ಭಾರತದ ಸ್ಟಾರ್ ಕ್ರಿಕೆಟಿಗ ವಿರಾಟ್ ಕೊಹ್ಲಿ ಕ್ರೀಡಾಭಿಮಾನಿಗಳಲ್ಲದೇ ಸಾಮಾನ್ಯ ಜನರಿಗೂ ಪರಿಚಿತ. ಯುವ ಕ್ರೀಡಾಪಟುಗಳ ಪಾಲಿಗೆ ಐಕಾನ್ ಆಗಿ ಹೊರಹೊಮ್ಮಿದ್ದಾರೆ. ಕ್ರಿಕೆಟ್ನಲ್ಲಿ ಹಲವು ದಾಖಲೆಗಳ ಮೂಲಕ ರನ್ ಮಷಿನ್ ಎಂದೇ ಖ್ಯಾತರಾಗಿರುವ ವಿರಾಟ್ ಸಂಪಾದನೆಯಲ್ಲೂ ಕೋಟ್ಯಾಂತರ ರೂಪಾಯಿಯ ಸರದಾರ. ಹಲವಾರು ಬ್ರ್ಯಾಂಡ್ಗಳ ಜಾಹೀರಾತು ಮತ್ತು ಕ್ರಿಕೆಟ್ ವೃತ್ತಿ ಜೀವನದಿಂದ ಬಹುಕೋಟಿ ಸಂಪಾದನೆ ಹೊಂದಿದ್ದಾರೆ.
ವಿರಾಟ್ ಕೊಹ್ಲಿ ವಿಶ್ವದ ಅತಿ ಹೆಚ್ಚು ಸಂಭಾವನೆ ಪಡೆಯುವ ಕ್ರೀಡಾಪಟುಗಳಲ್ಲಿ ಒಬ್ಬರು. ವಿರಾಟ್ ಬ್ಯ್ರಾಂಡ್ ಎಂಡಾರ್ಸ್‌ಮೆಂಟ್‌ಗಳ ಮೂಲಕ ಕೋಟಿಗಟ್ಟಲೆ ಹಣ ಗಳಿಸುತ್ತಾರೆ. ವರದಿಗಳ ಪ್ರಕಾರ ವಿರಾಟ್ ಕೊಹ್ಲಿ ಅವರ ನಿವ್ವಳ ಆಸ್ತಿ ಮೌಲ್ಯ 1050 ಕೋಟಿ ರೂಪಾಯಿಗಳಂತೆ.
ವಿರಾಟ್ ಭಾರತ ಕ್ರಿಕೆಟ್ ತಂಡದ ಮೂರೂ ಮಾದರಿಯಲ್ಲೂ ಆಡುತ್ತಿದ್ದು ಬಿಸಿಸಿಐನ ಎ ಗ್ರೇಡ್ ಗುತ್ತಿಗೆಯಲ್ಲಿ ತಂಡವನ್ನು ಪ್ರತಿನಿಧಿಸುತ್ತಾರೆ. ಹೀಗಾಗಿ ಬಿಸಿಸಿಐನಿಂದ ವಾರ್ಷಿಕವಾಗಿ 7 ಕೋಟಿ ಸಂಬಳ ಪಡೆಯುತ್ತಾರೆ. ಕೊಹ್ಲಿಗೆ ಪ್ರತಿ ಟೆಸ್ಟ್ ಪಂದ್ಯಕ್ಕೆ 15 ಲಕ್ಷ ರೂ., ಏಕದಿನಕ್ಕೆ 6 ಲಕ್ಷ ಮತ್ತು ಪ್ರತಿ ಟಿ20 ಪಂದ್ಯಕ್ಕೆ 3 ಲಕ್ಷ ರೂ. ಹಾಗೂ ಐಪಿಎಲ್‌ನಿಂದ ಪ್ರತಿ ವರ್ಷ 15 ಕೋಟಿ ರೂ. ಸಿಗಲಿದೆ.
ವಿರಾಟ್ ಕೊಹ್ಲಿ 18ಕ್ಕೂ ಹೆಚ್ಚು ಬ್ರ್ಯಾಂಡ್ಗಳ ಜಾಹೀರಾತುಗಳಲ್ಲಿ ಕಾಣಿಸಿಕೊಳ್ಳುತ್ತಾರೆ. ಪ್ರತಿ ಜಾಹೀರಾತು ಬ್ರ್ಯಾಂಡ್ನಿಂದ 7.5 ಕೋಟಿಯಿಂದ 10 ಕೋಟಿವರೆಗೆ ಗಳಿಕೆ ಮಾಡುತ್ತಾರೆ ಎಂದು ವರದಿ ಹೇಳಿದೆ. ಮಿಂತ್ರಾ, ವಿವೋ, ನಾಯ್ಸ್, ಪಳೈರ್ ಬೋಲ್ಟ್, ಟೂ ಯಮ್, ವಾಲಿನಿ, ಟೂದಿಸ್, ಸ್ಟಾರ್ ಸ್ಪೋರ್ಟ್ಸ್, ಟಿಸ್ಸಾಟ್, ಎಂಆರ್ಎಫ್ ಮತ್ತು ರಾಂಗ್ ನಂತಹ ಬಹು ಬ್ರ್ಯಾಂಡ್ಗಳಿಗೆ ಜಾಹೀರಾತು ನೀಡುತ್ತಾರೆ.