ಲಂಡನ್: ಎರಡು ದಿನಗಳಿಂದ ಆನೆಯೊಂದು ಬ್ಯಾಟಿಂಗ್ ಮಾಡುವ ವಿಡಿಯೋ ಸಾಮಾಜಿಕ ಜಾಲಾತಾಣದಲ್ಲಿ ವೈರಲ್ ಆಗುತ್ತಿದೆ. ಈ ವಿಡಿಯೋವನ್ನು ನೋಡಿರುವ ಇಂಗ್ಲೆಂಡ್ ಮಾಜಿ ನಾಯಕ ಮೈಕಲ್ ವಾನ್ ಈ ಆನೆ ಖಂಡಿತ ಇಂಗ್ಲಿಷ್ ಪಾಸ್ಪೋರ್ಟ್ ಹೊಂದಿರುತ್ತದೆ ಎಂದು ತಮಾಷೆಯಾಗಿ ಪ್ರತಿಕ್ರಿಯಿಸಿದ್ದಾರೆ.
ಆನೆಯೊಂದು ಚೆಂಡನ್ನು ಅದರ ಕಡೆಗೆ ಎಸೆದಾಗ ಅದನ್ನು ಬ್ಯಾಟ್‌ನಿಂದ ಹೊಡೆಯುವ ವಿಡಿಯೋಗೆ ಬಾರಿ ವೈರಲ್ ಆಗುತ್ತಿದೆ. ಈ ವಿಡಿಯೋವನ್ನು ಭಾರತ ಬ್ಯಾಟಿಂಗ್ ದಿಗ್ಗಜ ಸೆಹ್ವಾಗ್ ಸೇರಿದಂತೆ ಹಲವಾರು ಮಂದಿ ಸಾಮಾಜಿಕ ಜಾಲಾತಾಣದಲ್ಲಿ ಶೇರ್ ಮಾಡುತ್ತಿದ್ದಾರೆ.