ಕರ್ನಾಟಕ

karnataka

ETV Bharat / sports

ಆರಂಭಿಕರ ಸ್ಥಾನಕ್ಕೆ ಬೇರೆ ಉತ್ತಮ ಆಟಗಾರಿದ್ದಾರೆ: ರಾಹುಲ್​ ಬಗ್ಗೆ ವೆಂಕಟೇಶ್​ ಪ್ರಸಾದ್​ ಹೀಗೆ ಹೇಳಿದ್ದು ಯಾಕೆ?

ಕೆ ಎಲ್​ ರಾಹುಲ್​ ಅವರ ಬ್ಯಾಟಿಂಗ್​ಗೆ ಹಿರಿಯ ಬೌಲರ್​ ಅಸಮಾಧಾನ - ಉಪನಾಯಕ ಸ್ಥಾನಕ್ಕೆ ಅಶ್ವಿನ್​ ಉತ್ತಮ ಎಂಬ ಅಭಿಪ್ರಾಯ - ಗಿಲ್​, ಸರ್ಫರಾಜ್​ಗೆ ಸ್ಥಾನ ನೀಡದಿದ್ದಕ್ಕೆ ಬೇಸರ - ವೆಂಕಟೇಶ್​ ಪ್ರಸಾದ್​ ಸರಣಿ ಟ್ವೀಟ್​​

Venkatesh Prasad vs KL Rahul
ವೆಂಕಟೇಶ್​ ಪ್ರಸಾದ್​ vs ಕೆ ಎಲ್​ ರಾಹುಲ್​

By

Published : Feb 11, 2023, 7:15 PM IST

ನವದೆಹಲಿ: ಬಾರ್ಡರ್​ ಗವಾಸ್ಕರ್​ ಟ್ರೋಫಿಯ ಮೊದಲ ಪಂದ್ಯದಲ್ಲಿ ಭಾರತ ಸ್ಪಿನ್​ ಬೌಲಿಂಗ್​ನ ಸಹಾಯದಿಂದ ಇನ್ನಿಂಗ್ಸ್​ ಮತ್ತು 132 ರನ್​ಗಳ ಅಭೂತ ಪೂರ್ವ ಗೆಲುವು ದಾಖಲಿಸಿದೆ. ನಾಗ್ಪುರ ಪಿಚ್​ನಲ್ಲಿ ಉಭಯ ತಂಡಗಳ ಬ್ಯಾಟರ್​ಗಳು ವಿಫಲತೆ ಕಂಡಿದ್ದಾರೆ. ಭಾರತದ ಆರಂಭಿಕ ಆಟಗಾರ ಇತ್ತೀಚೆಗಷ್ಟೇ ವಿವಾಹವಾಗಿ ಆಟಕ್ಕೆ ಮರಳಿರುವ ಕೆ ಎಲ್​ ರಾಹುಲ್​ ಬ್ಯಾಟಿಂಗ್​ಗೆ ಅಪಸ್ವರ ಕೇಳಿ ಬಂದಿದೆ.

ರೆಡ್ ಬಾಲ್ ಕ್ರಿಕೆಟ್‌ನಲ್ಲಿ ಬ್ಯಾಟರ್ ಮತ್ತು ಟೀಂ ಇಂಡಿಯಾ ಉಪನಾಯಕ ಕೆಎಲ್ ರಾಹುಲ್ ಪ್ರದರ್ಶನದ ಬಗ್ಗೆ ನಿರಾಸೆ ವ್ಯಕ್ತಪಡಿಸಿರುವ ಭಾರತದ ಮಾಜಿ ವೇಗಿ ವೆಂಕಟೇಶ್ ಪ್ರಸಾದ್, ಅವರು ಸೂಚಿಸುವ ತಂಡದಲ್ಲಿ ರೋಹಿತ್​​ ಅವರಿಗೆ ನಾಯಕ ಹಾಗೂ ಅಶ್ವಿನ್​ಗೆ ಉಪನಾಯಕನ ಸ್ಥಾನವನ್ನು ನೀಡುವುದು ಉಚಿತ ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ನಾಗ್ಪುರದಲ್ಲಿ ಆಸ್ಟ್ರೇಲಿಯಾ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ಕೆಎಲ್ ರಾಹುಲ್ ಅವರ ಕೆಟ್ಟ ಫಾರ್ಮ್ ಮುಂದುವರೆದಿದೆ. ಮೊದಲ ಇನ್ನಿಂಗ್ಸ್‌ನಲ್ಲಿ ಕೇವಲ 20 ರನ್ ಗಳಿಸಿ ರಾಹುಲ್​ ಔಟ್​ ಆದರು. ಅಂತಾರಾಷ್ಟ್ರೀಯ ಕ್ರಿಕೆಟ್​ಗೆ ಪದಾರ್ಪಣೆ ಮಾಡಿ 8 ವರ್ಷ ಆಗಿದ್ದು, 46 ಟೆಸ್ಟ್‌ಗಳಲ್ಲಿ 34 ರ ಸರಾಸರಿಯಲ್ಲಿ ರಾಹುಲ್​ ಬ್ಯಾಟ್​ ಬೀಸುತ್ತಿದ್ದಾರೆ ಎಂದು ಅಂಕಿ - ಅಂಶಗಳ ಮೂಲಕ ಅಸಮಾಧಾನ ಹೊರಹಾಕಿದ್ದಾರೆ.

ಟ್ವಿಟರ್​ನಲ್ಲಿ ವೆಂಕಟೇಶ್​ ಪ್ರಸಾದ್​,"ಕೆಎಲ್ ರಾಹುಲ್ ಅವರ ಪ್ರತಿಭೆ ಮತ್ತು ಸಾಮರ್ಥ್ಯದ ಬಗ್ಗೆ ನನಗೆ ಸಾಕಷ್ಟು ಗೌರವವಿದೆ. ಆದರೆ ದುಃಖಕರ ಎಂದರೆ ಅವರ ಪ್ರದರ್ಶನದ ಸರಾಸರಿಯಾಗಿದೆ. 46 ಟೆಸ್ಟ್‌ ಪಂದ್ಯಗಳನ್ನು ಆಡಿರುವ ರಾಹುಲ್​ 34ರ ಸರಾಸರಿಯಲ್ಲಿ ಬ್ಯಾಟ್​ ಬೀಸುತ್ತಿದ್ದಾರೆ. ಅವರು ಅಂತಾರಾಷ್ಟ್ರೀಯ ಟೆಸ್ಟ್​ ಕ್ರಿಕೆಟ್​ಗೆ ಪದಾರ್ಪಣೆ ಮಾಡಿ 8 ವರ್ಷಗಳಾಗುತ್ತಾ ಬಂದಿದೆ. ರಾಹುಲ್​ಗೆ ಅನೇಕ ಅವಕಾಶಗಳನ್ನು ನೀಡಲಾಗಿದೆ" ಎಂದು ಬರೆದು ಕೊಂಡಿದ್ದಾರೆ.

ಶುಭಮನ್​ ಗಿಲ್​ ಮತ್ತು ಸರ್ಫರಾಜ್​ ಖಾನ್​ ಕೂಡ ಟೆಸ್ಟ್​ ಪಂದ್ಯದಲ್ಲಿ ಆರಂಭಿಕರಾಗಿ ಕಣಕ್ಕಿಳಿಯಲು ಸಮರ್ಥರು ಎಂಬ ಅಭಿಪ್ರಾಯ ತಿಳಿಸಿದ್ದಾರೆ. ಈ ಬಗ್ಗೆ ಸರಣಿ ಟ್ವೀಟ್​​ ​ ಮಾಡಿರುವ ಅವರು ಮುಂದುವರೆದು," ಅವಕಾಶಕ್ಕಾಗಿ ಹಲವಾರು ಆಟಗಾರರು ಕಾಯುತ್ತಿದ್ದಾರೆ. ಹಲವರಿಗೆ ಅವಕಾಶ ಕೊಡುವ ಸಾಧ್ಯತೆಯೂ ಇದೆ. ಶುಭ್‌ಮನ್ ಗಿಲ್ ಉತ್ತಮ ಲಯದಲ್ಲಿದ್ದಾರೆ. ಸರ್ಫರಾಜ್ ದೇಶಿ ಕ್ರಿಕೆಟ್​ನಲ್ಲಿ ಶತಕಗಳ ಮೇಲೆ ಶತಕ ಗಳಸಿ ಸಾಮರ್ಥ್ಯ ತೋರಿಸಿದ್ದಾರೆ. ರಾಹುಲ್​ ಗಿಂತ ಅವಕಾಶಕ್ಕಾಗಿ ಇನ್ನೂ ಅನೇಕರಿದ್ದಾರೆ. ಕೆಲವರಿಗೆ ಕೊನೆಯಲ್ಲಿ ಅವಕಾಶ ಸಿಕ್ಕರೂ ಅದೃಷ್ಟದಿಂದ ಉಳಿಸಿ ಕೊಳ್ಳಬೇಕಾಗುತ್ತದೆ" ಎಂದಿದ್ದಾರೆ.

"ರಾಹುಲ್​ ಅವರಿಗೆ ಉಪನಾಯಕನ ಸ್ಥಾನ ನೀಡಲಾಗಿರುವುದು ಇನ್ನಷ್ಟು ವಿಚಿತ್ರವಾದುದ್ದು. ಅಶ್ವಿನ್​ ಅವರಿಗೆ ಟೆಸ್ಟ್​ ಕ್ರಿಕೆಟ್​ನ ಉತ್ತಮ ಜ್ಞಾನ ಇದೆ. ಅವರಿಗೆ ಉಪನಾಯಕನ ಸ್ಥಾನ ನೀಡಬಹುದು. ಇಲ್ಲವಾದಲ್ಲಿ ಚೇತೇಶ್ವರ ಪೂಜಾರ ಮತ್ತು ರವೀಂದ್ರ ಜಡೇಜಾ ಇದ್ದಾರೆ. ಅವರಿಗೂ ಸ್ಥಾನ ನೀಡಬಹುದು. ಮಯಾಂಕ್ ಅಗರ್ವಾಲ್ ಮತ್ತು ಹನುಮ ವಿಹಾರಿ ಟೆಸ್ಟ್​ ವಿಭಾಗದಲ್ಲಿ ಉತ್ತಮ ಪ್ರದರ್ಶನ ನೀಡುತ್ತಿದ್ದಾರೆ ಅವರಿಗೂ ಅವಕಾಶ ನೀಡಬಹುದು" ಎಂದು ಟ್ವಿಟರ್​​​ ​ನಲ್ಲಿ ಉಲ್ಲೇಖಿಸಿದ್ದಾರೆ.

2022ರಲ್ಲಿ ರಾಹುಲ್​ ಅವರು ನಿಧಾನ ಗತಿಯ ಬ್ಯಾಟಿಂಗ್​ನಿಂದ ಟೀಕೆಗೆ ಒಳಗಾಗಿದ್ದರು. ಏಷ್ಯಾ ಕಪ್​ನಲ್ಲಿ ​ಅವರು ಉತ್ತಮ ಸರಾಸರಿಯಲ್ಲಿ ಬ್ಯಾಟ್ ಮಾಡಿ ಟೀಕೆಗೆ "ಸಮಯ ನೋಡಿ ಉತ್ತಮ ರೇಟಿಂಗ್​ ಪಾಯಿಂಟ್​ಗಾಗಿ ಆಡಬಹುದು" ಎಂದಿದ್ದರು. ಆದರೆ ಕಳೆದ ವರ್ಷ ನಾಲ್ಕು ಟೆಸ್ಟ್‌ಗಳಲ್ಲಿ 17.12ರ ಸರಾಸರಿಯಲ್ಲಿ 137 ರನ್ ಗಳಿಸಿದ್ದರು, ಒಂದು ಅರ್ಧಶತಕವನ್ನು ಮಾತ್ರ ಒಳಗೊಂಡಿತ್ತು. ಕಳೆದ ವರ್ಷ 10 ಏಕದಿನ ಪಂದ್ಯಗಳನ್ನಾಡಿದ್ದು 27.88 ಸರಾಸರಿಯಲ್ಲಿ 251 ರನ್ ಗಳಿಸಿದರು, ಎರಡು ಅರ್ಧ ಶತಕ ಮತ್ತು 73 ಅವರ ಅತ್ಯುತ್ತಮ ಸ್ಕೋರ್ ಆಗಿದೆ. 16 ಟಿ20 ಯಲ್ಲಿ 28.93 ರ ಸರಾಸರಿಯಲ್ಲಿ 434 ರನ್ ಗಳಿಸಿದ್ದಾರೆ. ಒಟ್ಟಾರೆಯಾಗಿ ಕಳೆದ ವರ್ಷ 30 ಪಂದ್ಯಗಳಲ್ಲಿ 25.68 ರ ಸರಾಸರಿಯಲ್ಲಿ 822 ರನ್​ಗಳನ್ನು ಗಳಿಸಿದ್ದಾರೆ, ಇದರಲ್ಲಿ ಒಂಬತ್ತು ಅರ್ಧ ಶತಕಗಳು ಮಾತ್ರವೇ ಇವೆ.

ಇದನ್ನೂ ಓದಿ:ಪಂದ್ಯ ಶ್ರೇಷ್ಠ ಪ್ರಶಸ್ತಿ ಪಡೆದ ಜಡ್ಡುಗೆ 25 ಶೇಕಡಾ ದಂಡ ವಿಧಿಸಿದ ಐಸಿಸಿ: ಜಡೇಜಾ ಮಾಡಿದ ಆ ತಪ್ಪೇನು?

ABOUT THE AUTHOR

...view details