ಐಪಿಎಲ್ 2023ರ ಡಿಜಿಟಲ್ ಪ್ರಸಾರಕರಾದ ಹಕ್ಕನ್ನು ವಯಾಕಾಮ್ 18 ಪಡೆದುಕೊಂಡಿದೆ. ಎರಡು ತಿಂಗಳು ನಡೆಯುವ ಮಿಲಿಯನ್ ಡಾಲರ್ ಕ್ರೀಡಾ ಮನರಂಜನೆಯ ವೀಕ್ಷಕ ವಿವರಣೆ ಹಾಗೂ ಪಂದ್ಯದ ಬಗ್ಗೆ ಮಾತನಾಡಲು ದೊಡ್ಡ ಹಾಗೂ ಅನುಭವಿ ತಜ್ಞರ ಸಮಿತಿಯನ್ನು ವಯಾಕಾಮ್ 18 ಪ್ರಕಟಿಸಿದೆ. ಐಪಿಎಲ್ 16ನೇ ಆವೃತ್ತಿ ಇದೇ 31ರಿಂದ ಆರಂಭವಾಗಲಿದ್ದು, ಮೇ 28ರ ವರೆಗೆ ನಡೆಯಲಿದೆ.
ಈ ಕ್ರೀಡೆಗೆ ಸ್ಟಾರ್ ವಿವರಣೆಗಾರರ ದೊಡ್ಡ ಪಟ್ಟಿಯನ್ನು ಇಂದು ಪ್ರಕಟಿಸಿದೆ. ಅದರಲ್ಲಿ ಸುರೇಶ್ ರೈನಾ, ಕ್ರಿಸ್ ಗೇಲ್, ಎಬಿ ಡಿವಿಲಿಯರ್ಸ್, ಅನಿಲ್ ಕುಂಬ್ಳೆ, ರಾಬಿನ್ ಉತ್ತಪ್ಪ, ಆರ್‌ಪಿ ಸಿಂಗ್, ಇಯಾನ್ ಮಾರ್ಗನ್, ಪಾರ್ಥಿವ್ ಪಟೇಲ್ ಮತ್ತು ಸ್ಕಾಟ್ ಸ್ಟೈರಿಸ್ ಅವರನ್ನು ಒಳಗೊಂಡ 2023 ರ ಐಪಿಎಲ್‌ನ ಪ್ಯಾನೆಲ್ ಇರಲಿದೆ.
ಅವರೊಂದಿಗೆ ಜಹೀರ್ ಖಾನ್, ಬ್ರೆಟ್ ಲೀ, ಗ್ರೇಮ್ ಸ್ಮಿತ್, ಗ್ರೇಮ್ ಸ್ವಾನ್ ಸೇರಿದಂತೆ ಸೂಪರ್‌ಸ್ಟಾರ್‌ಗಳು ಸಹ ಕೆಲ ಪಂದ್ಯಕ್ಕೆ ಸೇರಿಕೊಳ್ಳಲಿದ್ದಾರೆ. ರೈನಾ ಮತ್ತು ಉತ್ತಪ್ಪ ಅವರಿಗೆ ಈಗಾಗಲೇ ಪ್ಯಾನಲ್ ವಿಮರ್ಶೆಯ ಅನುಭವ ಇದ್ದು, ಐಪಿಎಲ್ನಲ್ಲಿ ಆಡಿದ ಅನುಭವವೂ ಇದೆ. ಅತ್ತ ಕ್ರಿಸ್ ಗೇಲ್ ಅವರು ದಖಲೆಯ 175 ರನ್ ಆಟಗಾರರಾಗಿದ್ದಾರೆ. ಕುಂಬ್ಳೆ ಮತ್ತು ಜೂಲನ್ ಗೋಸ್ವಾಮಿ ಚಾಂಪಿಯನ್‌ಶಿಪ್ ವಿಜೇತದ ಅನುಭವವನ್ನು ಹಂಚಿಕೊಳ್ಳಲಿದ್ದಾರೆ. ಪಟೇಲ್ ಮತ್ತು ಕೇದಾರ್ ಜಾಧವ್ ಲೈವ್ ಅವರೇಜ್ನ ಬಗ್ಗೆ ಹೆಚ್ಚಿನ ಅನುಭವವನ್ನು ಹಂಚಿಕೊಳ್ಳಲಿದ್ದಾರೆ.
ಸ್ಟೈರಿಸ್ ಅವರು ಡೆಕ್ಕನ್ ಚಾರ್ಜರ್ಸ್ ಮತ್ತು ಚೆನ್ನೈ ಸೂಪರ್ ಕಿಂಗ್ಸ್ ಸೇರಿದಂತೆ ಅನೇಕ ಫ್ರಾಂಚೈಸಿಗಳೊಂದಿಗೆ ಚಾಂಪಿಯನ್ ಆಗಿದ್ದಾರೆ. ವಿಶ್ವದ ಅತ್ಯಂತ ವೇಗದ ಬೌಲರ್‌ಗಳಲ್ಲಿ ಒಬ್ಬರಾದ ಮತ್ತು ಕೋಲ್ಕತ್ತಾ ನೈಟ್ ರೈಡರ್ಸ್‌ನ ಚಾಂಪಿಯನ್ ತಂಡ ಆಟಗಾರರಾಗಿದ್ದ ಬ್ರೇಟ್ ಲೀ ಇರಲಿದ್ದಾರೆ. ವಿಶ್ವಕಪ್ ವಿಜೇತ ನಾಯಕ ಮೋರ್ಗನ್ ಸಹ ಪ್ಯಾನಲ್ನಲ್ಲಿ ಇರಲಿದ್ದಾರೆ.