ಸೌತಾಂಪ್ಟನ್: ನ್ಯೂಜಿಲ್ಯಾಂಡ್ ತಂಡದ ವಿಕೆಟ್ ಕೀಪರ್ ಬ್ಯಾಟ್ಸ್ಮನ್ ಬಿಜೆ ವಾಟ್ಲಿಂಗ್ ಅಂತಾರಾಷ್ಟ್ರೀಯ ಕ್ರಿಕೆಟ್ನಿಂದ ಇಂದು ನಿವೃತ್ತರಾಗಲಿದ್ದಾರೆ. ಈಗಾಗಲೇ ವಾಟ್ಲಿಂಗ್ ವಿಶ್ವಟೆಸ್ಟ್ ಚಾಂಪಿಯನ್ಶಿಪ್ ಫೈನಲ್ ಪಂದ್ಯದ ನಂತರ ತಮ್ಮ ಅಂತಾರಾಷ್ಟ್ರೀಯ ಕ್ರಿಕೆಟ್ ಜೀವನಕ್ಕೆ ವಿದಾಯ ಹೇಳುವುದಾಗಿ ತಿಳಿಸಿದ್ದರು. ಇಂದು ಮೈದಾನಕ್ಕಿಳಿದ ವೇಳೆ ವಿರಾಟ್ ಕೊಹ್ಲಿ ವಾಟ್ಲಿಂಗ್ ಶುಭ ಕೋರಿದರು.
ನ್ಯೂಜಿಲ್ಯಾಂಡ್ ಪರ ವಾಟ್ಲಿಂಗ್ 75 ಪಂದ್ಯ ಟೆಸ್ಟ್ ಪಂದ್ಯಗಳನ್ನಾಡಿರುವ ವಾಟ್ಲಿಂಗ್ 8 ಶತಕ ಮತ್ತು 19 ಅರ್ಧಶತಕದ ನೆರವಿನಿಂದ 3,790 ರನ್ ಗಳಿಸಿದ್ದಾರೆ.
ಕೊಹ್ಲಿ ವಾಟ್ಲಿಂಗ್ಗೆ ಅಭಿನಂದಿಸುವ ವಿಡಿಯೋವನ್ನು ಐಸಿಸಿ ತನ್ನ ಟ್ವಿಟರ್ನಲ್ಲಿ ಹಂಚಿಕೊಂಡಿದೆ. ಅಂತಾರಾಷ್ಟ್ರೀಯ ಕ್ರಿಕೆಟ್ ವೃತ್ತಿ ಜೀವನದ ಕೊನೆಯ ದಿನವಾದ ಕಿವೀಸ್ನ ಬಿಜೆ ವಾಟ್ಲಿಂಗ್ಗೆ ಭಾರತದ ನಾಯಕ ವಿರಾಟ್ ಕೊಹ್ಲಿ ಅಭಿನಂದಿಸುವ ಮೂಲಕ ಗೌರವ ತೋರಿದ್ದಾರೆ ಎಂದು ಬರೆದು ಕೊಂಡಿದೆ.
ಸೌತಾಂಪ್ಟನ್ನ ಏಜಿಯಸ್ ಬೌಲ್ನಲ್ಲಿ ನಡೆಯುತ್ತಿರುವ WTC ಫೈನಲ್ ಪಂದ್ಯದಲ್ಲಿ ಭಾರತ ಮೊದಲ ಇನ್ನಿಂಗ್ಸ್ನಲ್ಲಿ 217 ರನ್ಗಳಿಸಿದರೆ, ಇದಕ್ಕುತ್ತರವಾಗಿ ನ್ಯೂಜಿಲ್ಯಾಂಡ್ 249 ರನ್ಗಳಿಸಿದೆ. ಇದೀಗ 32 ರನ್ಗಳ ಹಿನ್ನಡೆಯೊಂದಿಗೆ 2ನೇ ಇನ್ನಿಂಗ್ಸ್ ಆರಂಭಿಸಿದ ಭಾರತ 5 ವಿಕೆಟ್ ಕಳೆದುಕೊಂಡು 130 ರನ್ಗಳಿಸಿದೆ.
ಇದನ್ನು ಓದಿ:ICC Test Rankings: ರವೀಂದ್ರ ಜಡೇಜಾಗೆ ನಂಬರ್ 1 ಆಲ್ರೌಂಡರ್ ಪಟ್ಟ