ಪೋರ್ಟ್ ಆಫ್ ಸ್ಪೇನ್:ವೆಸ್ಟ್ ಇಂಡೀಸ್ ವಿರುದ್ಧದ ಎರಡನೇ ಮತ್ತು ಅಂತಿಮ ಟೆಸ್ಟ್ ಪಂದ್ಯ ಆಡಲಿರುವ ಟೀಂ ಇಂಡಿಯಾದ ರನ್ ಮಿಷನ್ ವಿರಾಟ್ ಕೊಹ್ಲಿ ಇತಿಹಾಸ ಬರೆಯಲಿದ್ದಾರೆ. ಇದು ಅವರ 500ನೇ ಅಂತಾರಾಷ್ಟ್ರೀಯ ಪಂದ್ಯವಾಗಿದ್ದು, ಕಿಂಗ್ ಕೊಹ್ಲಿಗೆ ಶುಭಾಶಯಗಳ ಮಹಾಪೂರವೇ ಹರಿದುಬರುತ್ತಿವೆ.
ವೆಸ್ಟ್ ಇಂಡೀಸ್ ವಿರುದ್ಧದ ಮೊದಲ ಟೆಸ್ಟ್ನಲ್ಲಿ 76 ರನ್ ಗಳಿಸಿ ಶತಕ ತಪ್ಪಿಸಿಕೊಂಡ ಕೊಹ್ಲಿ, ತಂಡಕ್ಕೆ ತಮ್ಮದೇ ಆದ ಕೊಡುಗೆ ನೀಡವ ಮೂಲಕ ಗೆಲುವಿಗೆ ಕಾರಣರಾದರು. ಏಕದಿನ, ಟಿ20 ಮತ್ತು ಚುಟಕು ಪಂದ್ಯಗಳ ಹೊರತಾಗಿ ಟೆಸ್ಟ್ನಲ್ಲಿಯೂ ಭರವಸೆ ಹೆಚ್ಚಿಸಿಕೊಂಡಿರುವ ಅವರು ಇಂದು ನಡೆಯುವ ಎರಡನೇ ಮತ್ತು ಅಂತಿಮ ಟೆಸ್ಟ್ ಪಂದ್ಯದಲ್ಲಿಯೂ ಉತ್ತಮ ಕೊಡುಗೆ ನೀಡುವ ಉತ್ಸಾಹದಲ್ಲಿದ್ದಾರೆ. ಇದು ಅವರ 500ನೇ ಅಂತಾರಾಷ್ಟ್ರೀಯ ಪಂದ್ಯವಾಗಿದ್ದರಿಂದ ಅಭಿಮಾನಿಗಳು ಕೂಡ ಕಾತರತೆಯಿಂದ ಕಾಯುತ್ತಿದ್ದಾರೆ.
ಇದುವರೆಗೆ 110 ಟೆಸ್ಟ್, 274 ಏಕದಿನ, 115 ಟಿ20 ಹಾಗೂ 237 ಐಪಿಎಲ್ ಪಂದ್ಯಗಳನ್ನಾಡಿರುವ ಕಿಂಗ್ ಕೊಹ್ಲಿ, 20 ಸಾವಿರಕ್ಕೂ ಹೆಚ್ಚು ರನ್ ಗಳಿಸಿದ್ದಾರೆ. ಎಲ್ಲ ಮಾದರಿಯಲ್ಲಿಯೂ ಉತ್ತಮ ಫಾರ್ಮ್‌ನಲ್ಲಿರುವ ಕೊಹ್ಲಿ, ಸಾರ್ವಕಾಲಿಕ ಶ್ರೇಷ್ಠ ಬ್ಯಾಟ್ಸ್‌ಮನ್‌ಗಳಲ್ಲಿ ಒಬ್ಬರಾಗಿ ಜನ ಮನ್ನಣೆ ಗಳಿಸಿದ್ದಾರೆ. ಇಂದು ತಮ್ಮ 500ನೇ ಅಂತಾರಾಷ್ಟ್ರೀಯ ಪಂದ್ಯಕ್ಕೆ ಅಣಿಯಾಗುತ್ತಿದ್ದು, ಅವರ ಅಭಿಮಾನಿಗಳು ಸೇರಿದಂತೆ ಕ್ರಿಕೆಟ್ ದಿಗ್ಗಜರಾದ ರಾಹುಲ್ ದ್ರಾವಿಡ್, ಆಕಾಶ್ ಚೋಪ್ರಾ, ವಾಸಿಂ ಜಾಫರ್, ಪ್ರಗ್ಯಾನ್ ಓಜಾ ಸೇರಿದಂತೆ ಅವರಿಗೆ ಶುಭಾಶಯ ಕೋರಿದ್ದಾರೆ. ಬಿಸಿಸಿಐ ವಿಶೇಷ ಪೋಸ್ಟರ್ ಕೂಡ ಮಾಡಿ ಟ್ವಿಟರ್ನಲ್ಲಿ ಶೇರ್ ಮಾಡಿಕೊಂಡಿದೆ.
''ಕೊಹ್ಲಿ ಪಾಲಿಗೆ ಇಂದಿನ ಟೆಸ್ಟ್ 500ನೇ ಪಂದ್ಯ ಎಂಬುದು ನನಗೆ ಗೊತ್ತಿಲ್ಲ. ಕೇವಲ ಒಂದು ಅಂಕಿಗೆ ನಾನು ಶ್ರೇಷ್ಠ ಎಂದು ಹೇಳಲಾರೆ. ಅದನ್ನು ಕೇಳಿದ ಮಾತ್ರ ನನಗೆ ಅದ್ಭುತ ಎಂದೆನಿಸುತ್ತದೆ. ಇದು ನಿಜಕ್ಕೂ ರೋಮಾಂಚನ. ಅವರು ಅನೇಕ ಹುಡುಗ ಮತ್ತು ಹುಡುಗಿಯರಿಗೆ ಸ್ಫೂರ್ತಿಯಾಗಿದ್ದಾರೆ. ಇದರಲ್ಲಿ ಯಾವುದೇ ಅನುಮಾನ ಬೇಡ. ಕೊಹ್ಲಿ ಅವರ ಸಾಧನೆ ಬಗ್ಗೆ ಅವರ ಅಂಕಿ - ಅಂಶಗಳು ಹೇಳುತ್ತವೆ. ಇವುಗಳೆಲ್ಲ ಪುಸ್ತಕದಲ್ಲಿ ಉಲ್ಲೇಖವಾಗುತ್ತಿವೆ. ಇದಕ್ಕೆಲ್ಲ ಕಾರಣ ಅವರ ಮಾಡಿದ ತ್ಯಾಗ ಹಾಗೂ ಪಟ್ಟ ಕಷ್ಟ. ಇದು ಹೊರಗಿನವರಿಗೆ ಯಾರಿಗೂ ಕಾಣಿಸುವುದಿಲ್ಲ. ಇದರ ಫಲವಾಗಿ ಅವರು ಇದೀಗ 500ನೇ ಪಂದ್ಯವಾಡುತ್ತಿದ್ದಾರೆ. ಅವರು ಇನ್ನೂ ತುಂಬಾ ಬಲಶಾಲಿಯಾಗಿದ್ದಾರೆ, ತುಂಬಾ ಫಿಟ್ ಆಗಿದ್ದಾರೆ. ಕೊಹ್ಲಿ ಸದ್ಯ 500 ಪಂದ್ಯಗಳನ್ನು ಆಡುವ ಮೂಲಕ ತಂಡಕ್ಕೆ ಶಕ್ತಿ ಮತ್ತು ಉತ್ಸಾಹವನ್ನು ತುಂಬಿದ್ದಾರೆ." ಎಂದು ಟೀಂ ಇಂಡಿಯಾ ಹೆಡ್ ಕೋಚ್ ರಾಹುಲ್ ದ್ರಾವಿಡ್ ಅವರು ಕೊಹ್ಲಿಯ ಸಾಧನೆಯನ್ನು ಮುಕ್ತಕಂಠದಿಂದ ಗುಣಗಾನ ಮಾಡಿದ್ದಾರೆ.