ಮುಂಬೈ: ಭಾರತದ ಸೆಲೆಬ್ರೆಟಿ ದಂಪತಿಗಳಾದ ಭಾರತ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿ ಮತ್ತು ಬಾಲಿವುಡ್ ನಟಿ ಅನುಷ್ಕಾ ಶರ್ಮ ಕೋವಿಡ್ 19 ವಿರುದ್ಧ ಹೋರಾಟಕ್ಕಾಗಿ ನಡೆಸುತ್ತಿರುವ ಸಂಗ್ರಹ ನಿಧಿ ಅಭಿಯಾನ 6 ದಿನದಲ್ಲಿ ಗುರಿ ತಲುಪಿದೆ. 7 ಕೋಟಿ ಸಂಗ್ರಹದ ಗುರಿ ಹೊಂದಿದ್ದ ಸ್ಟಾರ್ ದಂಪತಿ ಇದೀಗ 11 ಕೋಟಿ ರೂ ಸಂಗ್ರಹಿಸುವುದಕ್ಕೆ ಮುಂದಾಗಿದೆ.
ಹೌದು, 7 ಕೋಟಿರೂ ಸಂಗ್ರಹಕ್ಕೆ ಈ ಮೊದಲು ವಿರುಷ್ಕಾ ಜೋಡಿ ನಿರ್ಧಾರ ಮಾಡಿತ್ತು. ಆದರೆ, ಕೊಹ್ಲಿ ರಾಯಭಾರಿಯಾಹಿರುವ ಎಂಪಿಎಲ್ ಸ್ಪೋರ್ಟ್ಸ್ ಫೌಂಡೇಶನ್ ಬರೋಬ್ಬರಿ 5 ಕೋಟಿ ರೂಗಳನ್ನು ದೇಣಿಗೆಯಾಗಿ ನೀಡಿದೆ. ನಿನ್ನೆಗೆ ದೇಣಿಗೆ 5 ಕೋಟಿ ದಾಟಿದ್ದರಿಂದ ಸಂಗ್ರಹ ನಿಧಿ ಇದೀಗ ಒಟ್ಟಾರೆ 10 ಕೋಟಿಗಳನ್ನು ದಾಟಿದೆ. ಹಾಗಾಗಿ ತಮ್ಮ ಗುರಿಯನ್ನು ವಿರುಷ್ಕಾ ದಂಪತಿ 11 ಕೋಟಿರೂಗಳಿಗೆ ಏರಿಸಿಕೊಂಡಿದೆ.