ನವದೆಹಲಿ: ಭಾರತ ಕ್ರಿಕೆಟ್ ತಂಡದ ರನ್ ಮಷಿನ್ ಎಂದೇ ಪರಿಗಣಿಸಲ್ಪಟ್ಟ ನಾಯಕ ವಿರಾಟ್ ಕೊಹ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್ಗೆ ಪದಾರ್ಪಣೆ ಮಾಡಿ ಇಂದಿಗೆ 13 ವರ್ಷವಾಗುತ್ತಿದೆ. 2008ರ ಆಗಸ್ಟ್ 18ರಂದು ಏಕದಿನ ಪಂದ್ಯವನ್ನಾಡುವ ಆಡುವ ಮೂಲಕ ಅಂತಾರಾಷ್ಟ್ರೀಯ ಕ್ರಿಕೆಟ್ಗೆ ಕಾಲಿರಿಸಿದ್ದರು.
ಶ್ರೀಲಂಕಾ ಎದುರು ಮೊದಲ ಏಕದಿನ ಪಂದ್ಯವಾಡಿದ ವಿರಾಟ್, ಕೇವಲ 22 ಎಸೆತಗಳನ್ನೆದುರಿಸಿ ಒಂದು ಬೌಂಡರಿ ಮೂಲಕ 12 ರನ್ ಬಾರಿಸಿದ್ದರು. ಬಳಿಕ ಲಂಕಾದ ಬೌಲರ್ ನುವಾನ್ ಕುಲಸೇಖರ ಎಸೆತದಲ್ಲಿ ವಿಕೆಟ್ ಒಪ್ಪಿಸಿದ್ದರು. ಈ ಪಂದ್ಯದಲ್ಲಿ ಭಾರತ ಹೀನಾಯವಾಗಿ ಸೋಲೊಪ್ಪಿಕೊಂಡಿತ್ತು. ಕೇವಲ 146 ರನ್ಗಳಿಗೆ ತನ್ನೆಲ್ಲ ವಿಕೆಟ್ ಕಳೆದುಕೊಂಡಿತ್ತು. ಆದರೆ ಲಂಕಾ ಇನ್ನೂ 91 ಎಸೆತಗಳು ಬಾಕಿ ಇರುವಾಗಲೇ ನಿಗದಿತ ಮೊತ್ತ ಕಲೆಹಾಕಿ ಗೆಲುವಿನ ನಗೆ ಬೀರಿತ್ತು.