ಹೊಸದಿಲ್ಲಿ:8 ಬಾರಿಯ ಒಲಿಂಪಿಕ್ಸ್ ಚಿನ್ನದ ಪದಕ ವಿಜೇತ ಉಸೇನ್ ಬೋಲ್ಟ್ ಓಟದ ಸ್ಪರ್ಧೆಯಿಂದ ನಿವೃತ್ತರಾಗಿದ್ದಾರೆ. ಆದರೆ, ಇದೀಗ ಅವರು ಕ್ರಿಕೆಟ್ ಮೇಲೆ ದೃಷ್ಟಿ ನೆಟ್ಟಿದ್ದಾರೆ ಎನ್ನಲಾಗಿದೆ.
ವೆಸ್ಟ್ ಇಂಡೀಸ್ನ ಕ್ರಿಕೆಟ್ ಸ್ಟಾರ್ಗಳಾದ ಕ್ರಿಸ್ಗೇಲ್ ಮತ್ತು ಆ್ಯಂಡ್ರ್ಯೂ ರಸೆಲ್ತಂತಹ ದಿಗ್ಗಜರು ಪಾಲ್ಗೊಂಡ ಟೂರ್ನಿಗಳಲ್ಲಿ ಬೋಲ್ಟ್ ಕ್ರಿಕೆಟ್ ಆಡಲು ಇಚ್ಛಿಸಿದ್ದಾರೆ ಎನ್ನಲಾಗಿದೆ. ಇದಕ್ಕೆ ಇಂಬು ನೀಡುವಂತೆ ಅರಬ್ ದೇಶದ ಟಿ-20 ಕ್ರಿಕೆಟ್ನಲ್ಲಿ ಆಡಲು ಬೋಲ್ಟ್ಗೆ ಆಹ್ವಾನ ನೀಡಲಾಗಿದೆ ಎಂದು ತಿಳಿದು ಬಂದಿದೆ.
ಅರಬ್ ದೇಶಗಳಲ್ಲಿ ಹಲವಾರು ಟಿ-20 ಕ್ರಿಕೆಟ್ ಪಂದ್ಯಾವಳಿಗಳು ನಡೆಯುತ್ತಿವೆ. ಇದರಲ್ಲಿ ಉಸೇನ್ ಬೋಲ್ಟ್ ಕ್ರಿಕೆಟ್ ಆಡಲು ತಂಡವೊಂದು ಆಹ್ವಾನಿಸಿದೆ ಎನ್ನಲಾಗಿದೆ.
ಈ ಹಿಂದೆ ಉಸೇನ್ ಬೋಲ್ಟ್ ಹಲವಾರು ಸಂದರ್ಶನದಲ್ಲಿ 'ನಾನು ಮೊದಲಿನಿಂದಲೂ ಕ್ರಿಕೆಟ್ ಆಟದ ಮೇಲೆ ಆಸಕ್ತಿ ಹೊಂದಿದ್ದೆ. ನನ್ನ ತಂದೆಯ ಇಚ್ಛೆಯನುಸಾರ ರನ್ನಿಂಗ್ ಟ್ರ್ಯಾಕ್ಗೆ ಇಳಿಯಬೇಕಾಯಿತು.