ಮೊಹಾಲಿ:ಭಾರತ ಹಾಗೂ ಶ್ರೀಲಂಕಾ ನಡುವೆ ಇಂದು ಮೊದಲ ಟೆಸ್ಟ್ ಪಂದ್ಯ ನಡೆಯುತ್ತಿದ್ದು, ಈ ಸ್ಮರಣೀಯ ಟೆಸ್ಟ್ ಪಂದ್ಯದಲ್ಲಿ ಟೀಂ ಇಂಡಿಯಾ ಮಾಜಿ ನಾಯಕ ವಿರಾಟ್ ಕೊಹ್ಲಿ ಕೇವಲ 45 ರನ್‌ಗಳನ್ನು ಗಳಿಸಿ ನಿರ್ಗಮಿಸಿದರು.
ವಿರಾಟ್ ಕೊಹ್ಲಿ ಇಂದು 100ನೇ ಟೆಸ್ಟ್ ಆಡುತ್ತಿದ್ದು, ಶತಕ ಸಿಡಿಸಿ ಇತಿಹಾಸ ಬರೆಯಲಿದ್ದಾರೆ ಎಂದು ಅಂದಾಜು ಮಾಡಲಾಗಿತ್ತು. ಆದರೆ, ಅಲ್ಪ ಮೊತ್ತಕ್ಕೆ ಔಟ್ ಆಗುವ ಮೂಲಕ ಅಭಿಮಾನಿಗಳಿಗೆ ನಿರಾಶೆ ಮೂಡಿಸಿದ್ದಾರೆ. ಅರ್ಧ ಶತಕಕ್ಕೆ ಇನ್ನೂ 5 ರನ್ಗಳು ಬಾಕಿ ಇರುವಗಾಲೇ ನಿರ್ಗಮಿಸಿದ್ದಾರೆ.