ಮುಂಬೈ:ಭಾರತ ಟೆಸ್ಟ್ ತಂಡದ ನಾಯಕ ವಿರಾಟ್ ಕೊಹ್ಲಿ ದಕ್ಷಿಣ ಆಫ್ರಿಕಾ ವಿರುದ್ಧದ ಏಕದಿನ ಸರಣಿಗೆ ತಾವೂ ಅಲಭ್ಯರಾಗುವುದಾಗಿ ಇದುವರೆಗೂ ಔಪಚಾರಿಕವಾಗಿ ಎಲ್ಲೂ ಹೇಳಿಲ್ಲ ಎಂದು ಬಿಸಿಸಿಐ ಅಧಿಕಾರಿ ಸ್ಪಷ್ಟನೆ ನೀಡಿದ್ದಾರೆ.
ರೋಹಿತ್ ಶರ್ಮಾ ಟೆಸ್ಟ್ ಸರಣಿಯಿಂದ ಗಾಯಗೊಂಡು ಹೊರಬಿದ್ದ ಬೆನ್ನಲ್ಲೇ ಟೆಸ್ಟ್ ತಂಡದ ನಾಯಕ ವಿರಾಟ್ ತಾವೂ ಏಕದಿನ ಸರಣಿಯ ವೇಳೆ ಆಯ್ಕೆಗೆ ಲಭ್ಯರಿರುವುದಿಲ್ಲ ಎಂದು ಮನವಿ ಮಾಡಿದ್ದಾರೆ ಎಂಬ ವರದಿಗಳು ಭಾರಿ ಸದ್ದು, ಮಾಡಿದ್ದು, ಇದರಿಂದ ರೋಹಿತ್ ಮತ್ತು ವಿರಾಟ್ ಕೊಹ್ಲಿ ನಡುವೆ ಬಿರುಕು ಮೂಡಿದೆ ಎಂಬ ಅನುಮಾನ ಮೂಡಿತ್ತು.
ಇಲ್ಲಿಯವರೆಗೆ ವಿರಾಟ್ ಕೊಹ್ಲಿ ತಾವು ಏಕದಿನ ಸರಣಿಯನ್ನು ಆಡದಿರುವುದರ ಕುರಿತು ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಅಥವಾ ಕಾರ್ಯದರ್ಶಿ ಜಯ್ ಶಾ ಅವರಿಗೆ ಯಾವುದೇ ರೀತಿಯ ಔಪಚಾರಿಕ ವಿನಂತಿ ಮನವಿಯನ್ನು ಮಾಡಿಲ್ಲ. ಆದರೆ, ಮುಂದೆ ಏನಾದರೂ ಅವರು ನಿರ್ಧರಿಸಿದರೆ ಅಥವಾ ಗಾಯಗೊಂಡರೆ ಹೊರಗುಳಿಯಬಹುದಷ್ಟೇ ಎಂದು ಬಿಸಿಸಿಐ ಅಧಿಕಾರಿಯೊಬ್ಬರು ಪಿಟಿಐಗೆ ಮಾಹಿತಿ ನೀಡಿದ್ದಾರೆ.