ರನ್ ಬರ ಎದುರಿಸುತ್ತಿರುವ ರನ್ಮಷಿನ್ ವಿರಾಟ್ ಕೊಹ್ಲಿ ಏಷ್ಯಾ ಕಪ್ ಟೂರ್ನಿಯಲ್ಲಿ ಲಯ ಕಂಡುಕೊಳ್ಳುವ ಮುನ್ಸೂಚನೆ ನೀಡಿದ್ದಾರೆ. ನಿನ್ನೆ ನಡೆದ ಹಾಂಗ್ಕಾಂಗ್ ವಿರುದ್ಧದ ಪಂದ್ಯದಲ್ಲಿ ಅರ್ಧಶತಕ ಗಳಿಸಿ ಮಿಂಚಿದರು. ಇದು ವಿರಾಟ್ರ 31ನೇ ಫಿಫ್ಟಿಯಾಗಿದೆ. ಈ ಮೂಲಕ ವಿರಾಟ್, ಹಿಟ್ಮ್ಯಾನ್ ರೋಹಿತ್ ಶರ್ಮಾ ಅವರೊಂದಿಗೆ ಅಂತಾರಾಷ್ಟ್ರೀಯ ಟಿ20ಯಲ್ಲಿ ಅತಿಹೆಚ್ಚು ಫಿಫ್ಟಿ ಬಾರಿಸಿದವರ ಪಟ್ಟಿಯಲ್ಲಿ ಜಂಟಿ ಅಗ್ರಸ್ಥಾನ ಪಡೆದರು.
101 ನೇ ಅಂತಾರಾಷ್ಟ್ರೀಯ ಟಿ20 ಪಂದ್ಯವಾಡಿದ ವಿರಾಟ್ ಕೊಹ್ಲಿ, 94 ಇನ್ನಿಂಗ್ಸ್‌ಗಳಲ್ಲಿ 31 ಅರ್ಧಶತಕಗಳನ್ನು ಬಾರಿಸಿದ್ದಾರೆ. ವೆಸ್ಟ್ ಇಂಡೀಸ್ ವಿರುದ್ಧ ಗಳಿಸಿದ 94* ಅವರ ಗರಿಷ್ಠ ಸ್ಕೋರ್ ಆಗಿದೆ. ಭಾರತ ತಂಡದ ನಾಯಕ ರೋಹಿತ್ ಶರ್ಮಾ 134 ಪಂದ್ಯಗಳಿಂದ 4 ಶತಕಗಳೊಂದಿಗೆ 31 ಅರ್ಧ ಶತಕಗಳನ್ನು ಚಚ್ಚಿದ್ದಾರೆ.