ಮುಂಬೈ (ಮಹಾರಾಷ್ಟ್ರ):2023ರ ವಿಶ್ವಕಪ್ನಲ್ಲಿ ಭರ್ಜರಿ ಫಾರ್ಮ್ನಲ್ಲಿರುವ ವಿರಾಟ್ ಕೊಹ್ಲಿ, ಸಚಿನ್ ತೆಂಡೂಲ್ಕರ್ ಅವರ ದಾಖಲೆಯನ್ನು ಮುರಿದಿದ್ದಾರೆ. ವಿಶ್ವಕಪ್ನಲ್ಲಿ 49ನೇ ಏಕದಿನ ಶತಕವನ್ನು ದಾಖಲಿಸಿರುವ ಕೊಹ್ಲಿ, ಸಚಿನ್ ದಾಖಲೆ ಸರಿಗಟ್ಟಿದ್ದು ನಿಮಗೆಲ್ಲ ಗೊತ್ತೇ ಇದೆ. ಮುಂಬೈನ ವಾಂಖೆಡೆಯಲ್ಲಿ ನಡೆಯುತ್ತಿರುವ ಸೆಮೀಸ್ ಪಂದ್ಯದಲ್ಲಿ ವಿಶ್ವಕಪ್ವೊಂದರಲ್ಲಿ ಅತಿ ಹೆಚ್ಚು ರನ್ ಗಳಿಸಿದ ದಾಖಲೆಯನ್ನು ವಿರಾಟ್ ಬರೆದಿದ್ದಾರೆ.
ವಿಶ್ವಕಪ್ನಲ್ಲಿ ಹೆಚ್ಚು ರನ್ಗಳ ದಾಖಲೆ ಬರೆದ ‘ವಿರಾಟ’: ಸಚಿನ್ ತೆಂಡೂಲ್ಕರ್ ರೆಕಾರ್ಡ್ ಮುರಿದ ಕಿಂಗ್ ಕೊಹ್ಲಿ - ETV Bharath Karnataka
Virat Kohli break Sachin Tendulkar records: ಒಂದೇ ವಿಶ್ವಕಪ್ನಲ್ಲಿ ಅತಿ ಹೆಚ್ಚು ರನ್ಗಳಿಸಿದ ಆಟಗಾರ ಎಂಬ ದಾಖಲೆಯನ್ನು ವಿರಾಟ್ ಕೊಹ್ಲಿ ಮಾಡಿದ್ದಾರೆ. ಈ ಮೂಲಕ ಕ್ರಿಕೆಟ್ ದೇವರು ತೆಂಡೂಲ್ಕರ್ ದಾಖಲೆಯನ್ನು ಪುಡಿಗಟ್ಟಿದ್ದಾರೆ.
Virat Kohli
Published : Nov 15, 2023, 4:54 PM IST
2003ರ ವಿಶ್ವಕಪ್ನಲ್ಲಿ ಸಚಿನ್ ತೆಂಡೂಲ್ಕರ್ 673 ರನ್ಗಳಿಸಿದ್ದರು. ವಿರಾಟ್ ನ್ಯೂಜಿಲೆಂಡ್ ವಿರುದ್ಧದ ಸೆಮೀಸ್ ಪಂದ್ಯದಲ್ಲಿ 80 ರನ್ ಕಲೆಹಾಕುತ್ತಿದ್ದಂತೆ ಈ ದಾಖಲೆ ಮುರಿದರು. 20 ವರ್ಷದ ನಂತರ ಭಾರತೀಯ ಆಟಗಾರನೇ ಸಚಿನ್ ಅವರ ಈ ದಾಖಲೆಯನ್ನು ಮುರಿದಿರುವುದು ವಿಶೇಷ. ವಿರಾಟ್ ಈ ವಿಶ್ವಕಪ್ನಲ್ಲಿ ಆಡಿದ 10 ಇನ್ನಿಂಗ್ಸ್ನಲ್ಲಿ ಇದುವರೆಗೆ 6 ಅರ್ಧಶತಕ ಮತ್ತು 2 ಶತಕ ಗಳಿಸಿ 674*ಕ್ಕೂ ಹೆಚ್ಚು ರನ್ ಕಲೆಹಾಕಿದ್ದಾರೆ.
ಇದನ್ನೂ ಓದಿ:ಸಿಕ್ಸ್ ವೀರ ರೋಹಿತ್ ಶರ್ಮಾ: ಯುನಿವರ್ಸಲ್ ಬಾಸ್ ದಾಖಲೆ ಉಡೀಸ್