ಬೆಂಗಳೂರು: ಕಪಿಲ್ ದೇವ್ ಅವರ 434 ವಿಕೆಟ್ಗಳ ದಾಖಲೆಯನ್ನು ಮುರಿದಿರುವುದಕ್ಕೆ ತುಂಬಾ ಗೌರವವೆನ್ನಿಸುತ್ತಿದೆ ಎಂದು ಭಾರತದ ಅನುಭವಿ ಆಫ್ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ಹೇಳಿದ್ದಾರೆ. ಇದೇ ಸಂದರ್ಭದಲ್ಲಿ, ತಾವು ಚಿಕ್ಕಂದಿನಲ್ಲಿ 2ನೇ ಕಪಿಲ್ ದೇವ್ ಆಗಬೇಕೆಂದು ಬ್ಯಾಟಿಂಗ್ ಮತ್ತು ಮಧ್ಯಮ ವೇಗದಲ್ಲಿ ಬೌಲಿಂಗ್ ಮಾಡುತ್ತಿದ್ದೆ ಎಂದು ತಿಳಿಸಿದರು.
ಶ್ರೀಲಂಕಾ ವಿರುದ್ಧ ಮೊಹಾಲಿಯಲ್ಲಿ ತಮ್ಮ 85ನೇ ಟೆಸ್ಟ್ ಪಂದ್ಯವನ್ನಾಡಿದ 35 ವರ್ಷದ ಅಶ್ವಿನ್ ಎರಡನೇ ಇನ್ನಿಂಗ್ಸ್ನಲ್ಲಿ ಚರಿತ್ ಅಸಲಂಕಾ ಅವರ ವಿಕೆಟ್ ಪಡೆಯುವ ಮೂಲಕ ಕಪಿಲ್ ದೇವ್ ಅವರ 434 ವಿಕೆಟ್ಗಳ ದಾಖಲೆ ಮೀರಿದ ಸಾಧನೆ ಮಾಡಿದ್ದರು. ಈ ಮೂಲಕ ಭಾರತದ ಪರ ಹೆಚ್ಚು ಟೆಸ್ಟ್ ವಿಕೆಟ್ ಪಡೆದ 2ನೇ ಬೌಲರ್ ಎನಿಸಿಕೊಂಡರು.
"ದಾಖಲೆ ಬ್ರೇಕ್ ಮಾಡಿರುವುದು ತುಂಬಾ ಗೌರವ ಎನ್ನಿಸುತ್ತಿದೆ. 28 ವರ್ಷಗಳ ಹಿಂದೆ ರಿಚರ್ಡ್ ಹ್ಯಾಡ್ಲಿ ಅವರ ದಾಖಲೆಯನ್ನು ಕಪಿಲ್ ಪಾಜಿ ಮುರಿದ ಸಂದರ್ಭದಲ್ಲಿ ನಾನು ನನ್ನ ತಂದೆಯ ಜೊತೆ ಕುಳಿತು ಅವರನ್ನು ಹುರಿದುಂಬಿಸುತ್ತಿದ್ದೆ" ಎಂದು ತಮ್ಮ ಯೂಟ್ಯೂಬ್ ಚಾನೆಲ್ನಲ್ಲಿ ಹೇಳಿಕೊಂಡಿದ್ದಾರೆ.