ಅಹ್ಮದಾಬಾದ್: ವಿರಾಟ್ ಕೊಹ್ಲಿ ಭಾನುವಾರ ನಡೆದ ವೆಸ್ಟ್ ಇಂಡೀಸ್ ವಿರುದ್ಧದ ಮೊದಲ ಏಕದಿನ ಪಂದ್ಯದ ವೇಳೆ 8 ರನ್ಗಳಿಸಿ ವಿಕೆಟ್ ಒಪ್ಪಿಸಿದರೂ, ವಿಶೇಷ ಮೈಲುಗಲ್ಲನ್ನು ಸ್ಥಾಪಿಸಿ ಸಚಿನ್, ಜಾಕ್ ಕಾಲೀಸ್ ಮತ್ತು ರಿಕಿ ಪಾಂಟಿಂಗ್ ಸಾಲಿಗೆ ಸೇರ್ಪಡೆಗೊಂಡಿದ್ದಾರೆ.
ಅಲ್ಜಾರಿ ಜೋಶೆಫ್ ಎಸೆದ 14ನೇ ಓವರ್ನಲ್ಲಿ ನಾಯಕ ರೋಹಿತ್ ಶರ್ಮಾ(60) ವಿಕೆಟ್ ಪತನದ ಬಳಿಕ ಬ್ಯಾಟಿಂಗ್‌ಗೆ ಆಗಮಿಸಿದ ವಿರಾಟ್, ತಾವೆದುರಿಸಿದ ಮೊದಲೆರಡು ಎಸೆತಗಳಲ್ಲೇ ಎರಡು ಬೌಂಡರಿ ಬಾರಿಸಿದರು. ಆದರೆ, ಅದೇ ಓವರ್ನ 5ನೇ ಎಸೆತದಲ್ಲಿ ಕೆಮರ್ ರೋಚ್ಗೆ ಕ್ಯಾಚ್ ನೀಡಿ ಔಟಾದರು.
ಆದರೆ, ಈ 8 ರನ್ಗಳಿಸುತ್ತಿದ್ದಂತೆ ಅವರು ಭಾರತದಲ್ಲಿ 5000 ರನ್ಗಳಿಸಿದ ದಾಖಲೆಗೆ ಪಾತ್ರರಾದರು. ಈ ಮೂಲಕ ಒಂದು ರಾಷ್ಟ್ರದಲ್ಲಿ ಈ ವಿಶೇಷ ಸಾಧನೆಗೆ ಪಾತ್ರರಾದ 4ನೇ ಬ್ಯಾಟರ್ ಎನಿಸಿಕೊಂಡರು.
ಅಗ್ರಸ್ಥಾನದಲ್ಲಿ ಭಾರತದ ಲೆಜೆಂಡರಿ ಬ್ಯಾಟರ್ ಸಚಿನ್ ತೆಂಡೂಲ್ಕರ್ ಇದ್ದು, ಅವರು ಭಾರತದಲ್ಲಿ 6976 ರನ್ಗಳಿಸಿದ್ದಾರೆ, ರಿಕಿ ಪಾಂಟಿಂಗ್ ಆಸ್ಟ್ರೇಲಿಯಾದಲ್ಲಿ 5521 ರನ್, ಜಾಕ್ ಕಾಲೀಸ್ ದಕ್ಷಿಣ ಆಫ್ರಿಕಾದಲ್ಲಿ 5186 ರನ್ಗಳಿಸಿದ್ದಾರೆ. ಸಚಿನ್ ಭಾರತದಲ್ಲಿ 5 ಸಾವಿರ ರನ್ಗಳಿಸಿಲು 121 ಇನ್ನಿಂಗ್ಸ್ ತೆಗೆದುಕೊಂಡರೆ, ಕೊಹ್ಲಿ 96 ಇನ್ನಿಂಗ್ಸ್ಗಳಲ್ಲೇ ಈ ಸಾಧನೆ ಮಾಡಿದ್ದಾರೆ.
ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ವೆಸ್ಟ್ ಇಂಡೀಸ್ ಬ್ಯಾಟಿಂಗ್ ವೈಫಲ್ಯನ ಅನುಭವಿಸಿ 176 ರನ್ಗಳಿಗೆ ಆಲೌಟ್ ಆಗಿತ್ತು. ಚಹಲ್ 4, ವಾಷಿಂಗ್ಟನ್ ಸುಂದರ್ 3 ಮತ್ತು ಪ್ರಸಿಧ್ ಕೃಷ್ಣ ಒಂದು ವಿಕೆಟ್ ಪಡೆದಿದ್ದರು.
ಇದನ್ನೂ ಓದಿ:ಅಜ್ಜ ಒಲಿಂಪಿಕ್ಸ್ನಲ್ಲಿ ಚಿನ್ನ ಗೆದ್ದರೆ, ಅಪ್ಪ ಯುವರಾಜ್ ಕೋಚ್.... ಕುಟುಂಬದ 3ನೇ ತಲೆಮಾರಿನ ಕುಡಿ U19 ವಿಶ್ವಕಪ್ ಚಾಂಪಿಯನ್!