ಮುಂಬೈ:ಕೊನೆಯ ಮೂರು ಬಾಲ್ ಮತ್ತು ಮೂರು ವಿಕೆಟ್ಗಳಿಂದ ಯುಪಿ ವಾರಿಯರ್ಸ್ ಗುಜರಾತ್ ಜೈಂಟ್ಸ್ ಮೇಲೆ ಗೆಲುವು ಸಾಧಿಸಿ, ಪ್ಲೇ-ಆಫ್ಗೆ ಪ್ರವೇಶ ಪಡೆದು ಕೊಂಡಿದೆ. ಇದರಿಂದ ಆರ್ಸಿಬಿ ಮತ್ತು ಗುಜರಾತ್ ಜೈಂಟ್ಸ್ನ ಫೈನಲ್ ಪ್ರವೇಶದ ಕನಸು ಭಗ್ನವಾಗಿದೆ. ಗ್ರೇಸ್ ಹ್ಯಾರಿಸ್ ಮತ್ತು ತಹ್ಲಿಯಾ ಮೆಕ್‌ಗ್ರಾತ್ ಅವರ ಅರ್ಧಶತಕದ ಅಮೂಲ್ಯ ಕೊಡುಗೆ ಯುಪಿಗೆ ಗೆಲುವು ತಂದುಕೊಟ್ಟಿತು.
ಯುಪಿಯನ್ನು ಮಣಿಸಿ ಪ್ಲೇ-ಆಫ್ಗೆ ಪ್ರವೇಶವನ್ನು ಉಳಿಸಿಕೊಳ್ಳುವ ಪ್ರಯತ್ನದಲ್ಲಿ ರಾಣಾ ಪಡೆ ವಿಫಲವಾಯಿತು. ಟಾಸ್ ಗೆದ್ದ ಗುಜರಾತ್ ಬ್ಯಾಟಿಂಗ್ ತೆಗೆದು ಕೊಂಡು 177ರನ್ನ ಬೃಹತ್ ಮೊತ್ತವನ್ನು ಕಲೆ ಹಾಕಿತ್ತು. ಈ ಮೊತ್ತವನ್ನು ಬೆನ್ನು ಹತ್ತಿದ ಯುಪಿಗೆ ತಹ್ಲಿಯಾ ಮೆಕ್‌ಗ್ರಾತ್ ಮತ್ತು ಗ್ರೇಸ್ ಹ್ಯಾರಿಸ್ ಆಧಾರವಾಗಿ ನಿಂತು ಗೆಲುವಿಗೆ ಕಾರಣರಾದರು. ಈ ಗೆಲುವಿನಿಂದ ವಾರಿಯರ್ಸ್ ತಂಡ ಮಾರ್ಚ್ 24 ರಂದು ಎಲಿಮಿನೇಟರ್ ಪಂದ್ಯ ಆಡುವುದು ಪಕ್ಕಾ ಆಗಿದೆ. ಗುಜರಾತ್ ಜೈಂಟ್ಸ್ ನೀಡಿದ್ದ 178 ರನ್ ಗುರಿಯನ್ನು 7 ವಿಕೆಟ್ ನಷ್ಟದಿಂದ ಯುಪಿ ವಾರಿಯರ್ಸ್ ಗೆದ್ದು ಬೀಗಿದರು. ಕೊನೆಯಲ್ಲಿ ಸೋಫಿ ಎಕ್ಲೆಸ್ಟೋನ್ ವಿಜಯದ ರನ್ ಗಳಿಸಿದರು.
ಯುಪಿ ವಾರಿಯರ್ಸ್ ಆರಂಭಿಕ ಆಘಾತ ಅನುಭವಿಸಿದರು. 39 ರನ್ ತಂಡ 3 ವಿಕೆಟ್ ಕಳೆದು ಕೊಂಡಿತು. ಆದರೆ 4 ಮತ್ತು 5ನೇ ವಿಕೆಟ್ ಆಗಿ ಬಂದ ತಹ್ಲಿಯಾ ಮೆಕ್‌ಗ್ರಾತ್ ಹಾಗೂ ಗ್ರೇಸ್ ಹ್ಯಾರಿಸ್ ಆಸರೆಯಾದರು. ಇಬ್ಬರು ತಂಡದ ಮೊತ್ತವನ್ನು ಗೆಲುವಿನತ್ತ ಕೊಂಡೊಯ್ಯದರು. 57 ರನ್ ಗಳಿಸಿ ತಹ್ಲಿಯಾ ಮೆಕ್‌ಗ್ರಾತ್ ವಿಕೆಟ್ ನೀಡಿದರೆ, ನಂತರ ಬಂದ ದೀಪ್ತಿ ಶರ್ಮಾ 6 ರನ್ಗೆ ಔಟ್ ಆದರು.
7ನೇ ವಿಕೆಟ್ ಆಗಿ ಬಂದ ಸೋಫಿ ಎಕ್ಲೆಸ್ಟೋನ್, ಗ್ರೇಸ್ ಹ್ಯಾರಿಸ್ ಜೊತೆಗೂಡಿ ರನ್ ಕಲೆ ಹಾಕಿದರು. ತಂಡದ ಗೆಲುವಿಗೆ 5 ರನ್ ಬೇಕಿದ್ದಾಗ ಗ್ರೇಸ್ ಹ್ಯಾರಿಸ್ 41 ಎಸೆತದಲ್ಲಿ 72 ರನ್ ಗಳಸಿ ಪೆವಿಲಿಯನ್ ಹಾದಿ ಹಿಡಿದರು. ಈ ವೇಳೆ ಮತ್ತೆ ಯುಪಿ ವಾರಿಯರ್ಸ್ಗೆ ಸಂಕಷ್ಟ ಎದುರಾಯಿತು. ಕೊನೆಯ ಓವರ್ನಲ್ಲಿ ತಂಡಕ್ಕೆ 5ರನ್ನ ಅಗತ್ಯ ಇತ್ತು. ನಾಯಕಿ ಸ್ನೇಹಾ ರಾಣಾ ಒಂದು ರನ್ ಔಟ್ ಮುಖಾಂತರ ಒಂದು ವಿಕೆಟ್ ತೆಗೆದರೂ ಸೋಫಿ ಎಕ್ಲೆಸ್ಟೋನ್ ಗೆಲುವಿನ ಬೌಂಡರಿ ಬಾರಿಸಿ ಪ್ಲೇ-ಆಫ್ ಪ್ರವೇಶ ಪಡೆದರು.
ಮೊದಲ ಇನ್ನಿಂಗ್ಸ್:ಸ್ನೇಹಾ ರಾಣಾ ಅವರು ಬ್ಯಾಟಿಂಗ್ ನಿರ್ಧಾರವನ್ನು ಆಶ್ಲೀಗ್ ಗಾರ್ಡ್ನರ್ ಮತ್ತು ದಯಾಲನ್ ಹೇಮಲತಾ ಸಮರ್ಥಿಸಿಕೊಂಡರು. ಗುಜರಾತ್ ಉತ್ತಮ ಆರಂಭ ಸಿಕ್ಕಿತಾದರೂ ಬೃಹತ್ ಜೊತೆಯಾಟ ಮೊದಲ ವಿಕೆಟ್ನಲ್ಲಿ ಬರಲಿಲ್ಲ. ಆರಂಭಿಕರಾದ ಸೋಫಿಯಾ ಡಂಕ್ಲಿ ಮತ್ತು ಲಾರಾ ವೊಲ್ವಾರ್ಡ್ಟ್ 41 ರನ್ಗಳ ಜೊತೆಯಾಟ ಮಾಡಿದರು. 23 ರನ್ಗೆ ಸೋಫಿಯಾ ಡಂಕ್ಲಿ, 17ಕ್ಕೆ ಲಾರಾ ವೊಲ್ವಾರ್ಡ್ಟ್ ಮತ್ತು ನಂತರ ಬಂದ ಹರ್ಲೀನ್ ಡಿಯೋಲ್ 4 ರನ್ಗೆ ಔಟ್ ಆದರು.
3 ವಿಕೆಟ್ ಕಳೆದು ಕೊಂಡು ಸಂಕಷ್ಟದಲ್ಲಿದ್ದ ಗುಜರಾತ್ ಆಸರೆ ಆದದ್ದು ಮಧ್ಯಮ ಕ್ರಮಾಂಕದ ಆಶ್ಲೀಗ್ ಗಾರ್ಡ್ನರ್ ಮತ್ತು ದಯಾಲನ್ ಹೇಮಲತಾ. ತಂಡದ ಮೊತ್ತ 50 ಆಗಿದ್ದಾಗ ಹರ್ಲೀನ್ ಡಿಯೋಲ್ ವಿಕೆಟ್ ನಷ್ಟವಾಗಿತ್ತು, ನಂತರ ಈ ಜೋಡಿ ಮೊತ್ತವನ್ನು 143ರ ವರೆಗೆ ತೆಗೆದುಕೊಂಡು ಹೋಯಿತು. ಈ ವೇಳೆ 57 ರನ್ ಗಳಿಸಿ ಆಡುತ್ತಿದ್ದ ದಯಾಲನ್ ಹೇಮಲತಾ ಔಟ್ ಆದರು. ಅವರ ಬೆನ್ನಲ್ಲೇ ಆಶ್ಲೀಗ್ ಗಾರ್ಡ್ನರ್ (61) ಕೂಡಾ ವಿಕೆಟ್ ಒಪ್ಪಿಸಿದರು.
ಇದನ್ನೂ ಓದಿ:ಟಾಸ್ ಗೆದ್ದ ಗುಜರಾತ್ ಬ್ಯಾಟಿಂಗ್ ಆಯ್ಕೆ: ಪ್ಲೇ-ಆಫ್ ಪ್ರವೇಶಿಸುತ್ತಾ ಯುಪಿ?