ಕ್ರಿಡಾರಂಗದಲ್ಲಿ ಫಿಟ್ ನೆಸ್ ವಿಚಾರ ಬಂದಾಗ ಹೆಚ್ಚು ದೈಹಿಕವಾಗಿ ಸದೃಢವಾಗಿರುವ ಕ್ರೀಡಾಪಟುಗಳಲ್ಲಿ ಒಬ್ಬರೆಂದರೆ ಅದು ಭಾರತೀಯ ಕ್ರಿಕೆಟ್ ತಂಡದ ಮಾಜಿ ನಾಯಕ ವಿರಾಟ್ ಕೊಹ್ಲಿ. ಅವರು ತಮ್ಮ ಅಸಾಧಾರಣ ಫಿಟ್ನೆಸ್ಗೆ ಹೆಸರಾಗಿದ್ದಾರೆ. ಅವರ ಬಾಯಿ ಚಪಲವನ್ನು ಬಿಟ್ಟು ವ್ಯಾಯಾಮಕ್ಕೆ ಹೆಚ್ಚು ಒತ್ತು ನೀಡಿದ್ದು, ಅವರು ಗಾಯದ ಕಾರಣಕ್ಕೆ ತಂಡದಿಂದ ಹೊರಗುಳಿದದ್ದು ಉದಾಹರಣೆಯೇ ಇಲ್ಲ. ಕೇವಲ ಬಿಸಿಸಿಐ ಅವರಿಗೆ ವಿಶ್ರಾಂತಿಗಾಗಿ ಕೆಲ ಸಿರೀಸ್ಗಳನ್ನು ಆಡಿಸದಿರಬಹುದು ಅಷ್ಟೇ.
ವಿರಾಟ್ ಕೊಹ್ಲಿ ಇತ್ತೀಚೆಗೆ ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡ ಪೋಸ್ಟ್‌ನಲ್ಲಿ ತಮ್ಮ ಬಲಿಷ್ಠ ಕಾಲುಗಳ ಬಗ್ಗೆ ಸ್ಟೋರಿ ಒಂದನ್ನು ಹಂಚಿಕೊಂಡಿದ್ದಾರೆ. ಚಿತ್ರದಲ್ಲಿ ಅವರು ಲೆಗ್ ಪ್ರೆಸ್ ವ್ಯಾಯಾಮದಲ್ಲಿ ತೊಡಗಿಸಿಕೊಂಡಿದ್ದಾರೆ ಮತ್ತು ಅವರ ಮಂಡಿರಜ್ಜು ಸ್ನಾಯುಗಳನ್ನು ಬಲಪಡಿಸಲು ತರಬೇತುದಾರರಿಂದ ಮಾರ್ಗದರ್ಶನ ಪಡೆಯುತ್ತಿದ್ದಾರೆ. ಲೆಗ್ ವರ್ಕೌಟ್‌ಗಳಿಗೆ ಆದ್ಯತೆ ನೀಡುವ ಪ್ರಾಮುಖ್ಯತೆಯನ್ನು ಕೊಹ್ಲಿ ಒತ್ತಿ ಹೇಳಿದ್ದಾರೆ.
ಎಂಟು ವರ್ಷಗಳಿಂದ ಜಿಮ್ ದಿನಚರಿಗೆ ಬದ್ಧನಾಗಿರುತ್ತೇನೆ, ಇದು ಅವರ ಒಟ್ಟಾರೆ ಆರೋಗ್ಯ ಮತ್ತು ಫಿಟ್‌ನೆಸ್ ಅನ್ನು ಕಾಪಾಡಿಕೊಳ್ಳಲು ಪ್ರಮುಖ ಗುಟ್ಟು ಎಂದು ಹಂಚಿಕೊಂಡಿದ್ದಾರೆ. ಅವರು ಇನ್ಸ್ಟಾ ಮತ್ತು ಟ್ವಿಟರ್ನಲ್ಲಿ ಫೊಟೋ ಹಂಚಿಕೊಂಡು "ಪ್ರತಿದಿನವೂ ಲೆಗ್ ಡೇ ಆಗಿರಬೇಕು, ಸತತ 8 ವರ್ಷಗಳಿಂದ, ಮುಂದುವರೆಯುತ್ತದೆ" ಎಂದು ಪೋಸ್ಟ್ಗೆ ಶೀರ್ಷಿಕೆ ನೀಡಿದ್ದಾರೆ.
34 ವರ್ಷದ ಕಿಂಗ್ ಕೊಹ್ಲಿ ಫೀಲ್ಡ್ನಲ್ಲಿ ಹೆಚ್ಚು ಆ್ಯಕ್ಟಿವ್ ಆಗಿರುವ ಆಟಗಾರ. ಅಷ್ಟು ಚುರುಕಾಗಿರಲು ಅವರ ದಿನಚರಿಯೇ ಕಾರಣ. ಭಾರತ ತಂಡದಲ್ಲಿ ಅತೀ ವೇಗವಾಗಿ ರನ್ ಮಾಡುವ ಬ್ಯಾಟರ್ ಇದ್ದರೆ ಅದು ವಿರಾಟ್ ಕೊಹ್ಲಿ. ಎರಡು ಕ್ರೀಸ್ನ ನಡುವೆ ಚುರುಕಾಗಿ ರನ್ ತೆಗೆದುಕೊಳ್ಳುತ್ತಾರೆ. ಅವರ ಓಟ ಯುವ ಬ್ಯಾಟರ್ಗಳನ್ನು ನಾಚಿಸುವಂತಿರುತ್ತದೆ. ಮೈದಾನದಲ್ಲಿ ಫೀಲ್ಡಿಂಗ್, ಕ್ಯಾಚ್ ಮುಂತಾದವುಗಳಲ್ಲಿ ವಿರಾಟ್ ಅವರಷ್ಟು ಕ್ವಿಕ್ ಯಾರೂ ಕಾಣಸಿಗುವುದಿಲ್ಲ.