ ವಿರಾಟ್ ಕೊಹ್ಲಿಯನ್ನು ನಂ.4 ಸ್ಥಾನಕ್ಕೆ ಇಳಿಸಬೇಕೆ ಎಂಬ ಚರ್ಚೆಗೆ ಕಾರಣವಾಗಿದೆ. ಏಷ್ಯಾಕಪ್‌ಗೆ ಇಬ್ಬರೂ ಆಟಗಾರರು ಆಯ್ಕೆಯಾಗಿದ್ದಾರೆ. ರಾಹುಲ್ ಏಷ್ಯಾಕಪ್‌ನಲ್ಲಿ ಒಂದೆರಡು ಪಂದ್ಯಗಳಿಂದ ಹೊರಗುಳಿಯಬಹುದು. ಸದ್ಯಕ್ಕೆ ಶ್ರೇಯಸ್ ಅಯ್ಯರ್ 4ನೇ ಕ್ರಮಾಂಕದಲ್ಲಿ ಆಡುವ ಸೂಚನೆ ಇದೆ. ಮಾಹಿತಿಯ ಪ್ರಕಾರ, ಬೆನ್ನಿನ ಶಸ್ತ್ರಚಿಕಿತ್ಸೆ ಮತ್ತು ಪುನರ್ವಸತಿ ನಂತರ ಶ್ರೇಯಸ್ ಅಯ್ಯರ್ ನೋವು ಮುಕ್ತರಾಗಿದ್ದು, ಫಿಟ್ನೆಸ್ ಪರೀಕ್ಷೆಯಲ್ಲಿ ಪಾಸ್​ ಆಗಿದ್ದಾರೆ.

ಏಷ್ಯಾಕಪ್‌ಗೂ ಮುನ್ನ ಆಲೂರಿನಲ್ಲಿ ಟೀಂ ಇಂಡಿಯಾದ ಪ್ರ್ಯಾಕ್ಟಿಸ್​ ನಡೆಯುತ್ತಿದೆ. ಶುಕ್ರವಾರ ಎರಡನೇ ದಿನವಾದ ಪಂದ್ಯದಲ್ಲಿ ಶ್ರೇಯಸ್ ಅಯ್ಯರ್ ನೆಟ್​ನಲ್ಲಿ 90 ನಿಮಿಷಗಳ ಕಾಲ ಬ್ಯಾಟಿಂಗ್ ಮಾಡಿದರು. ಈ ಸಮಯದಲ್ಲಿ ಅವರು ಸ್ಪಿನ್ ಮತ್ತು ವೇಗದ ಬೌಲರ್‌ಗಳನ್ನು ಎದುರಿಸಿದರು. ಟೀಂ ಇಂಡಿಯಾದ ಟಾಪ್-5 ಬ್ಯಾಟ್ಸ್‌ಮನ್‌ಗಳಾದ ಶುಭಮನ್ ಗಿಲ್, ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್ ಮತ್ತು ಕೆಎಲ್ ರಾಹುಲ್ ಸುದೀರ್ಘ ಬ್ಯಾಟಿಂಗ್ ನಡೆಸಿದರು. ಆದರೆ, ರಾಹುಲ್ ವಿಕೆಟ್ ಕೀಪಿಂಗ್ ಮಾಡಿರಲಿಲ್ಲ.

ಓದಿ:Asia Cup 2023: ಕಿಂಗ್​ ಅಂಕ ಮೀರಿದ ಪ್ರಿನ್ಸ್​.. ಯೋ - ಯೋ ಟೆಸ್ಟ್​ನಲ್ಲಿ ಶುಭಮನ್​ ಗಿಲ್​ ಟಾಪರ್​​

ABOUT THE AUTHOR

...view details