ನವದೆಹಲಿ: ಇಂಡಿಯನ್ ಪ್ರೀಮಿಯರ್ ಲೀಗ್ 2023 ಮುಂದಿನ ವಾರದಿಂದ ಪ್ರಾರಂಭವಾಗಲಿದೆ. ಈ ವೇಳೆ ಕ್ರಿಕೆಟ್ ಪ್ರೇಮಿಗಳು ಬೌಂಡರಿ ಮತ್ತು ಸಿಕ್ಸರ್‌ಗಳು ಮೈದಾನ ತುಂಬಾ ಮನರಂಜನೆ ನೀಡಲಿದೆ. ಈ ಬಾರಿ ಟಾಟಾ ಐಪಿಎಲ್ ಪ್ರಾಯೋಜಕತ್ವ ವಹಿಸಿಕೊಂಡಿದೆ. ಐಪಿಎಲ್ 16ನೇ ಆವೃತ್ತಿಯಲ್ಲಿ 10 ತಂಡಗಳ ನಡುವೆ ಒಟ್ಟು 74 ಪಂದ್ಯಗಳು ನಡೆಯಲಿವೆ. ಈ ಐಪಿಎಲ್ ಸೀಸನ್‌ನಲ್ಲಿ ಮತ್ತೊಮ್ಮೆ ವಿರಾಟ್ ಕೊಹ್ಲಿ ದಾಖಲೆ ಮುರಿಯಲು ಆಟಗಾರರ ನಡುವೆ ಹೋರಾಟ ನಡೆಯಲಿದ್ದು, ಇದಕ್ಕಾಗಿ 2016ರಿಂದ ಹಲವು ದೇಶಿ ಹಾಗೂ ವಿದೇಶಿ ಆಟಗಾರರು ಪ್ರಯತ್ನಿಸುತ್ತಿದ್ದರೂ ಅದರ ಸನಿಹಕ್ಕೆ ಬರಲು ಸಾಧ್ಯವಾಗಿಲ್ಲ.
ಈ ಬಾರಿ ಐಪಿಎಲ್ನಲ್ಲಿ ನಡೆಯುವ ಪಂದ್ಯದಲ್ಲಿ ವಿರಾಟ್ ಕೊಹ್ಲಿ ದಾಖಲೆ ಮುರಿಯುವ ಸವಾಲು ಆಟಗಾರರಿಗೆ ಎದುರಾಗಲಿದ್ದು, ಇದಕ್ಕಾಗಿ ಹಲವು ಅನುಭವಿ ಆಟಗಾರರು ಪಟ್ಟು ಹಿಡಿದಿದ್ದರೂ ಇಲ್ಲಿಯವರೆಗೂ ಆ ದಾಖಲೆ ಮುರಿದಿಲ್ಲ. ಕಳೆದ ಬಾರಿ ಜೋಸ್ ಬಟ್ಲರ್ ಈ ದಾಖಲೆಗೆ ಹತ್ತಿರವಾಗಲು ಪ್ರಯತ್ನಿಸುತ್ತಿದ್ದರು. ಇದಕ್ಕೂ ಮುನ್ನ ಹಲವು ಆಟಗಾರರು ಇದನ್ನು ಮುರಿಯಲು ವಿಫಲರಾಗಿದ್ದರು.
2016ರ ದಾಖಲೆ:ಐಪಿಎಲ್ 2016ರ ಋತುವಿನಲ್ಲಿ ವಿರಾಟ್ ಕೊಹ್ಲಿ 973 ರನ್ ಗಳಿಸಿ, ಒಂದೇ ಐಪಿಎಲ್ ಸೀಸನ್‌ನಲ್ಲಿ ಅತಿ ಹೆಚ್ಚು ರನ್ ಗಳಿಸಿದ ದಾಖಲೆ ಮಾಡಿದ್ದಾರೆ. 2016 ರಿಂದ ಈ ದಾಖಲೆಯನ್ನು ಯಾವುದೇ ಆಟಗಾರ ಮುರಿದಿಲ್ಲ. 2018ರಲ್ಲಿ ಕೇನ್ ವಿಲಿಯಮ್ಸನ್, 2016ರಲ್ಲಿ ಡೇವಿಡ್ ವಾರ್ನರ್ ಹಾಗೂ 2022ರಲ್ಲಿ ಜೋಸ್ ಬಟ್ಲರ್ ಇದಕ್ಕಾಗಿ ತಮ್ಮ ಕೈಲಾದಷ್ಟು ಪ್ರಯತ್ನಿಸಿದ್ದರೂ ಈ ಎಲ್ಲ ಆಟಗಾರರಿಗೂ ಕೊಹ್ಲಿ ದಾಖಲೆಯ ಸನಿಹಕ್ಕೆ ಬರಲು ಸಾಧ್ಯವಾಗಲಿಲ್ಲ.