ಕರ್ನಾಟಕ

karnataka

ETV Bharat / sports

ಬ್ಯಾಟಿಂಗ್​​ನಲ್ಲಿ ಮಿಸ್​​, ಫೀಲ್ಡಿಂಗ್​ನಲ್ಲಿ ಶತಕ ಬಾರಿಸಿದ ವಿರಾಟ್ ಕೊಹ್ಲಿ - ಟೆಬ ಬವುಮಾ ವಿರಾಟ್ಕೊಹ್ಲಿ

ಶಮಿ ಬೌಲಿಂಗ್​ನಲ್ಲಿ ದಕ್ಷಿಣ ಆಫ್ರಿಕಾದ ಬ್ಯಾಟರ್ ಟೆಂಬ ಬವುಮಾ ಕ್ಯಾಚ್​ ಪಡೆದ ಕೊಹ್ಲಿ ಟೆಸ್ಟ್​ ಕ್ರಿಕೆಟ್​ನಲ್ಲಿ ನೂರನೇ ಕ್ಯಾಚ್​ ಮೈಲುಗಲ್ಲು ತಲುಪಿದರು. ಈ ಮೂಲಕ ಟೆಸ್ಟ್​ ಕ್ರಿಕೆಟ್​​ನಲ್ಲಿ ಈ ಸಾಧನೆಗೈದ​ ಭಾರತದ 6ನೇ ಫೀಲ್ಡರ್​ ಎನಿಸಿಕೊಂಡರು.

Virat Kohli completes 100 catches
ವಿರಾಟ್ ಕೊಹ್ಲಿ ಕ್ಯಾಚ್​ ದಾಖಲೆ

By

Published : Jan 12, 2022, 8:36 PM IST

ಕೇಪ್​ಟೌನ್​: ಭಾರತ ತಂಡದ ನಾಯಕ ವಿರಾಟ್​​ ಕೊಹ್ಲಿ ದಕ್ಷಿಣ ಆಫ್ರಿಕಾ ವಿರುದ್ಧದ ಕೊನೆಯ ಟೆಸ್ಟ್​ ಪಂದ್ಯದಲ್ಲಿ 100ನೇ ಕ್ಯಾಚ್​ ಪಡೆದು ದ್ರಾವಿಡ್​, ಲಕ್ಷ್ಮಣ್​ ಸೇರಿದಂತೆ ದಿಗ್ಗಜರಿರುವ ಸಾಲಿಗೆ ಸೇರ್ಪಡೆಗೊಂಡಿದ್ದಾರೆ.

ಶಮಿ ಬೌಲಿಂಗ್​ನಲ್ಲಿ ದಕ್ಷಿಣ ಆಫ್ರಿಕಾದ ಬ್ಯಾಟರ್ ಟೆಂಬ ಬವುಮಾ ಕ್ಯಾಚ್​ ಪಡೆದ ಕೊಹ್ಲಿ ಟೆಸ್ಟ್​ ಕ್ರಿಕೆಟ್​ನಲ್ಲಿ ನೂರನೇ ಕ್ಯಾಚ್​ ಮೈಲುಗಲ್ಲು ತಲುಪಿದರು. ಈ ಮೂಲಕ ಟೆಸ್ಟ್​ ಕ್ರಿಕೆಟ್​​ನಲ್ಲಿ 100 ಕ್ಯಾಚ್​ ಪಡೆದ ಭಾರತದ 6ನೇ ಫೀಲ್ಡರ್​ ಎನಿಸಿಕೊಂಡರು.

ವಿರಾಟ್​ ಕೊಹ್ಲಿ ತಮ್ಮ 99ನೇ ಟೆಸ್ಟ್​ ಪಂದ್ಯದಲ್ಲಿ ಈ ವಿಶೇಷ ಸಾಧನೆ ಮಾಡಿದ್ದಾರೆ. ಪ್ರಸ್ತುತ ಭಾರತ ತಂಡದ ಕೋಚ್ ಅಗಿರುವ ದಿಗ್ಗಜ ರಾಹುಲ್ ದ್ರಾವಿಡ್​ ದೀರ್ಘ ಮಾದರಿಯ ಕ್ರಿಕೆಟ್​​ನಲ್ಲಿ ಗರಿಷ್ಠ ಕ್ಯಾಚ್​ ಪಡೆದ ವಿಶ್ವದಾಖಲೆ ಹೊಂದಿದ್ದಾರೆ. ಅವರು 164 ಟೆಸ್ಟ್​ ಪಂದ್ಯಗಳಲ್ಲಿ 210 ಕ್ಯಾಚ್​ ಪಡೆದಿದ್ದಾರೆ. ಇವರ ಜೊತೆಗೆ ಜಯವರ್ದನೆ (205) ಮತ್ತು ಜಾಕ್ ಕಾಲೀಸ್​ (200) ಮತ್ತಿಬ್ಬರು ಕ್ರಿಕೆಟಿಗರು ಸೇರಿದ್ದಾರೆ.

ಭಾರತೀಯರಲ್ಲಿ ನೋಡುವುದಾದರೆ, ದ್ರಾವಿಡ್​(210), ವಿವಿಎಸ್​ ಲಕ್ಷ್ಮಣ್​(135), ಸಚಿನ್ ತೆಂಡೂಲ್ಕರ್​(115), ಸುನಿಲ್ ಗವಾಸ್ಕರ್​(108) ಮತ್ತು ಮೊಹಮದ್​ ಅಜರುದ್ದೀನ್​ (105) 100 ಕ್ಯಾಚ್​ ಪಡೆದ ಫೀಲ್ಡರ್​ಗಳಾಗಿದ್ದಾರೆ.

ಇದನ್ನೂ ಓದಿ: ಕೊರೊನಾ ಸೋಂಕಿತ ವಾಷಿಂಗ್ಟನ್​ ಔಟ್​; ದ.ಆಫ್ರಿಕಾ ವಿರುದ್ಧದ ಏಕದಿನ ಸರಣಿಗೆ ಜಯಂತ್, ಸೈನಿ ಇನ್‌

ABOUT THE AUTHOR

...view details