ಮುಂಬೈ: ವುಮೆನ್ಸ್ ಪ್ರೀಮಿಯರ್ ಲೀಗ್ನಲ್ಲಿ ಮುಂಬೈ ಇಂಡಿಯನ್ಸ್ ತಂಡ ಗೆಲುವಿನ ನಾಗಾಲೋಟ ಮುಂದುವರಿಸಿದೆ. ಇಂದು ಯುಪಿ ವಾರಿಯರ್ಸ್ ವಿರುದ್ಧದ ಪಂದ್ಯದಲ್ಲಿ ಹರ್ಮನ್ಪ್ರೀತ್ ಕೌರ್ ಪಡೆ 8 ವಿಕೆಟ್ಗಳಿಂದ ಭರ್ಜರಿ ಜಯ ದಾಖಲಿಸಿತು. ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಯುಪಿ ವಾರಿಯರ್ಸ್, 20 ಓವರ್ಗಳಲ್ಲಿ 6 ವಿಕೆಟ್ ನಷ್ಟಕ್ಕೆ 159 ರನ್ಗಳನ್ನು ಪೇರಿಸಿತ್ತು. ಈ ಮೊತ್ತ ಬೆನ್ನತ್ತಿದ ಮುಂಬೈ ತಂಡ ಅನಾಯಾಸವಾಗಿ ಗೆಲುವಿನ ದಡ ತಲುಪಿತು.
ಮುಂಬೈ ಪರ ಆರಂಭಿಕರಾದ ಹೇಲಿ ಮ್ಯಾಥ್ಯೂಸ್ 12 ರನ್ ಗಳಿಸಿ ಬೇಗ ಪೇವಿಲಿಯನ್ ಸೇರಿದರು. ಆದರೆ ಯಾಸ್ತಿಕಾ ಭಾಟಿಯಾ (42) ಮತ್ತು ನ್ಯಾಟ್ ಸಿವರ್-ಬ್ರಂಟ್ (35) ರನ್ ಪೇರಿಸಿ ಉತ್ತಮ ಜೊತೆಯಾಟವಾಡಿದರು. ನಾಯಕಿ ಹರ್ಮನ್ಪ್ರೀತ್ ಕೌರ್ 53 ರನ್ ಸಿಡಿಸಿ ಅಜೇಯರಾಗಿ ಉಳಿದು ಗೆಲುವು ತಂದಿಟ್ಟರು. ಆರಂಭದಿಂದಲೂ ಉತ್ತಮ ರನ್ ರೇಟ್ ಹೊಂದಿದ್ದ ಮುಂಬೈ ಇಂಡಿಯನ್ಸ್, ಯುಪಿ ಬೌಲರ್ಗಳನ್ನು ದಂಡಿಸುತ್ತಲೇ ಬಂದಿದ್ದರು. ಕೊನೆಯದಾಗಿ 17.3 ಓವರ್ಗಳಲ್ಲಿ 2 ವಿಕೆಟ್ ನಷ್ಟಕ್ಕೆ 164 ರನ್ ಬಾರಿಸಿ ಮುಂಬೈ ಜಯಿಸಿತು.
ಯುಪಿ ನಾಯಕಿ ಅಲಿಸ್ಸಾ ಹೀಲಿ 58 ರನ್ ಮತ್ತು ತಹ್ಲಿಯಾ ಮೆಗ್ರಾತ್ 50 ರನ್ ಬಾರಿಸಿದ್ದರಿಂದ ತಂಡದ ಮೊತ್ತ 150ರ ಗಡಿ ದಾಟಿತು. ಮುಂಬೈ ಪರ ಸೈಕಾ ಇಶಾಕ್ 3, ಅಮೆಲಿಯಾ ಕೆರ್ 2 ಮತ್ತು ಹೇಲಿ ಮ್ಯಾಥ್ಯೂಸ್ 1 ವಿಕೆಟ್ ಕಬಳಿಸಿದರು.
ಹರ್ಮನ್ಪ್ರೀತ್ ಕೌರ್ ನೇತೃತ್ವದ ಮುಂಬೈ ಇಂಡಿಯನ್ಸ್ ತಂಡ ಆಡಿದ ನಾಲ್ಕು ಪಂದ್ಯದಲ್ಲಿ ಗೆಲುವು ಸಾಧಿಸಿ, ಅಂಕ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ. ಯುಪಿ ವಾರಿಯರ್ಸ್ ನಾಲ್ಕು ಪಂದ್ಯಗಳಲ್ಲಿ ಮೂರರಲ್ಲಿ ಸೋತಿದೆ.
ಯುಪಿ ವಾರಿಯರ್ಜ್ ಆಡುವ ತಂಡ : ದೇವಿಕಾ ವೈದ್ಯ, ಅಲಿಸ್ಸಾ ಹೀಲಿ(ವಿಕೆಟ್ ಕೀಪರ್/ನಾಯಕಿ), ಶ್ವೇತಾ ಸೆಹ್ರಾವತ್, ಕಿರಣ್ ನವಗಿರೆ, ತಹ್ಲಿಯಾ ಮೆಗ್ರಾತ್, ದೀಪ್ತಿ ಶರ್ಮಾ, ಸಿಮ್ರಾನ್ ಶೇಖ್, ಸೋಫಿ ಎಕ್ಲೆಸ್ಟೋನ್, ಶಬ್ನಿಮ್ ಇಸ್ಮಾಯಿಲ್, ಅಂಜಲಿ ಸರ್ವಾಣಿ, ರಾಜೇಶ್ವರಿ ಗಾಯಕ್ವಾಡ್