ಕರ್ನಾಟಕ

karnataka

ETV Bharat / sports

ಟಾಸ್​ ಗೆದ್ದು ಫೀಲ್ಡಿಂಗ್​ ಆಯ್ದ ಆರ್​ಸಿಬಿ: ಗೆದ್ದು ಪ್ಲೇ - ಆಫ್​ ಕನಸು ಉಳಿಸಿಕೊಳ್ಳುತ್ತಾ?

ಪ್ಲೇ-ಆಫ್​ ಕನಸು ಉಳಿಸಿಕೊಳ್ಳಲು ಆರ್​ಸಿಬಿ ಪ್ರಯತ್ನ - ಟಾಸ್​ ಗೆದ್ದ ಮಂಧಾನ ಕ್ಷೇತ್ರ ರಕ್ಷಣೆ ಆಯ್ಕೆ - ತಂಡಕ್ಕೆ ಮರಳಿದ ಕನಿಕಾ ಅಹುಜಾ

UP Warriorz vs Royal Challengers Bangalore Women
ಟಾಸ್​ ಗೆದ್ದು ಫೀಲ್ಡಿಂಗ್​ ಆಯ್ದ ಆರ್​ಸಿಬಿ

By

Published : Mar 15, 2023, 7:16 PM IST

ಮುಂಬೈ: ಸತತ ಸೋಲು ಕಂಡಿರುವ ಆರ್​ಸಿಬಿಗೆ ಇಂದು ಗೆಲುವು ಕಂಡರೆ, ಪ್ಲೇ ಆಪ್​ ಕನಸು ಉಳಿದುಕೊಳ್ಳಲಿದೆ. ಇಂದಿನ ಪಂದ್ಯದಲ್ಲೂ ಆರ್​ಸಿಬಿ ಸೋಲನುಭವಿಸಿದರೆ ಲೀಗ್​ನ ಸ್ಪರ್ಧೆಯಿಂದ ಹೊರ ಬೀಳಲಿದೆ. ಕಳೆದ ಪಂದ್ಯದಲ್ಲಿ ಕ್ರೀಡಾಂಗಣ ಬದಲಾದರೂ ರಾಯಲ್ ಚಾಲೆಂಜರ್ಸ್ ಬೆಂಗಳೂರಿನ ಆಟ ಬದಲಾಗಿರಲಿಲ್ಲ. ಡಿವೈ ಪಾಟೀಲ್​ ಸ್ಟೇಡಿಯಂನಲ್ಲಿ ಇಂದು ಆರ್​ಸಿಬಿ ಅಲಿಸ್ಸಾ ಹೀಲಿ ನೇತೃತ್ವದ ಯುಪಿ ವಾರಿಯರ್ಸ್​ ಅನ್ನು ಎದುರಿಸುತ್ತಿದೆ. ಟಾಸ್​ ಗೆದ್ದ ಆರ್​ಸಿಬಿ ತಂಡ ಬೌಲಿಂಗ್​ ಆಯ್ದುಕೊಂಡಿದೆ. ಬೆಂಗಳೂರು ಮತ್ತು ಗುಜರಾತ್​ನಲ್ಲಿ ಒಂದೊಂದು ಬದಲಾವಣೆಗಳಾಗಿದೆ.

ಗುಜರಾತ್​ ಜೈಂಟ್ಸ್​ ಆಡುವ ತಂಡ:ಅಲಿಸ್ಸಾ ಹೀಲಿ(ವಿಕೆಟ್​ ಕೀಪರ್​/ನಾಯಕಿ), ದೇವಿಕಾ ವೈದ್ಯ, ಕಿರಣ್ ನವಗಿರೆ, ಗ್ರೇಸ್ ಹ್ಯಾರಿಸ್, ತಹ್ಲಿಯಾ ಮೆಗ್ರಾತ್, ಸಿಮ್ರಾನ್ ಶೇಖ್, ಸೋಫಿ ಎಕ್ಲೆಸ್ಟೋನ್, ದೀಪ್ತಿ ಶರ್ಮಾ, ಶ್ವೇತಾ ಸೆಹ್ರಾವತ್, ಅಂಜಲಿ ಸರ್ವಾಣಿ, ರಾಜೇಶ್ವರಿ ಗಾಯಕ್ವಾಡ್

ರಾಯಲ್ ಚಾಲೆಂಜರ್ಸ್ ಬೆಂಗಳೂರು ಆಡುವ ತಂಡ:ಸ್ಮೃತಿ ಮಂಧಾನ(ನಾಯಕಿ), ಸೋಫಿ ಡಿವೈನ್, ಎಲ್ಲಿಸ್ ಪೆರ್ರಿ, ಹೀದರ್ ನೈಟ್, ರಿಚಾ ಘೋಷ್ (ವಿಕೆಟ್​ ಕೀಪರ್​), ಶ್ರೇಯಾಂಕಾ ಪಾಟೀಲ್, ದಿಶಾ ಕಸತ್, ಮೇಗನ್ ಶುಟ್, ಆಶಾ ಶೋಬನಾ, ರೇಣುಕಾ ಠಾಕೂರ್ ಸಿಂಗ್, ಕನಿಕಾ ಅಹುಜಾ

ಅಂಕ ಪಟ್ಟಿಯಲ್ಲಿ ಮೂರನೇ ಸ್ಥಾನಕ್ಕೇರಲು ಇಂದಿನ ಪಂದ್ಯದಲ್ಲಿ ಆರ್​ಸಿಬಿ ಗೆಲುವು ಸಾಧಿಸಿದರೆ ಬರಡು ಭೂಮಿಯಲ್ಲಿ ಜಲ ಸಿಕ್ಕಿದಂತಾಗುತ್ತದೆ. ಇಂದಿನ ಪಂದ್ಯದಲ್ಲಿ ಆರ್​ಸಿಬಿ ಗೆಲ್ಲುವುದರ ಜೊತೆಗೆ ಮುಂಬೈ ಇಂಡಿಯನ್ಸ್​ ಮತ್ತು ಡೆಲ್ಲಿ ಕ್ಯಾಪಿಟಲ್ಸ್​ ಕೂಡಾ ಎಲ್ಲ ಪಂದ್ಯದಲ್ಲಿ ಗೆದ್ದರೆ ಕನಸು ಉಳಿಯಲಿದೆ. ಆರ್​ಸಿಬಿ ಇಂದಿನ ಪಂದ್ಯದಲ್ಲಿ ಗೆದ್ದು ಮಿಕ್ಕೆರಡು ಪಂದ್ಯದಲ್ಲೂ ಉತ್ತಮ ಗೆಲುವು ದಾಖಲಿಸಬೇಕಿದೆ.

ಮಾರ್ಚ್ 12 ರಂದು, ವಾರಿಯರ್ಸ್ ಅನ್ನು ಮುಂಬೈ ಇಂಡಿಯನ್ಸ್ 8 ವಿಕೆಟ್‌ಗಳಿಂದ ಸೋಲಿಸಿತು. ಅದೇ ಸಮಯದಲ್ಲಿ, ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ಇದುವರೆಗೆ ಒಂದೇ ಒಂದು ಪಂದ್ಯವನ್ನು ಗೆಲ್ಲಲು ಸಾಧ್ಯವಾಗಿಲ್ಲ. ಇಂದಿನ ಪಂದ್ಯ ಸೇರಿದಂತೆ ಆರ್‌ಸಿಬಿ ಇನ್ನೆರಡು ಪಂದ್ಯಗಳನ್ನು ಆಡಬೇಕಿದೆ.

ಭರ್ಜರಿ ಗೆಲುವು ಸಾಧಿಸಿದ್ದ ಯುಪಿ ವಾರಿಯರ್ಸ್​:ರೌಂಡ್​ ರಾಬಿನ್​ ಸುತ್ತಿನ ಮೊದಲ ಮುಖಾಮುಖಿಯಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಯುಪಿ ವಾರಿರ್ಸ್​ ವಿರುದ್ಧ ಹೀನಾಯ ಸೋಲು ಕಂಡಿತ್ತು. 138 ರನ್​ಗೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಆಲ್​ಔಟ್​ ಆಗಿತ್ತು. ಎಲ್ಲಿಸಾ ಪೆರಿ 52 ರನ್​ ಗಳಿಸಿ ತಂಡಕ್ಕೆ ಆಸರೆ ಆದರೆ, ಹೆಚ್ಚಿನವರು ಒಂದಂಕಿ ಆಟಕ್ಕೆ ವಿಕೆಟ್​ ಒಪ್ಪಿಸಿದ್ದರು. ಯುಪಿ ಪರ ಸೋಫಿ ಎಕ್ಲೆಸ್ಟೋನ್ 4 ವಿಕೆಟ್​ ಮತ್ತು ದಿಪ್ತಿ ಶರ್ಮಾ 3 ವಿಕೆಟ್ ಪಡೆದಿದ್ದರು. ಯುಪಿ ವಾರಿಯರ್ಸ್​ ಯಾವುದೇ ವಿಕೆಟ್​ ನಷ್ಟ ಅನುಭವಿಸದೇ ಗೆಲುವು ಕಂಡಿತ್ತು, ನಾಯಕಿ ಅಲಿಸ್ಸಾ ಹೀಲಿ 96 ರನ್​ಗಳ ಭರ್ಜರಿ ಬ್ಯಾಟಿಂಗ್​ ಮಾಡಿದ್ದರು.

ಮುಂಬೈ ಇಂಡಿಯನ್ಸ್ ರೀತಿ ಕಮ್​ಬ್ಯಾಕ್​ ಮಾಡುತ್ತಾ ಆರ್​ಸಿಬಿ:ಐಪಿಎಲ್​ 2014ರಲ್ಲಿ ಮುಂಬೈ ಇಂಡಿಯನ್ಸ್ ಆರಂಭಿಕ ಐದು ಪಂದ್ಯಗಳಲ್ಲಿ ಸೋಲನುಭವಿಸಿತ್ತು. ನಂತರದ ಒಂಬತ್ತು ಪಂದ್ಯದಲ್ಲಿ ಏಳನ್ನು ಗೆದ್ದು, ಪ್ಲೇ - ಆಫ್ ಪ್ರವೇಶ ಪಡೆದುಕೊಂಡಿತು. ಈಗ ರಾಯಲ್ ಚಾಲೆಂಜರ್ಸ್ ತಮ್ಮ ಮುಂದಿನ ಮೂರು ಪಂದ್ಯಗಳನ್ನು ಗೆದ್ದರೆ, ನಂತರ ಅವರು ಪ್ಲೇ-ಆಫ್ ಟಿಕೆಟ್ ಖಚಿತಪಡಿಸಿಕೊಳ್ಳಬಹುದು. ಇದಕ್ಕಾಗಿ ಸ್ಮೃತಿ ಮಂಧಾನಾ ತಂಡ ಆಲ್​ರೌಂಡರ್​ ಪ್ರದರ್ಶನ ನೀಡುವ ಅಗತ್ಯ ಇದೆ. ಸದ್ಯ ಎಲ್ಲ ಪಂದ್ಯಗಳನ್ನು ಸೋತಿರುವ ಆರ್​ಸಿಬಿ ಅಂಕ ಪಟ್ಟಿಯ ಕೊನೆಯ ಸ್ಥಾನದಲ್ಲಿದೆ.

ಇದನ್ನೂ ಓದಿ:ಮುಂದುವರೆದ ಮುಂಬೈ ಇಂಡಿಯನ್ಸ್​ ಗೆಲುವಿನ ಓಟ: ಗುಜರಾತ್​ ​ವಿರುದ್ಧ 55 ರನ್​ ಜಯ

ABOUT THE AUTHOR

...view details