ಕರ್ನಾಟಕ

karnataka

ETV Bharat / sports

Vijay Hazare Trophy: ಪುದುಚೆರಿ ವಿರುದ್ಧ ಕರ್ನಾಟಕಕ್ಕೆ 236 ರನ್​ಗಳ ಅಮೋಘ ವಿಜಯ

ವಿಜಯ್ ಹಜಾರೆ ಟ್ರೋಫಿ ಏಕದಿನ ಕ್ರಿಕೆಟ್ ಟೂರ್ನಿಯಲ್ಲಿ ಪುದುಚೆರಿ ತಂಡದ ವಿರುದ್ಧ ಮನೀಶ್​ ಪಾಂಡೆ ನೇತೃತ್ವದ ಕರ್ನಾಟಕವು 236 ರನ್​ಗಳ ಬೃಹತ್​ ವಿಜಯ ಸಾಧಿಸಿದೆ.

Vijay Hazare Trophy
ವಿಜಯ್ ಹಜಾರೆ ಟ್ರೋಫಿ

By

Published : Dec 9, 2021, 3:15 AM IST

Updated : Dec 9, 2021, 8:30 AM IST

ತಿರುವನಂತಪುರಂ:ವಿಜಯ್ ಹಜಾರೆ ಟ್ರೋಫಿ ಏಕದಿನ ಕ್ರಿಕೆಟ್ ಟೂರ್ನಿಯಲ್ಲಿ ಪುದುಚೆರಿ ತಂಡವನ್ನು ಕೇವಲ 53 ರನ್​ಗೆ ಆಲೌಟ್​ ಮಾಡಿದ ಕರ್ನಾಟಕವು 236 ರನ್​ಗಳ ಬೃಹತ್​ ಅಂತರದ ಜಯ ದಾಖಲಿಸಿದೆ.

ತಿರುವನಂತಪುರಂನಲ್ಲಿ ಬುಧವಾರ ನಡೆದ ಪಂದ್ಯದಲ್ಲಿ ಟಾಸ್​ ಗೆದ್ದ ಪುದುಚೆರಿ ತಂಡವು ಕರ್ನಾಟಕಕ್ಕೆ ಬ್ಯಾಟಿಂಗ್​ಗೆ ಆಹ್ವಾನಿಸಿತು. ಕರ್ನಾಟಕವು ಆರಂಭಿಕ ಆಟಗಾರ ಸಮರ್ಥ್​ (95), ಸಿದ್ದಾರ್ಥ್​​ (61), ನಾಯಕ ಮನೀಶ್​ ಪಾಂಡೆ (ಅಜೇಯ 64), ಎಸ್​. ಶರತ್​​ (55) ಅವರ ಅರ್ಧಶತಕಗಳ ನೆರವಿನಿಂದ 50 ಓವರ್​ಗಳಲ್ಲಿ 5 ವಿಕೆಟ್​ಗೆ 289 ರನ್​ ಪೇರಿಸಿತು. ಪುದುಚೆರಿ ಪರ ಸುಬೋತ್​, ಸಾಗರ್​ ತಲಾ ಎರಡು ಹಾಗೂ ಫಾಬಿದ್​ ಅಹ್ಮದ್​ ಒಂದು ವಿಕೆಟ್​ ಪಡೆದರು.

ಬಳಿಕ 290 ರನ್​ ಗುರಿ ಬೆನ್ನಟ್ಟಿದ ಪುದುಚೆರಿ ಆರಂಭದಿಂದಲೇ ವಿಕೆಟ್​ ಕಳೆದುಕೊಂಡು ಒತ್ತಡಕ್ಕೆ ಸಿಲುಕಿತು. ಕೇವಲ 17.3 ಓವರ್​ಗೆ ತಂಡದ ಇನ್ನಿಂಗ್ಸ್​ ಅಂತ್ಯಕಂಡಿದ್ದು, ಮೂವರು ಆಟಗಾರರು ಮಾತ್ರ ಎರಡಂಕಿ ಮೊತ್ತ ತಲುಪಿದರು. ವಿ ಕೌಶಿಕ್​ (3 ವಿಕೆಟ್​), ಜೆ. ಸುಚಿಥ್​​ (4 ವಿಕೆಟ್​) ದಾಳಿಗೆ ತತ್ತರಿಸಿದ ಪುದುಚೆರಿ 53 ರನ್​ಗೆ ಸರ್ವಪತನ ಕಂಡಿತು. ಈ ಮೂಲಕ ಕರ್ನಾಟಕ ತಂಡವು 236 ರನ್​ಗಳ ಬೃಹತ್​ ಅಂತರದ ಜಯ ಸಾಧಿಸಿದೆ.

ಇದನ್ನೂ ಓದಿ:ODI ಗೆಲುವಿನ ಸರಾಸರಿಯಲ್ಲಿ ಕೊಹ್ಲಿಯೇ ಅಗ್ರ... ಭಾರತದ ನಾಯಕನಾಗಿ ವಿರಾಟ್​ ಸಾಧನೆ ಹೀಗಿದೆ

Last Updated : Dec 9, 2021, 8:30 AM IST

ABOUT THE AUTHOR

...view details