ಅಡಿಲೇಡ್(ಆಸ್ಟ್ರೇಲಿಯಾ):ಬಾಂಗ್ಲಾದೇಶದ ವಿರುದ್ಧ ಮಳೆ ಅಡ್ಡಿಯ ಮಧ್ಯೆಯೂ ಭಾರತ ವಿಕ್ರಮ ಸಾಧಿಸಿದೆ. ವಿಶ್ವಕಪ್ನಲ್ಲಿ 3ನೇ ಅರ್ಧಶತಕ ಬಾರಿಸಿದ ವಿರಾಟ್ ಕೊಹ್ಲಿ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದುಕೊಂಡರು. ಆದರೆ, ದಿನೇಶ್ ಕಾರ್ತಿಕ್ ವಿವಾದಾತ್ಮಕ ರನೌಟ್ ಆಗಲು ಕಾರಣವಾಗಿದ್ದು, ಅಭಿಮಾನಿಗಳ ಟೀಕೆಗೆ ಗುರಿಯಾಗಿದೆ. ದಿನೇಶ್ ಕಾರ್ತಿಕ್ರ ಕ್ರಿಕೆಟ್ ಬದುಕನ್ನು ವಿರಾಟ್ ಕೊಹ್ಲಿ ಮುಗಿಸಿದರು ಎಂದು ಅಭಿಮಾನಿಗಳು ಆರೋಪಿಸಿದ್ದಾರೆ.
ಗ್ರೇಟ್ ಫಿನಿಶರ್ ಆಗಿ ಭಾರತ ತಂಡದಲ್ಲಿ ಸ್ಥಾನ ಪಡೆದಿರುವ ದಿನೇಶ್ ಕಾರ್ತಿಕ್ ಕಳೆದೆರಡು ಪಂದ್ಯಗಳಲ್ಲಿ ಬ್ಯಾಟಿಂಗ್ ಮಾಡಲು ಅವಕಾಶ ಪಡೆದರೂ ರನ್ ಗಳಿಸಲು ಸಾಧ್ಯವಾಗಿಲ್ಲ. ಪಾಕಿಸ್ತಾನ ವಿರುದ್ಧ ವಿಕೆಟ್ ಸ್ಟಂಪ್ ಆಗಿ ನಿರಾಸೆ ಮೂಡಿಸಿದ್ದರು. ಇಂದು ಬುಧವಾರ ನಡೆದ ಬಾಂಗ್ಲಾದೇಶ ವಿರುದ್ಧ ಪಂದ್ಯದಲ್ಲೂ ರನೌಟ್ ಆಗಿ ಹೊರನಡೆದರು.
ರನ್ ಓಟದಲ್ಲಿ ಗೊಂದಲ:ಪಂದ್ಯದಲ್ಲಿ ದಿನೇಶ್ ಕಾರ್ತಿಕ್ 15.1 ನೇ ಓವರ್ ವೇಳೆ ಮೈದಾನಕ್ಕಿಳಿದರು. ಈ ವೇಳೆ ರನ್ ವೇಗ ಹೆಚ್ಚಿಸಲು ನೆರವಾಗಲಿದ್ದಾರೆ ಎಂದೇ ಅಭಿಮಾನಿಗಳು ಭಾವಿಸಿದ್ದರು. 1 ಬೌಂಡರಿ ಬಾರಿಸಿದ ಕಾರ್ತಿಕ್ ಬಾಂಗ್ಲಾಗೆ ಎಚ್ಚರಿಕೆ ನೀಡಿದ್ದರು. ಈ ವೇಳೆ, 17ನೇ ಓವರ್‌ನ ಕೊನೆಯ ಎಸೆತದಲ್ಲಿ ವಿರಾಟ್ ಕೊಹ್ಲಿ ಎಕ್ಸ್‌ಟ್ರಾ ಕವರ್ ಕಡೆಗೆ ಚೆಂಡು ಹೊಡೆದು ರನ್ ಗಳಿಸಿಲು ಮುಂದಾದರು.