ನ್ಯೂಯಾರ್ಕ್: ಅಮೆರಿಕದ ಹದಿಹರೆಯದ ಆಟಗಾರ್ತಿ ಕೊಕೊ ಗೌಫ್ ವಿಶ್ವದ ನಂ.1 ಆಟಗಾರ್ತಿ ಅರೀನಾ ಸಬಲೆಂಕಾ ಅವರನ್ನು ಸೋಲಿಸಿ ಯುಎಸ್ ಓಪನ್ ಅನ್ನು ತವರು ನೆಲದಲ್ಲಿ ಗೆದ್ದುಕೊಂಡರು. ಗೌಫ್ ಶನಿವಾರ ರಾತ್ರಿ ಆರ್ಥರ್ ಆಶ್ ಸ್ಟೇಡಿಯಂನಲ್ಲಿ ಎರಡು ಗಂಟೆಗಳ ಕಾಲ ನಡೆದ ಹಣಾಹಣಿಯಲ್ಲಿ ನಂ.1 ಶ್ರೇಯಾಂಕದ ಸಬಲೆಂಕಾ ವಿರುದ್ಧ 2-6, 6-3, 6-2 ರಿಂದ ಮೇಲುಗೈ ಸಾಧಿಸುವ ಮೂಲಕ ತಮ್ಮ ಮೊದಲ ಪ್ರಮುಖ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡರು.
19 ವರ್ಷ ವಯಸ್ಸಿನ ಕೊಕೊ ಗೌಫ್ ಟೀನೇಜ್ನಲ್ಲಿ ಪ್ರಶಸ್ತಿಗೆ ಗೆದ್ದ 10ನೇ ಆಟಗಾರ್ತಿ ಆಗಿದ್ದಾರೆ. ಸೆರೆನಾ ವಿಲಿಯಮ್ಸ್ 1999 ರಲ್ಲಿ 17 ವರ್ಷ ವಯಸ್ಸಿನವರಾಗಿದ್ದಾಗ ಯುಎಸ್ ಓಪನ್ ಗೆದ್ದಿದ್ದರು. ಅವರ ನಂತರ ತವರು ಪ್ರಶಸ್ತಿಯನ್ನು ಟೀನೇಜ್ನಲ್ಲಿ ಗೆದ್ದ ಆಟಗಾರ್ತಿ ಎಂಬ ಖ್ಯಾತಿ ಪಡೆದಿದ್ದಾರೆ. ವಿಲಿಯಮ್ಸ್ ಜೊತೆಗೆ, ಗೌಫ್ ನ್ಯೂಯಾರ್ಕ್‌ನ 20 ವರ್ಷದೊಳಗಿನ ಗೌರವ ಪಟ್ಟಿಯಲ್ಲಿ ಟ್ರೇಸಿ ಆಸ್ಟಿನ್, ಸ್ಟೆಫಾನಿ ಗ್ರಾಫ್, ಮೋನಿಕಾ ಸೆಲೆಸ್, ಮಾರ್ಟಿನಾ ಹಿಂಗಿಸ್, ಸ್ವೆಟ್ಲಾನಾ ಕುಜ್ನೆಟ್ಸೊವಾ, ಮರಿಯಾ ಶರಪೋವಾ, ಬಿಯಾಂಕಾ ಆಂಡ್ರೀಸ್ಕು ಮತ್ತು ಎಮ್ಮಾ ರಾಡುಕಾನು ಅವರ ಪಟ್ಟಿಗೆ ಸೇರಿದ್ದಾರೆ.
ಕಳೆದ ವರ್ಷದ ಪ್ರವಾಸದಲ್ಲಿ ರೋಲ್ಯಾಂಡ್ ಗ್ಯಾರೋಸ್‌ನಲ್ಲಿ ನೇರ ಸೆಟ್‌ಗಳಿಂದ ತಮ್ಮ ಮೊದಲ ಗ್ರ್ಯಾಂಡ್ ಸ್ಲ್ಯಾಮ್ ಸಿಂಗಲ್ಸ್ ಫೈನಲ್‌ನಲ್ಲಿ ಇಗಾ ಸ್ವಿಯಾಟೆಕ್‌ಗೆ ವಿರುದ್ಧ ಸೋತ ನಂತರ, ಗೌಫ್ ತನ್ನ ಎರಡನೇ ಫೈನಲ್ ಪಂದ್ಯದಲ್ಲಿ ಉತ್ತರ ಆರಂಭವನ್ನು ಕಾಣಲಿಲ್ಲ. ಸಬಲೆಂಕಾ ಮೊದಲ ಸೆಟ್‌ನಲ್ಲಿ ಟೂರ್ನಿಯಲ್ಲಿ ಆಡಿಕೊಂಡು ಬಂದಿದ್ದ ಫಾರ್ಮ್ನ್ನು ಮುಂದುವರೆಸಿದರು. ಇದರಿಂದ ಸಬಲೆಂಕಾ ಮೊದಲ ಸೆಟ್ನ್ನು 6-2 ರಿಂದ ವಶಪಡಿಸಿಕೊಂಡಿದ್ದರು. ನಂತರ ಎರಡು ಸೆಟ್‌ನಲ್ಲಿ ಅಮೆರಿಕನ್ ಆಟಗಾರ್ತಿ ಕಮ್ಬ್ಯಾಕ್ ಮಾಡಿದರು. ಎರಡನೇ ಸೆಟ್‌ನಲ್ಲಿ ಸಬಲೆಂಕಾ ಅವರನ್ನು 6-3 ರಿಂದ ಸೋಲಿಸಿದರೆ, ನಿರ್ಣಾಯಕ ಮೂರನೇ ಸೆಟ್ನ್ನು 6-2 ರಿಂದ ಗೆದ್ದು ಪ್ರಶಸ್ತಿಗೆ ಮುತ್ತಿಟ್ಟರು.