ಮಂಗಲಪುರಂ(ಆಂಧ್ರಪ್ರದೇಶ): ವಿಜಯ್ ಹಜಾರೆ ಟ್ರೋಫಿಯ ಮತ್ತೊಂದು ಪಂದ್ಯದಲ್ಲಿ ಕರ್ನಾಟಕ ಬಲಿಷ್ಠ ಮುಂಬೈ ವಿರುದ್ಧ 7 ವಿಕೆಟ್ಗಳ ಜಯ ಸಾಧಿಸಿದ್ದು, ಈ ಮೂಲಕ ಆಡಿರುವ ಮೂರು ಪಂದ್ಯಗಳ ಪೈಕಿ ಎರಡರಲ್ಲಿ ಗೆಲುವು ದಾಖಲು ಮಾಡಿದೆ.
ಮುಂಬೈ ನೀಡಿದ್ದ 209 ರನ್ಗಳ ಸಾಧಾರಣ ಗುರಿ ಬೆನ್ನಟ್ಟಿದ ಕರ್ನಾಟಕ ಆರಂಭಿಕರಾದ ರವಿಕುಮಾರ್ ಸಮರ್ಥ ಮತ್ತು ರೋಹನ್ ಕದಂ ಅವರ ಜವಾಬ್ದಾರಿಯುತ ಬ್ಯಾಟಿಂಗ್ ಪ್ರದರ್ಶನದಿಂದ 45.3 ಓವರ್ಗಳಲ್ಲಿ ಕೇವಲ 3 ವಿಕೆಟ್ ಕಳೆದುಕೊಂಡು ಗುರಿ ಮುಟ್ಟಿತು.
ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಲು ಕಣಕ್ಕಿಳಿದ ಮುಂಬೈ ತಂಡ ಉತ್ತಮ ಆರಂಭ ಪಡೆದುಕೊಂಡಿತು. ಆರಂಭಿಕರಾಗಿ ಕಣಕ್ಕಿಳಿದ ಯಶಸ್ವಿ ಜೈಸ್ವಾಲ್ ಹಾಗೂ ಅರ್ಮಾನ್ ಜಾಫರ್ ತಂಡಕ್ಕೆ 95ರನ್ಗಳ ಜೊತೆಯಾಟ ನೀಡಿದರು. ಈ ವೇಳೆ, 43 ರನ್ಗಳಿಕೆ ಮಾಡಿದ್ದ ಜಾಫರ್ ವಿಕೆಟ್ ಒಪ್ಪಿಸಿದ್ರೆ, ಬೆನ್ನಲ್ಲೇ ಜೈಸ್ವಾಲ್ 61ರನ್ಗಳಿಕೆ ಮಾಡಿದ್ದ ವೇಳೆ ಸಮರ್ಥ್ ಓವರ್ನಲ್ಲಿ ಔಟ್ ಆದರು.
ಇದಾದ ಬಳಿಕ ಮೈದಾನಕ್ಕಿಳಿದ ಅನುಭವಿ ಸೂರ್ಯಕುಮಾರ್ ಯಾದವ್ 8, ಶಿವಂ ದುಬೆ 6, ದವಳ್ ಕುಲಕರ್ಣಿ 10ರನ್ಗಳಿಕೆ ಮಾಡಿ ವಿಕೆಟ್ ಒಪ್ಪಿಸಿದರು. ಮಧ್ಯಮ ಕ್ರಮಾಂಕದಲ್ಲಿ ಬ್ಯಾಟ್ ಬೀಸಿದ ಹಾರ್ದಿಕ್ ತಾಮೊರೆ 46ರನ್ಗಳಿಕೆ ಮಾಡಿ ತಂಡ 200ರ ಗಡಿ ದಾಟುವಂತೆ ಮಾಡಿದರು.