ಬೆಂಗಳೂರು:ಬಾಲ್ಯದಲ್ಲಿ ಕಂಡ ಕನಸನ್ನು ಸಾಧಿಸಲು ಪ್ರತಿಯೊಬ್ಬರು ಬೆನ್ನಟ್ಟುತ್ತಾರೆ. ಆದರೆ, ಅದು ಸಾಕಾರವಾಗುವುದು ಕೆಲವೊಬ್ಬರಿಗೆ. ಅದರಲ್ಲಿ ಒಬ್ಬರು ಕ್ರಿಕೆಟಿಗ ವಿರಾಟ್ ಕೊಹ್ಲಿ ಕೂಡಾ ಒಬ್ಬರು. ತಾವು ಬಾಲ್ಯದಲ್ಲಿ ಕಂಡ ಎಲ್ಲ ಕನಸುಗಳನ್ನು ಅವರು ನನಸು ಮಾಡಿದ್ದಾರೆ. ಎಷ್ಟ ಮಟ್ಟಿಗೆ ಎಂದರೆ, ಹಿರೋಯಿನ್ ನೇ ಮದುವೆಯಾಗಬೇಕು ಎಂಬ ಕನಸು ಕೂಡ ಈಡೇರಿದೆ ಎಂದಿದ್ದಾರೆ ಅವರನ್ನು ಹತ್ತಿರದಿಂದ ಬಲ್ಲವರು.
ವಿರಾಟ್ ಕೊಹ್ಲಿ ಮೊದಲ ಕೋಚ್ ಆಗಿದ್ದ ರಾಜ್ ಕುಮಾರ್ ಶರ್ಮಾ ಮತ್ತು ವಿರಾಟ್ ಬಾಲ್ಯ ಸ್ನೇಹಿತ ಶೈಲಾಜ್ ಮತ್ತು ಅವರ ತಾಯಿ ನೇಹ ಸೊಂದಿ ವಿರಾಟ್ ಕೊಹ್ಲಿ ಬಗೆಗಿನ ಗೊತ್ತಿರದ ಆಸಕ್ತಿಕರ ಸಂಗತಿಯನ್ನು ಹಂಚಿಕೊಂಡಿದ್ದಾರೆ.
ಸಿಕ್ಕಾಪಟ್ಟೆ ತುಂಟ ಹುಡುಗ: ಬಾಲ್ಯದಲ್ಲಿ ವಿರಾಟ್ ತರಬೇತುದಾರರಾಗಿದ್ದ ಶರ್ಮಾ ಮಾತನಾಡಿ, ವಿರಾಟ್ ಬಾಲ್ಯದಲ್ಲಿ ತುಂಬಾ ನಾಟಿ ಆಗಿದ್ದ. ಜೊತೆಗೆ ಅಷ್ಟೇ ಸಮರ್ಪಣೆಯ ಹುಡುಗ. 1998ರಲ್ಲಿ ಮೇ 30ರಂದು ಅವರ ತಂದೆ ಮತ್ತು ಅಣ್ಣನ ಜೊತೆಗೆ ನನ್ನ ಬಳಿ ಬಂದ. ಅಭ್ಯಾಸ ಆರಂಭಿಸಿದ್ದರು, ಕೆಲವೇ ದಿನಗಳಲ್ಲಿ ಆತ ಬೇರೆಯವರಿಗಿಂತ ವಿಭಿನ್ನ ಎಂಬುದು ಸಾಬೀತು ಮಾಡಿದರು. ಆತ ಸಿಕ್ಕಾಪಟ್ಟೆ ಕ್ರಿಯಾಶೀಲ, ಹೈಪರ್, ನಾಟಿಬಾಯ್ ಆಗಿದ್ದ. ಮೊದಲ ದಿನದಿಂದಲೇ ಆತ ಪ್ರಭಾವಶಾಲಿಯಾಗಿದ್ದ ಎಂದಿದ್ದಾರೆ
ನಟಿಯನ್ನೇ ಮದುವೆಯಾಗುತ್ತೇನೆ: ಇನ್ನು ವಿರಾಟ್ ಬಾಲ್ಯ ಸ್ನೇಹಿತರ ತಾಯಿ, ಆತ ಚಿಕ್ಕವನಾಗಿದ್ದಾಗ ಹೇಳಿದ ಮಾತು ಎಷ್ಟು ನಿಜವಾಗಿದೆ ಎಂದಿದ್ದಾರೆ. ಒಂದಿ ದಿನ ಮದನ್ ಲಾಲ್ ಅಕಾಡೆಮಿ ಸಮೀಪ ದೊಡ್ಡ ಜಾಹೀರಾತಿನ ಪರದೆಯಲ್ಲಿ ಇದ್ದಿದ್ದ ದೊಡ್ಡ ನಟಿಯನ್ನು ನೋಡಿದ ವಿರಾಟ್, ನಾನು ಕೂಡ ದೊಡ್ಡವನಾದಾಗ ದೊಡ್ಡ ವ್ಯಕ್ತಿಯಾಗಿ ಬಾಲಿವುಡ್ ನಟಿಯನ್ನು ಮದುವೆಯಾಗುತ್ತೇನೆ ಎಂದಿದ್ದ. ಕಡೆಗೆ ಹಾಗೇ ಆಗಿದೆ. ಈಗ ಆ ಮಾತು ನೆನಪಿಸಿಕೊಂಡರೆ, ಅಚ್ಚರಿ ಜೊತೆಗೆ ಹೇಳಿದಂತೆ ಸಾಧಿಸಿದ ಎಂಬ ಖುಷಿಯಾಗುತ್ತದೆ ಎಂದಿದ್ದಾರೆ.