ರಾಜ್‌ಕೋಟ್ (ಗುಜರಾತ್): ಡೆತ್ ಓವರ್ನಲ್ಲಿ ಮಿಂಚಿನ ದಾಳಿಯನ್ನು ಮಾಡಿದ ಹರ್ಷಲ್ ಪಟೇಲ್ ವಿಜಯ್ ಹಜಾರೆ ಟ್ರೋಫಿ ಫೈನಲ್ನಲ್ಲಿ ಹರಿಯಾಣ 30 ರನ್‌ಗಳ ಗೆಲುವು ದಾಖಲಿಸುವಲ್ಲಿ ಪ್ರಮುಖ ಪಾತ್ರ ವಹಿಸಿದರು. ಶನಿವಾರ ಇಲ್ಲಿನ ಸೌರಾಷ್ಟ್ರ ಕ್ರಿಕೆಟ್ ಅಸೋಸಿಯೇಷನ್ ಸ್ಟೇಡಿಯಂನಲ್ಲಿ ನಡೆದ ಫೈನಲ್ ಪಂದ್ಯದಲ್ಲಿ ಹರಿಯಾಣ ನೀಡಿದ್ದ 287 ರನ್ ಗುರಿ ಬೆನ್ನಟ್ಟಿದ ರಾಜಸ್ಥಾನ 48 ಓವರ್ಗೆ 257 ರನ್ ಕಲೆಹಾಕಿ ಸರ್ವಪತನ ಕಂಡಿತು. ಇದರ ಫಲವಾಗಿ ಹರಿಯಾಣ ದೇಶೀಯ ಏಕದಿನ ಟ್ರೋಫಿಯ ಚಾಂಪಿಯನ್ ಆಗಿ ಹೊರಹೊಮ್ಮಿತು.
ಟಾಸ್ ಗೆದ್ದು ಬ್ಯಾಟಿಂಗ್ ಮಾಡಿದ ಹರಿಯಾಣ 50 ಓವರ್ಗೆ 8 ವಿಕೆಟ್ ಕಳೆದುಕೊಂಡು 287 ರನ್ ಗುರಿ ನೀಡಿತ್ತು. ರಾಜಸ್ಥಾನ ಕುನಾಲ್ ಸಿಂಗ್ ರಾಥೋರ್ (65 ಎಸೆತಗಳಲ್ಲಿ 79 ರನ್) ನಿಧಾನಗತಿ ಆಟ ಹಾಗೂ ಆರಂಭಿಕ ಆಟಗಾರ ಅಭಿಜಿತ್ ತೋಮರ್ (129 ಎಸೆತಗಳಲ್ಲಿ 106 ರನ್) ಶತಕದ ನೆರವಿನಿಂದ 4 ವಿಕೆಟ್‌ಗೆ 201 ರನ್ ಗಳಿಸಿ ರಾಜಸ್ಥಾನ ಕಠಿಣ ಹೋರಾಟ ನೀಡಿತ್ತು. ಮೊದಲ ಐದು ಓವರ್ನಲ್ಲಿ ದುಬಾರಿ ಆಗಿದ್ದ ಹರ್ಷಲ್ ಪಟೇಲ್ ಕೊನೆಯ ಓವರ್ ವೇಳೆಗೆ ಬಾಲ್ ಹಳೆಯದಾದಾಗ ತಮ್ಮ ಕಮಾಲ್ ತೋರಿದರು. ಕೊನೆಯ ಓವರ್ಗಳಲ್ಲಿ ರನ್ ಕಡಿವಾಣ ಹಾಕಿದ್ದಲ್ಲದೇ ವಿಕೆಟ್ ಕಿತ್ತು 48 ಓವರ್ಗೆ ರಾಜಸ್ಥಾನ ಆಲ್ಔಟ್ ಮಾಡುವಲ್ಲಿ ಪ್ರಮುಖ ಪಾತ್ರ ವಹಿಸಿದರು.