ದುಬೈ:ಪಾಕಿಸ್ತಾನ ಕ್ರಿಕೆಟ್ ತಂಡದ ಕ್ಯಾಪ್ಟನ್ ಬಾಬರ್ ಅಜಮ್ ಇದೀಗ ಅಂತಾರಾಷ್ಟ್ರೀಯ ಏಕದಿನ ಕ್ರಿಕೆಟ್ನಲ್ಲಿ ನಂಬರ್ 1 ಸ್ಥಾನಕ್ಕೆ ಲಗ್ಗೆ ಹಾಕಿದ್ದು, ಈ ಮೂಲಕ ಟೀಂ ಇಂಡಿಯಾ ಕ್ಯಾಪ್ಟನ್ ವಿರಾಟ್ ಕೊಹ್ಲಿ ಹಿಂದಿಕ್ಕಿದ್ದಾರೆ.
ಬರೋಬ್ಬರಿ ಮೂರು ವರ್ಷಗಳ ಬಳಿಕ ವಿರಾಟ್ ಕೊಹ್ಲಿ ಏಕದಿನ ನಂಬರ್ 1 ಪಟ್ಟ ಕಳೆದುಕೊಂಡಿದ್ದು, ರನ್ ಮಷಿನ್ ವಿರಾಟ್ ಕೊಹ್ಲಿ ನೀಡಿದ್ದ ಸಲಹೆಯಿಂದಲೇ ಇದೀಗ ಅವರನ್ನ ಪಾಕ್ ಕ್ರಿಕೆಟಿಗ ಹಿಂದಿಕ್ಕಿದ್ದಾರೆ. ಐಸಿಸಿ ನೂತನವಾಗಿ ರಿಲೀಸ್ ಮಾಡಿರುವ ಪಟ್ಟಿಯಲ್ಲಿ ಬಾಬರ್ 865 ಅಂಕಗಳಿಸಿದ್ದು, ವಿರಾಟ್ ಕೊಹ್ಲಿ 857 ಅಂಕಗಳೊಂದಿಗೆ ಎರಡನೇ ಸ್ಥಾನದಲ್ಲಿದ್ದಾರೆ.
ಮೂರು ಮಾದರಿ ಕ್ರಿಕೆಟ್ನಲ್ಲಿ ಅದ್ಭುತ ಪ್ರದರ್ಶನ ನೀಡುತ್ತಿರುವ ಬಾಬರ್ ಅಜಮ್ ಇದೀಗ ಈ ಸ್ಥಾನಕ್ಕೇರಲು ಕಾರಣವಾಗಿದ್ದು, ವಿರಾಟ್ ಕೊಹ್ಲಿ ನೀಡಿರುವ ಸಲಹೆ ಎಂಬುದು ಗಮನಾರ್ಹ ವಿಚಾರವಾಗಿದೆ.
ಇದನ್ನೂ ಓದಿ: ಅಗ್ರಪಟ್ಟದ ಕಿರೀಟ ಕಳೆದುಕೊಂಡ ಕಿಂಗ್ ಕೊಹ್ಲಿ: ಏಕದಿನ ರ‍್ಯಾಂಕಿಂಗ್ ಮುಡಿಗೇರಿಸಿಕೊಂಡ ಪಾಕ್ ಆಟಗಾರ
ವಿರಾಟ್ ನೀಡಿದ್ರೂ ಈ ಸಲಹೆ:ಈ ಹಿಂದೆ ವಿರಾಟ್ ಕೊಹ್ಲಿ ಜತೆ ಮಾತನಾಡುವ ಅವಕಾಶ ಸಿಕ್ಕಾಗ, ನೆಟ್ನಲ್ಲಿ ಅಭ್ಯಾಸ ಮಾಡುವಾಗ ಅದನ್ನ ಮೈದಾನದಲ್ಲಿ ಆಡುವ ಪಂದ್ಯದ ರೀತಿಯಲ್ಲೇ ಗಂಭೀರವಾಗಿ ತೆಗೆದುಕೊಳ್ಳುವಂತೆ ತಿಳಿಸಿದ್ದರು. ಗಂಭೀರತೆಯಿಂದ ನೆಟ್ನಲ್ಲಿ ಬ್ಯಾಟ್ ಬೀಸಿದಾಗ ಮಾತ್ರ ಪಂದ್ಯಗಳಲ್ಲಿ ಉತ್ತಮ ಪ್ರದರ್ಶನ ನೀಡಲು ಸಾಧ್ಯ ಎಂಬ ಮಾತು ಅವರು ಹೇಳಿದ್ದರು ಎಂದು ಅಜಮ್ ಹೇಳಿಕೊಂಡಿದ್ದಾರೆ. ಈಗ ನೆಟ್ನಲ್ಲಿ ನಾನು ಉತ್ತಮವಾಗಿ ಆಡದಿದ್ದರೆ ಅದು ನನ್ನ ಬ್ಯಾಟಿಂಗ್ ಪ್ರದರ್ಶನದ ಮೇಲೂ ಪರಿಣಾಮ ಬೀರುತ್ತಿದೆ. ಇದರಿಂದ ನಾನು ಅನೇಕ ಸಹ ಒತ್ತಡಕ್ಕೂ ಒಳಗಾಗಿದ್ದೇನೆ ಎಂದಿದ್ದಾರೆ.
ಕೊಹ್ಲಿ ಸಲಹೆ ಪಡೆದುಕೊಳ್ಳುವುದಕ್ಕಿಂತಲೂ ಮೊದಲು ನೆಟ್ನಲ್ಲಿ ನಾನು ಅಷ್ಟೊಂದು ಗಂಭೀರವಾಗಿ ಬ್ಯಾಟಿಂಗ್ ಮಾಡುತ್ತಿರಲಿಲ್ಲ. ಇದು ಮೈದಾನದಲ್ಲಿ ನನ್ನ ಬ್ಯಾಟಿಂಗ್ ಮೇಲೆ ವ್ಯತಿರಿಕ್ತ ಪರಿಣಾಮ ಸಹ ಬೀರಿತು ಎಂದು ತಿಳಿಸಿದ್ದಾರೆ.
ಐಸಿಸಿ ಏಕದಿನ ನಂಬರ್ 1 ಪಟ್ಟಕ್ಕೆ ಲಗ್ಗೆ ಹಾಕಿರುವ ಪೈಕಿ ಬಾಬರ್ ಅಜಮ್ ಪಾಕ್ನ 4ನೇ ಬ್ಯಾಟ್ಸಮನ್ ಆಗಿದ್ದು, ಅದಕ್ಕೆ ಮುಖ್ಯ ಕಾರಣವಾಗಿರುವುದು ಟೀಂ ಇಂಡಿಯಾ ಕ್ಯಾಪ್ಟನ್ ವಿರಾಟ್ ಕೊಹ್ಲಿ ಎಂಬುದು ಗಮನಾರ್ಹ ಸಂಗತಿಯಾಗಿದೆ.