ಹೈದರಾಬಾದ್ (ತೆಲಂಗಾಣ):ಬಾಲಿವುಡ್ ನಟಿ ಊರ್ವಶಿ ರೌಟೇಲಾ ಮತ್ತೆ ಸುದ್ದಿಯಲ್ಲಿದ್ದಾರೆ. ಕ್ರಿಕೆಟಿಗ ರಿಷಬ್ ಪಂತ್ 25 ನೇ ವರ್ಷಕ್ಕೆ ಕಾಲಿಟ್ಟಿದ್ದು, ಅಭಿಮಾನಿಗಳಿಂದ ಶುಭಾಶಯಗಳ ಮಹಾಪೂರವೇ ಹರಿದುಬಂದಿದೆ. ಬಾಲಿವುಡ್ ನಟಿ ಊರ್ವಶಿ ರೌಟೇಲಾ ಕೂಡ ಹೆಸರೇಳದೇ ಜನ್ಮದಿನದ ಶುಭಕೋರಿದ್ದು, ಇದು ರಿಷಬ್ ಪಂತ್ಗೆ ಹೇಳಿದ ಶುಭಾಶಯ ಎಂದು ಅಭಿಮಾನಿಗಳು ಭಾವಿಸಿದ್ದಾರೆ.
ನಟಿ ಊರ್ವಶಿ ಇನ್ಸ್ಟಾಗ್ರಾಮ್ನಲ್ಲಿ ಹರಿಬಿಟ್ಟಿರುವ ವಿಡಿಯೋದಲ್ಲಿ ಫ್ಲೈಯಿಂಗ್ ಕಿಸ್ ನೀಡಿದ್ದು, ಹ್ಯಾಪಿ ಬರ್ತಡೇ ಎಂದು ಬರೆದುಕೊಂಡಿದ್ದಾರೆ. ಮಂಗಳವಾರ ರಿಷಬ್ ಪಂತ್ ಜನ್ಮದಿನವಾದ ಕಾರಣ ಅವರು ಕ್ರಿಕೆಟಿಗನಿಗೇ ವಿಷ್ ಮಾಡಿದ್ದು ಎಂದು ಅಭಿಮಾನಿಗಳು ಲಿಂಕ್ ಮಾಡಿದ್ದಾರೆ.
ಊರ್ವಶಿ ಮತ್ತೆ ಟ್ರೋಲ್:ಕ್ರಿಕೆಟಿಗನಿಗೆ ಪರೋಕ್ಷವಾಗಿ ವಿಷ್ ಮಾಡಿದ ನಟಿ ಊರ್ವಶಿಯನ್ನು ರಿಷಬ್ ಪಂತ್ ಅಭಿಮಾನಿಗಳು ಟ್ರೋಲ್ ಮಾಡಿದ್ದಾರೆ. ಪಂತ್ ಹೆಸರೇಳಿ ಎಷ್ಟು ಬಾರಿ ಖ್ಯಾತಿ ಪಡೆಯುತ್ತೀರಿ ಎಂದೆಲ್ಲಾ ಪ್ರಶ್ನಿಸಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಈ ವಿಚಾರ ಟ್ರೆಂಡ್ ಆಗಿತ್ತು.