ಮುಂಬೈ:ಭಾರತದಲ್ಲಿ ಎರಡನೇ ಅಲೆ ಕೊರೊನಾ ಎಲ್ಲೆ ಮೀರಿದೆ. ಲಕ್ಷಾಂತರ ಜನರು ಸಮಸ್ಯೆಗೀಡಾಗುತ್ತಿದ್ದಾರೆ. ಇಂತಹವರಿಗೆ ನೆರವಾಗಲಿ ಎಂದು ಟೀಮ್ ಇಂಡಿಯಾ ನಾಯಕ ಕೊಹ್ಲಿ ಮತ್ತು ಪತ್ನಿ ಅನುಷ್ಕಾ ಶರ್ಮಾ ಆನ್ಲೈನ್ ಮೂಲಕ ದೇಣಿಗೆ ಸಂಗ್ರಹ ಅಭಿಯಾನ ಆರಂಭಿಸಿದ್ದರು. ಇದೀಗ ಅದು 5 ಕೋಟಿ ರೂ ದಾಟಿದ್ದು, 7 ಕೋಟಿ ರೂ ಟಾರ್ಗೆಟ್ ಮುಟ್ಟಲು ಇನ್ನು 1.78 ಕೋಟಿ ರೂ ಅವಶ್ಯಕತೆಯಿದೆ.
ಸೆಲೆಬ್ರೆಟಿ ದಂಪತಿ ಕೋವಿಡ್ ಹೋರಾಟಕ್ಕೆ ನೆರವಾಗಲು 2 ಕೋಟಿ ರೂ ದೇಣಿಗೆ ನೀಡಿದ್ದರು. ಅಲ್ಲದೇ ಭಾರತದಾದ್ಯಂತ ಕೊರೊನಾದಿಂದ ಸಂಕಷ್ಟಕ್ಕೀಡಾದವರಿಗೆ ನೆರವಾಗಲೂ ಆನ್ಲೈನ್ನಲ್ಲಿ 7 ಕೋಟಿರೂ ದೇಣಿಗೆ ಸಂಗ್ರಹ ಮಾಡುವ ಅಭಿಯಾನ ಆರಂಭಿಸಿದ್ದರು. ಇದೀಗ ಅದಕ್ಕೆ ಉತ್ತಮ ಸ್ಪಂದನೆ ಸಿಕ್ಕಿದ್ದು ಮಂಗಳವಾರಕ್ಕೆ 5 ಕೋಟಿ ರೂ ದಾಟಿ ಮುನ್ನುಗ್ಗುತ್ತಿದೆ.