ನವದೆಹಲಿ :ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ದುಬೈನಲ್ಲಿ ಪತ್ನಿ ಅನುಷ್ಕಾ ಹಾಗೂ ಪುತ್ರಿ ವಮಿಕಾ ಜೊತೆ ಉಪಹಾರ ಸೇವಿಸುತ್ತಿರುವ ಫೋಟೋವೊಂದನ್ನು ಸಾಮಾಜಿಕ ಜಾಲತಾಣ ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದಾರೆ.
ದುಬೈನಲ್ಲಿ ಪತ್ನಿ ಅನುಷ್ಕಾ, ಪುತ್ರಿ ವಮಿಕಾ ಜೊತೆ ಬ್ರೇಕ್‌ಫಾಸ್ಟ್ ಸವಿದ ಫೋಟೋ ಶೇರ್ ಮಾಡಿದ ಕೊಹ್ಲಿ - ದುಬೈ
ಕೊಹ್ಲಿ ಹೆಚ್ಚು ರನ್ ಗಳಿಸಲು ವಿಫಲವಾದರೂ ಯುವ ಆಟಗಾರ ಇಶಾನ್ ಕಿಶನ್ 70 ರನ್ ಗಳಿಸಿ ಮಿಂಚಿದರು. ಅವರಿಗೆ ಕೆ ಎಲ್ ರಾಹುಲ್ ಉತ್ತಮ ಬೆಂಬಲ ನೀಡಿ ಅರ್ಧಶತಕ ಬಾರಿಸಿ ಭಾರತಕ್ಕೆ ಇಂಗ್ಲೆಂಡ್ ನೀಡಿದ್ದ 189 ಗುರಿಯನ್ನು 19 ಓವರ್‌ಗಳಲ್ಲಿ ಬೆನ್ನಟ್ಟಿದರು..
![ದುಬೈನಲ್ಲಿ ಪತ್ನಿ ಅನುಷ್ಕಾ, ಪುತ್ರಿ ವಮಿಕಾ ಜೊತೆ ಬ್ರೇಕ್‌ಫಾಸ್ಟ್ ಸವಿದ ಫೋಟೋ ಶೇರ್ ಮಾಡಿದ ಕೊಹ್ಲಿ Virat Kohli Enjoys Breakfast With Anushka Sharma And Daughter Vamika In Dubai](https://etvbharatimages.akamaized.net/etvbharat/prod-images/768-512-13405718-thumbnail-3x2-kohili.jpg)
ಫೋಟೋದಲ್ಲಿ ಕೊಹ್ಲಿ ಹಾಗೂ ಅನುಷ್ಕಾ ಪುತ್ರಿಯತ್ತ ನೋಡಿ ನಗುತ್ತಿದ್ದಾರೆ. ಇಬ್ಬರಿಗೂ ವಿರುದ್ಧ ದಿಕ್ಕಿನಲ್ಲಿ ಪುತ್ರಿ ವಮಿಕಾ ಪುಟ್ಟ ಕುರ್ಚಿಯಲ್ಲಿ ಕುಳಿತಿದ್ದಾರೆ. ಯುಎಇಯಲ್ಲಿ ನಡೆಯುತ್ತಿರುವ ಟಿ-20 ವಿಶ್ವಕಪ್‌ಗಾಗಿ ಭಾರತದ ನಾಯಕ ವಿರಾಟ್ ಕೊಹ್ಲಿ ಐಪಿಎಲ್ ಬಳಿಕ ಅಲ್ಲೇ ಉಳಿದುಕೊಂಡಿದ್ದಾರೆ. ಅನುಷ್ಕಾ ಕೂಡ ಇತ್ತೀಚೆಗೆ ಯುಎಇಯಲ್ಲಿ ಕ್ಯಾರೆಂಟೈನ್‌ನಲ್ಲಿರುವ ಕೆಲವು ಫೋಟೋಗಳನ್ನು ಪೋಸ್ಟ್ ಮಾಡಿದ್ದರು.
ಇದೇ 18 ರಂದು ಇಂಗ್ಲೆಂಡ್ ವಿರುದ್ಧ ನಡೆದಿದ್ದ ಅಭ್ಯಾಸ ಪಂದ್ಯದಲ್ಲಿ ವಿರಾಟ್ ಕೊಹ್ಲಿ ನೇತೃತ್ವದ ಭಾರತದ ತಂಡ ಏಳು ವಿಕೆಟ್‌ಗಳ ಗೆಲುವು ದಾಖಲಿಸಿತ್ತು. ಕೊಹ್ಲಿ ಹೆಚ್ಚು ರನ್ ಗಳಿಸಲು ವಿಫಲವಾದರೂ ಯುವ ಆಟಗಾರ ಇಶಾನ್ ಕಿಶನ್ 70 ರನ್ ಗಳಿಸಿ ಮಿಂಚಿದರು. ಅವರಿಗೆ ಕೆ ಎಲ್ ರಾಹುಲ್ ಉತ್ತಮ ಬೆಂಬಲ ನೀಡಿ ಅರ್ಧಶತಕ ಬಾರಿಸಿ ಭಾರತಕ್ಕೆ ಇಂಗ್ಲೆಂಡ್ ನೀಡಿದ್ದ 189 ಗುರಿಯನ್ನು 19 ಓವರ್‌ಗಳಲ್ಲಿ ಬೆನ್ನಟ್ಟಿದರು.