ಕರ್ನಾಟಕ

karnataka

ETV Bharat / sports

ಶತಕದ ನಿರೀಕ್ಷೆಯಲ್ಲಿದ್ದ ಅಭಿಮಾನಿಗಳಿಗೆ ಮತ್ತೆ ನಿರಾಶೆ: 51ರನ್​ಗಳಿಸಿ ಕೊಹ್ಲಿ ಔಟ್​ - ವಿರಾಟ್ ಕೊಹ್ಲಿ ಅರ್ಧಶತಕ

ಕಳೆದ ಎರಡು ವರ್ಷಗಳಿಂದ ಶತಕದ ಬರ ಎದುರಿಸುತ್ತಿರುವ ವಿರಾಟ್​ ಕೊಹ್ಲಿ ಈ ಪಂದ್ಯದಲ್ಲಿ ಪಡೆದ ಆರಂಭ ನೋಡಿ ಈ ಪಂದ್ಯದಲ್ಲಾದರೂ ಶತಕ ಸಿಡಿಸಬಹುದೆಂದು ನಿರೀಕ್ಷೆ ಮಾಡಲಾಗಿತ್ತು. ಆದರೆ ವಿರಾಟ್​ 63 ಎಸೆತಗಳಲ್ಲಿ 3 ಬೌಂಡರಿ ಸಹಿತ 51 ರನ್​ಗಳಿಸಿ ಶಮ್ಸಿ ಬೌಲಿಂಗ್​ನಲ್ಲಿ ಬವೂಮಗೆ ಕ್ಯಾಚ್ ನೀಡಿ ಔಟಾಗುವ ಮೂಲಕ ನಿರಾಶೆ ಮೂಡಿಸಿದರು. ಶತಕದ ನಿರೀಕ್ಷೆಯಲ್ಲಿ ಕಾಯುತ್ತಿದ್ದ ಅಭಿಮಾನಿಗಳು ಮತ್ತೆ ಕಾಯುವಂತಾಯಿತು.

Virat Kohli got out after cross fifty against SA in Frits ODI
ವಿರಾಟ್ ಕೊಹ್ಲಿ

By

Published : Jan 19, 2022, 9:19 PM IST

ಪಾರ್ಲ್​( ದಕ್ಷಿಣ ಆಫ್ರಿಕಾ):ದಕ್ಷಿಣ ಅಫ್ರಿಕಾ ವಿರುದ್ಧ ಉತ್ತಮ ಲಯದಲ್ಲಿ ಆಡುತ್ತಿದ್ದ ವಿರಾಟ್​ ಕೊಹ್ಲಿ ಈ ಪಂದ್ಯದಲ್ಲಿ ಶತಕ ಸಿಡಿಸಬಹುದು ಎಂದು ಉತ್ಸಾಹದಿಂದ ಕಾಯುತ್ತಿದ್ದ ಭಾರತೀಯ ಅಭಿಮಾನಿಗಳಿಗೆ ಮತ್ತೊಮ್ಮೆ ನಿರಾಶೆಯಾಗಿದೆ.

ಪಾರ್ಲ್​ನ ಬೋಲೆಂಡ್​ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಮೊದಲ ಏಕದಿನ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಅತಿಥೇಯ ದಕ್ಷಿಣ ಆಫ್ರಿಕಾ ತಂಡ 4 ವಿಕೆಟ್ ಕಳೆದುಕೊಂಡು 296 ರನ್​ಗಳಿಸಿತ್ತು. ಬವೂಮ 110(143 ಎಸೆತ) ಮತ್ತು ವ್ಯಾನ್ ಡರ್ ಡಸೆನ್​ 129(96) ರನ್​ಗಳಿಸಿದ್ದರು.

ಇನ್ನು 297 ರನ್​ಗಳ ಸ್ಪರ್ಧಾತ್ಮಕ ಗುರಿಯನ್ನು ಬೆನ್ನತ್ತಿದ ಭಾರತ ತಂಡ ರಾಹುಲ್​(12) ವಿಕೆಟ್ ಕಳೆದುಕೊಂಡು ಆರಂಭಿಕ ಹಿನ್ನಡೆ ಅನುಭವಿಸಿತು. ಆದರೆ 2ನೇ ವಿಕೆಟ್​ಗೆ 92 ರನ್​ಗಳ ಜೊತೆಯಾಟ ನೀಡುವ ಮೂಲಕ ಕೊಹ್ಲಿ ಮತ್ತು ಧವನ್​ ಚೇತರಿಕೆ ನೀಡಿದ್ದರು.

ಕಳೆದ ಎರಡು ವರ್ಷಗಳಿಂದ ಶತಕದ ಬರ ಎದುರಿಸುತ್ತಿರುವ ವಿರಾಟ್​ ಕೊಹ್ಲಿ ಈ ಪಂದ್ಯದಲ್ಲಿ ಪಡೆದ ಆರಂಭ ನೋಡಿ ಈ ಪಂದ್ಯದಲ್ಲಾದರೂ ಶತಕ ಸಿಡಿಸಬಹುದೆಂದು ನಿರೀಕ್ಷೆ ಮಾಡಲಾಗಿತ್ತು. ಆದರೆ ವಿರಾಟ್​ 63 ಎಸೆತಗಳಲ್ಲಿ 3 ಬೌಂಡರಿ ಸಹಿತ 51 ರನ್​ಗಳಿಸಿ ಶಮ್ಸಿ ಬೌಲಿಂಗ್​ನಲ್ಲಿ ಬವೂಮಗೆ ಕ್ಯಾಚ್ ನೀಡಿ ಔಟಾಗುವ ಮೂಲಕ ನಿರಾಶೆ ಮೂಡಿಸಿದರು. ಶತಕದ ನಿರೀಕ್ಷೆಯಲ್ಲಿ ಕಾಯುತ್ತಿದ್ದ ಅಭಿಮಾನಿಗಳು ಮತ್ತೆ ಕಾಯುವಂತಾಯಿತು.

ಆರು ವರ್ಷಗಳ ಕಾಲ ನಾಯಕನಾಗಿದ್ದ ಕೊಹ್ಲಿ 2016ರ ನಂತರ ಕೇವಲ ಬ್ಯಾಟ್ಸ್​ಮನ್​ ಆಗಿ ಮೊದಲ ಪಂದ್ಯವನ್ನಾಡಿ, ಅರ್ಧಶತಕ ಸಾಧನೆ ಮಾಡಿದರು. ಏಕದಿನ ತಂಡಕ್ಕೆ ಕಮ್​ಬ್ಯಾಕ್ ಮಾಡಿದ್ದ ಶಿಖರ್ ಧವನ್​ 84 ಎಸೆತಗಳಲ್ಲಿ 10 ಬೌಂಡರಿ ಸಹಿತ 79 ರನ್​ಗಳಿಸಿ ಕೇಶವ್ ಮಹಾರಾಜ್ ಬೌಲಿಂಗ್​ನಲ್ಲಿ ಬೌಲ್ಡ್ ಆದರು.

23 ನವೆಂಬರ್​ 2019ರಲ್ಲಿ ಕೋಲ್ಕತ್ತಾದಲ್ಲಿ ನಡೆದಿದ್ದ ಡೇ ಅಂಡ್ ನೈಟ್​ ಟೆಸ್ಟ್ ಪಂದ್ಯದಲ್ಲಿ ಕೊನೆಯ ಬಾರಿ ಶತಕ ಸಿಡಿಸಿದ್ದರು. ಏಕದಿನ ಕ್ರಿಕೆಟ್​ನಲ್ಲಿ 2019ರ ಜೂನ್​ನಲ್ಲಿ ವೆಸ್ಟ್ ಇಂಡೀಸ್ ವಿರುದ್ಧ 114 ರನ್​ಗಳಿಸಿದ್ದರು. ಕಳೆದ 63 ಇನ್ನಿಂಗ್ಸ್​ಗಳಿಂದ ವಿರಾಟ್​ ಕೊಹ್ಲಿ ಮೂರಂಕಿ ದಾಟುವಲ್ಲಿ ವಿಫಲರಾಗುತ್ತಿದ್ದಾರೆ.

ಇದನ್ನೂ ಓದಿ:Ind vs SA ODI: ಸಚಿನ್, ದ್ರಾವಿಡ್,ಗಂಗೂಲಿ ದಾಖಲೆಗಳನ್ನು ಬ್ರೇಕ್ ಮಾಡಿದ ಕಿಂಗ್ ಕೊಹ್ಲಿ

ABOUT THE AUTHOR

...view details