ನವದೆಹಲಿ:ಈ ವರ್ಷ ತವರಿನಲ್ಲಿ ನಡೆಯುವ ಏಕದಿನ ವಿಶ್ವಕಪ್ಗೆ ಭಾರತ ತಂಡ ತಯಾರಿ ನಡೆಸುತ್ತಿದೆ. ಆಟಗಾರರು ವೈಯಕ್ತಿಕವಾಗಿ ಭರ್ಜರಿ ಲಯಕ್ಕೆ ಮರಳಿದ್ದು, ಶ್ರೀಲಂಕಾ ವಿರುದ್ಧದ ಸರಣಿಯಲ್ಲಿ ಅದು ಗೋಚರವಾಗಿದೆ. ಅದರಲ್ಲೂ ನಾಯಕ ರೋಹಿತ್ ಶರ್ಮಾ, ಚೇಸಿಂಗ್ ಮಾಸ್ಟರ್ ವಿರಾಟ್ ಕೊಹ್ಲಿ, ಕೆಎಲ್ ರಾಹುಲ್ ಬ್ಯಾಟ್ ಸದ್ದು ಮಾಡುತ್ತಿದ್ದರೆ, ಮೊಹಮದ್ ಸಿರಾಜ್, ಮೊಹಮದ್ ಶಮಿ ವೇಗ ಮೊನಚು ಪಡೆದಿದೆ. ಯಜುವೇಂದ್ರ ಚಹಲ್, ಕುಲದೀಪ್ ಯಾದವ್ ಸ್ಪಿನ್ ಮೋಡಿ ಮಾಡುತ್ತಿದೆ.
ಲಂಕಾ ವಿರುದ್ಧದ ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ ನಿಜವಾಗಿಯೂ ಚರ್ಚೆಗೆ ಗ್ರಾಸವಾಗಿದ್ದು, ಬ್ಯಾಟಿಂಗ್ ಕಿಂಗ್ ವಿರಾಟ್ ಕೊಹ್ಲಿ ಅವರ ಅಬ್ಬರ. ಕಳೆದ 4 ಇನಿಂಗ್ಸ್ಗಳಲ್ಲಿ 3 ಶತಕ ಬಾರಿಸಿರುವ ಕೊಹ್ಲಿ ವಿಶ್ವಕ್ರಿಕೆಟ್ಗೆ ಹಳೆಯ ಕೊಹ್ಲಿಯನ್ನು ಪರಿಚಯಿಸಿದ್ದಾರೆ. ಅದರಲ್ಲೂ ಕೊನೆಯ ಏಕದಿನ ಪಂದ್ಯದಲ್ಲಿಮನ ಅಬ್ಬರ ನಿಜಕ್ಕೂ ಅಚ್ಚರಿಯ ಜೊತೆಗೆ ಅದ್ಭುತವೇ ಸರಿ. ಈ ಎಲ್ಲದರ ಮಧ್ಯೆ ವಿರಾಟ್ ಬಳಸುತ್ತಿರುವ ಬ್ಯಾಟ್ ಬಗ್ಗೆ ಕುತೂಹಲ ಮೂಡಿದೆ.
ವಿರಾಟ್ ಕೊಹ್ಲಿ ಬಳಸುತ್ತಿರುವ ಎಂಆರ್ಎಫ್ ಕಂಪನಿಯ ಬ್ಯಾಟ್ನ ವಿಶೇಷತೆ ಮತ್ತು ಅದರ ದರದ ಬಗ್ಗೆ ಕ್ರಿಕೆಟ್ ಲೋಕ ಮಾತನಾಡುತ್ತಿದೆ. ಅದರಲ್ಲೂ ವಿರಾಟ್ರೂಪದ ಬಳಿಕ ಸ್ವತಃ ಶ್ರೀಲಂಕಾ ಆಟಗಾರರೇ ಕೊಹ್ಲಿ ಬ್ಯಾಟ್ ಅನ್ನು ಪರಿಶೀಲಿಸಿದ್ದಾರೆ ಎಂದು ಹೇಳಲಾಗಿದೆ. ಬ್ಯಾಟಿಂಗ್ ಕಿಂಗ್ ಬಳಸುವ ಶಸ್ತ್ರದಂತಹ ಬ್ಯಾಟ್ನ ದರ ಮತ್ತು ಅದರ ವಿಶೇಷತೆ ಕುತೂಹಲದ ಕಣಜವಾಗಿದೆ.
ವಿರಾಟ್ ಬಳಸುವ ಬ್ಯಾಟ್ನ ದರವೆಷ್ಟು ಗೊತ್ತಾ?:ವಿರಾಟ್ ಕೊಹ್ಲಿ ಅವರು ಬೌಂಡರಿ ಮತ್ತು ಸಿಕ್ಸರ್ ಬಾರಿಸುವ ಬ್ಯಾಟ್ ಎಷ್ಟು ದುಬಾರಿ ಮತ್ತು ಅದರ ವಿಶೇಷಗಳೇನು ಎಂಬುದು ಈಗಿನ ಪ್ರಶ್ನೆಯಾಗಿದೆ. ವಿರಾಟ್ಗಾಗಿ ಎಂಆರ್ಎಫ್ ಕಂಪನಿ ಬ್ಯಾಟ್ ತಯಾರಿಸುತ್ತಿದ್ದು, ಇದನ್ನು ಇಂಗ್ಲಿಷ್ ವಿಲೋ ಮರವನ್ನು ಬಳಸಲಾಗುತ್ತಿದೆ. ಕಳೆದ ವರ್ಷದ ಏಷ್ಯಾ ಕಪ್ ವೇಳೆ ಕಂಪನಿ ವಿರಾಟ್ಗೆ ಗೋಲ್ಡ್ ವಿಝಾರ್ಡ್ ಬ್ಯಾಟ್ಗಳನ್ನು ತಯಾರಿಸಿದೆ. ಇದು ಕಂಪನಿಯ ಗ್ಯಾಂಡ್ ಎಡಿಷನ್ ಬ್ಯಾಟ್ ಆಗಿದ್ದು, ಬೆಲೆ 20 ರಿಂದ 70 ಸಾವಿರ ರೂಪಾಯಿ ಇದೆ.