ದುಬೈ(ಯುಎಇ): ಏಷ್ಯಾ ಕಪ್ ಟಿ20 ಕ್ರಿಕೆಟ್ ಟೂರ್ನಿಯಲ್ಲಿ ಟೀಂ ಇಂಡಿಯಾ ನಿನ್ನೆ ಕೊನೆಯ ಮತ್ತು ಔಪಚಾರಿಕ ಪಂದ್ಯವನ್ನಾಡಿ ಅಭಿಯಾನ ಕೊನೆಗೊಳಿಸಿತು. ಆದ್ರೆ, ವಿರಾಟ್ ಕೊಹ್ಲಿಗೆ ಈ ಪಂದ್ಯ ವಿಶೇಷವಾಗಿದ್ದು, ಅವರ ಮುಂದಿನ ವೃತ್ತಿ ಜೀವನದುದ್ದಕ್ಕೂ ನೆನಪಿನಲ್ಲಿ ಉಳಿಯಲಿದೆ.
1,024 ದಿನಗಳಿಂದ ಶತಕ ಬರ ಎದುರಿಸುತ್ತಿದ್ದ ರನ್ ಮಷಿನ್ ಖ್ಯಾತಿಯ ಬ್ಯಾಟರ್ ಪಂದ್ಯದಲ್ಲಿ ಅಬ್ಬರಿಸಿದರು. ಟಿ20 ಕ್ರಿಕೆಟ್ನಲ್ಲಿ ಚೊಚ್ಚಲ ಶತಕ ಸಿಡಿಸಿ ಸಂಭ್ರಮಿಸಿದರು. ಈ ಮೂಲಕ ಅಂತಾರಾಷ್ಟ್ರೀಯ ಕ್ರಿಕೆಟ್ನಲ್ಲಿ 71ನೇ ಸೆಂಚುರಿ ಸಿಡಿಸಿರುವ ಸಾಧನೆಯನ್ನೂ ಮಾಡಿದರು. ಅಫ್ಘಾನ್ ವಿರುದ್ಧದ ಪಂದ್ಯದಲ್ಲಿ ಕೊಹ್ಲಿ ಕೇವಲ 61 ಎಸೆತಗಳಲ್ಲಿ ಸ್ಫೋಟಕ ಬ್ಯಾಟಿಂಗ್ ಪ್ರದರ್ಶಿಸಿ, ಅಜೇಯ 122 ರನ್ ಕಲೆ ಹಾಕಿದರು. 53 ಎಸೆತಗಳನ್ನು ಎದುರಿಸಿ ದಾಖಲಿಸಿದ ಈ ಶತಕದಲ್ಲಿ 6 ಸಿಕ್ಸರ್ ಹಾಗೂ 12 ಬೌಂಡರಿಗಳಿದ್ದವು. 200ರ ಸ್ಟ್ರೈಕ್ ರೇಟ್ನಲ್ಲಿ ಬ್ಯಾಟ್ ಬೀಸಿರುವುದು ಕೊಹ್ಲಿ ಅಭಿಮಾನಿಗಳಲ್ಲಿ ರೋಮಾಂಚನ ಉಂಟುಮಾಡಿತ್ತು.