ಕರ್ನಾಟಕ

karnataka

ETV Bharat / sports

ವಿರಾಟ್​ ಕೊಹ್ಲಿಯ ಸ್ಟೈಲಿಶ್​ ಹೇರ್​ಸ್ಟೈಲ್​ಗೆ ಅಭಿಮಾನಿಗಳು ಫಿದಾ.. ನೀವೂ ನೋಡಿ - ETV bharat kannada news

ವಿರಾಟ್​ ಕೊಹ್ಲಿ ಫ್ಯಾಷನ್​ ಕ್ರಿಕೆಟಿಗ. ಅವರ ಉಡುಗೆ ತೊಡುಗೆ, ಹೇರ್​ಸ್ಟೈಲ್​ ಎಲ್ಲವೂ ಅನುಕರಣೀಯ. ಆಸ್ಟ್ರೇಲಿಯಾ ಸರಣಿಗಾಗಿ ಪಂಜಾಬ್​ಗೆ ಬಂದಿಳಿದ ವಿರಾಟ್​ರ ಕೂದಲ ಹೊಸ ವಿನ್ಯಾಸ ಅಭಿಮಾನಿಗಳ ಗಮನ ಸೆಳೆದಿದೆ.

virat-kohli-gets-stylish-haircut
ವಿರಾಟ್​ ಕೊಹ್ಲಿಯ ಸ್ಟೈಲಿಶ್​ ಹೇರ್​ಸ್ಟೈಲ್​ಗೆ ಅಭಿಮಾನಿಗಳು ಫಿದಾ

By

Published : Sep 18, 2022, 3:17 PM IST

ಬ್ಯಾಟಿಂಗ್ ಕಿಂಗ್ ವಿರಾಟ್​ ಕೊಹ್ಲಿ ಬ್ಯಾಟ್​ ಬೀಸಿದರೂ ಸುದ್ದಿ, ಬೀಸದಿದ್ದರೂ ಸುದ್ದಿಯಲ್ಲಿರುತ್ತಾರೆ. ಏಷ್ಯಾ ಕಪ್​ನಲ್ಲಿ ಭರ್ಜರಿ ಶತಕದ ಮೂಲಕ ಫಾರ್ಮ್​ಗೆ ಮರಳಿರುವ ವಿರಾಟ್​ ವಿಶ್ವಕಪ್​ ಸಿದ್ಧತೆಯಲ್ಲಿದ್ದಾರೆ. ಇದಕ್ಕೂ ಮೊದಲು ಆಸ್ಟ್ರೇಲಿಯಾ ವಿರುದ್ಧ ನಾಡಿದ್ದಿನಿಂದ ಶುರುವಾಗುವ ಟಿ20 ಸರಣಿಯಲ್ಲಿ ಪಾಲ್ಗೊಳ್ಳಲಿದ್ದಾರೆ.

ಆಸ್ಟ್ರೇಲಿಯಾ ಸರಣಿಯ ಮೊದಲ ಟಿ20 ಪಂದ್ಯ ಪಂಜಾಬ್​ನ ಮೊಹಾಲಿ ಕ್ರೀಡಾಂಗಣದಲ್ಲಿ ನಡೆಯಲಿದೆ. ಮೊಹಾಲಿ ವಿಮಾನ ನಿಲ್ದಾಣಕ್ಕೆ ಬಂದಿಳಿದಿರುವ ವಿರಾಟ್​ ಕೊಹ್ಲಿ ತಮ್ಮದೇ ಫ್ಯಾಷನ್​ನಿಂದಾಗಿ ಗಮನ ಸೆಳೆದಿದ್ದಾರೆ. ರನ್​ ಮಷಿನ್​ ಹೊಸ ಹೇರ್​ಸ್ಟೈಲ್​ನಲ್ಲಿ ಮಿಂಚಿದ್ದಾರೆ. ವಿಶ್ವಕಪ್​ಗೂ ಮೊದಲು ವಿರಾಟ್​ರ ಹೊಸ ಹೇರ್​ಸ್ಟ್ರೈಲ್​ ಅಭಿಮಾನಿಗಳ ಗಮನ ಸೆಳೆದಿದೆ.

ವಿರಾಟ್​ ಕೊಹ್ಲಿ ಮೊಹಾಲಿ ವಿಮಾನ ನಿಲ್ದಾಣದಲ್ಲಿ ಬಂದಿಳಿದ ವಿಡಿಯೋವನ್ನು ಪಂಜಾಬ್​ ಕ್ರಿಕೆಟ್​ ಸಂಸ್ಥೆ(ಪಿಸಿಎ) ತನ್ನ ಟ್ವಿಟ್ಟರ್​ನಲ್ಲಿ ಹಂಚಿಕೊಂಡಿದೆ. ಹೊಸ ಕೂದಲ ವಿನ್ಯಾಸದಲ್ಲಿ ವಿರಾಟ್​ ಮಿಂಚುತ್ತಿದ್ದು, ಸಾಮಾಜಿಕ ಜಾಲತಾಣದಲ್ಲಿ ಫೋಟೋಗಳು ವೈರಲ್​ ಆಗುತ್ತಿವೆ.

ಸೆಲೆಬ್ರಿಟಿ ಹೇರ್ ಸ್ಟೈಲಿಸ್ಟ್ ಆದ ರಶೀದ್ ಸಲ್ಮಾನಿ ಕೊಹ್ಲಿಯ ಕೂದಲಿಗೆ ಹೊಸ ಲುಕ್ ತಂದಿದ್ದಾರೆ. ಅದಕ್ಕೆ ಸಂಬಂಧಿಸಿದ ಫೋಟೋಗಳನ್ನು ರಶೀದ್​ ತಮ್ಮ ಇನ್‌ಸ್ಟಾಮ್​ನಲ್ಲಿ ಹಂಚಿಕೊಂಡಿದ್ದಾರೆ. ಈ ಫೋಟೋಗಳಿಗೆ ಅಭಿಮಾನಿಗಳು ತರಹೇವಾರಿಯಾಗಿ ಕಮೆಂಟ್​ ಮಾಡಿದ್ದು, ಮೆಚ್ಚಿಕೊಂಡಿದ್ದಾರೆ.

ಇತ್ತೀಚೆಗಷ್ಟೇ ಮುಕ್ತಾಯವಾದ ಏಷ್ಯಾಕಪ್​ನಲ್ಲಿ ರನ್ ಮಷಿನ್ ವಿರಾಟ್​ ಕೊಹ್ಲಿ 3 ವರ್ಷಗಳ ಬಳಿಕ ಅಂದರೆ 1020 ದಿನಗಳ ನಂತರ ಶತಕ ಬಾರಿಸಿ ಕಾಂಗರೂ ನಾಡಿನಲ್ಲಿ ನಡೆಯುವ ಟಿ20 ವಿಶ್ವಕಪ್​ಗೆ ತಾವು ರೆಡಿ ಎಂಬ ಸಂದೇಶ ರವಾನೆ ಮಾಡಿದ್ದಾರೆ.

71 ನೇ ಶತಕವನ್ನು ದಾಖಲಿಸುವ ಮೂಲಕ ಆಸ್ಟ್ರೇಲಿಯಾದ ದಿಗ್ಗಜ ಕ್ರಿಕೆಟಿಗ ರಿಕ್ಕಿ ಪಾಂಟಿಂಗ್​ ಅವರ 71 ಶತಕಗಳ ದಾಖಲೆಯನ್ನು ಸರಿಗಟ್ಟಿದ್ದರು. ವಿಶ್ವಕಪ್​ನಲ್ಲಿ ಇನ್ನೊಂದು ಶತಕ ಬಾರಿಸಿದರೂ ವಿಶ್ವ ಕ್ರಿಕೆಟ್​ನಲ್ಲಿ ಅತಿಹೆಚ್ಚು ಶತಕ ಬಾರಿಸಿದವರ ಪಟ್ಟಿಯಲ್ಲಿ 2 ನೇ ಸ್ಥಾನ ಸಂಪಾದಿಸಲಿದ್ದಾರೆ. ವಿರಾಟ್​ಗೂ ಮೊದಲು ಕ್ರಿಕೆಟ್​ ದೇವರು ಸಚಿನ್​ ತೆಂಡೂಲ್ಕರ್​ ಶತಕಗಳ ಶತಕ ಶಿಖರವಿದೆ.

ಓದಿ:'ಇಂಥ ನಾನ್ಸೆನ್ಸ್‌ ಶುರು ಮಾಡ್ಬೇಡಿ..' ಕೊಹ್ಲಿ ಬ್ಯಾಟಿಂಗ್‌ ಆರ್ಡರ್‌ ಬದಲಿಸುವ ವಿಚಾರಕ್ಕೆ ಗಂಭೀರ್ ಗರಂ

ABOUT THE AUTHOR

...view details