ಮಹೇಂದ್ರ ಸಿಂಗ್ ಧೋನಿ ಭಾರತ ತಂಡ ಸರ್ವಶ್ರೇಷ್ಠ ಆಟಗಾರ ಎಂದು ಬಣ್ಣಿಸಿದರೆ ತಪ್ಪಾಗದು. ಮಾಹಿಯನ್ನು ಮಾಜಿ ಆಟಗಾರರು ಸಹ ಇದೇ ಮನ್ನಣೆಯಿಂದ ಗುರುತಿಸುತ್ತಾರೆ. ಭಾರತಕ್ಕೆ ಮೂರು ಐಸಿಸಿ ಟ್ರೋಫಿಗಳನ್ನು ಗೆದ್ದು ಕೊಟ್ಟಿದ್ದು ಮಾಸ್ಟರ್ ಪ್ಲಾನರ್ ಧೋನಿಯ ನಾಯಕತ್ವಕ್ಕೆ ಹಿಡಿದ ಕೈಗನ್ನಡಿ. ಅಲ್ಲದೇ ಭಾರತದ ಚುಟುಕು ಸಮರ ಐಪಿಎಲ್ನ ಯಶಸ್ವಿ ನಾಯಕ. ಈ ಬಾರಿ ಮತ್ತೆ ಅದನ್ನು ಪ್ರೂವ್ ಮಾಡಿದ್ದಾರೆ. ಐದನೇ ಬಾರಿಗೆ ಚೆನ್ನೈ ಸೂಪರ್ ಕಿಂಗ್ಸ್ಗೆ ಟ್ರೋಫಿ ಗೆದ್ದುಕೊಟ್ಟಿದ್ದಾರೆ.
ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ನಲ್ಲಿ ಆಡುವ ಮೂಲಕ ಧೋನಿಯ ರೆಕಾರ್ಡ್ನ್ನು ಹಿಂದಿಕ್ಕಲಿದ್ದಾರೆ. ಈವರೆಗೆ ಮೂವರು ಆಟಗಾರರು ಜಂಟಿಯಾಗಿ ಎರಡನೇ ಸ್ಥಾನವನ್ನು ಅಲಂಕರಿಸಿದ್ದರು. ಆದರೆ ಡಬ್ಲ್ಯೂಟಿಸಿ ಫೈನಲ್ ನಂತರ ವಿರಾಟ್ ಮತ್ತು ಭಾರತ ತಂಡದ ನಾಯಕ ರೋಹಿತ್ ಶರ್ಮಾ ಮಾಹಿಯನ್ನು ಮೂರನೇ ಸ್ಥಾನಕ್ಕೆ ತಳ್ಳಲಿದ್ದಾರೆ.
ಕಿಂಗ್ ಕೊಹ್ಲಿ ಮತ್ತು ಹಿಟ್ ಮ್ಯಾನ್ ರೋಹಿತ್ ಜೂನ್ 7ರಿಂದ 11ರ ವರೆಗೆ ನಡೆಯಲಿರುವ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಅಂತಿಮ ಪಂದ್ಯ ಆಡುವ ಮೂಲಕ 6 ನೇ ಐಸಿಸಿ ಟ್ರೋಫಿಯ ಫೈನಲ್ ಆಡಿದ ಖ್ಯಾತಿಗೆ ಒಳಗಾಗುತ್ತಾರೆ. ಪ್ರಸ್ತುತ ಧೋನಿ, ವಿರಾಟ್, ರೋಹಿತ್ ಸದ್ಯ ತಲಾ ಐದು ಬಾರಿ ಐಸಿಸಿ ಫೈನಲ್ ಆಡಿದ್ದಾರೆ. ಡಬ್ಲ್ಯೂಟಿಸಿ ಫೈನಲ್ನಿಂದ ಧೋನಿ ಮೂರನೇ ಸ್ಥಾನವನ್ನು ಪಡೆಯುತ್ತಾರೆ. ಇನ್ನು ಭಾರತದಲ್ಲಿ ನಡೆಯಲಿರುವ ಏಕದಿನ ವಿಶ್ವಕಪ್ನಲ್ಲಿ ಭಾರತ ಫೈನಲ್ ಪ್ರವೇಶಿಸಿದಲ್ಲಿ ಇಬ್ಬರು ಅಗ್ರಸ್ಥಾನಕ್ಕೆ ಏರಲಿದ್ದಾರೆ.
5 ಐಸಿಸಿ ಫೈನಲ್ ಆಡಿರುವ ಧೋನಿ: ಮಹೇಂದ್ರ ಸಿಂಗ್ ಧೋನಿ ಎರಡು ವಿಶ್ವ ಕಪ್ ಮತ್ತು ಒಂದು ಚಾಂಪಿಯನ್ಸ್ ಟ್ರೋಫಿ ಸೇರಿ 3 ಐಸಿಸಿ ಟ್ರೋಫಿಗಳನ್ನು ನಾಯಕರಾಗಿ ಭಾರತಕ್ಕೆ ತಂಡಿದ್ದಾರೆ. 2007ರ ಟಿ20 ವಿಶ್ವಕಪ್, 2011 ಏಕದಿನ ವಿಶ್ವಕಪ್ ಮತ್ತು 2013ರ ಚಾಂಪಿಯನ್ಸ್ ಟ್ರೋಫಿ ಗೆದ್ದಿದ್ದರು. 2014ರ ಟಿ20 ವಿಶ್ವಕಪ್ ಫೈನಲ್, 2017 ಚಾಂಪಿಯನ್ಸ್ ಟ್ರೋಫಿಯ ಫೈನಲ್‌ಗಳಲ್ಲೂ ಆಡಿದ್ದರು.