ಕರ್ನಾಟಕ

karnataka

ETV Bharat / sports

ದಾಂಪತ್ಯ ಜೀವನಕ್ಕೆ ಕಾಲಿಟ್ಟ U-19 ವಿಶ್ವಕಪ್ ವಿಜೇತ ಹೀರೋ ಉನ್ಮುಕ್ತ್​ ಚಾಂದ್​ - ಉನ್ಮುಕ್ತ್​ ಚಾಂದ್​ ದಾಂಪತ್ಯ ಜೀವನ

2012ರ ಅಂಡರ್​​-19 ವಿಶ್ವಕಪ್​ ವಿಜೇತ ತಂಡದ ಕ್ಯಾಪ್ಟನ್​ ಉನ್ಮುಕ್ತ್​ ಚಾಂದ್ ತಮ್ಮ ಬಹುದಿನಗಳ ಗೆಳತಿ ಸಿಮ್ರಾನ್ ಜೊತೆ ದಾಂಪತ್ಯ ಜೀವನಕ್ಕೆ (Unmukt Chand -Simran Khosla wedding) ಕಾಲಿಟ್ಟಿದ್ದಾರೆ.

Unmukt Chand Marriage
Unmukt Chand Marriage

By

Published : Nov 22, 2021, 5:18 PM IST

ಹೈದರಾಬಾದ್​:2012ರಲ್ಲಿ ಟೀಂ ಇಂಡಿಯಾ ಅಂಡರ್​-19 ಕ್ಯಾಪ್ಟನ್​​ ಆಗಿ ಭಾರತಕ್ಕೆ ವಿಶ್ವಕಪ್​ ಗೆಲ್ಲಿಸಿಕೊಟ್ಟಿರುವ ಉನ್ಮುಕ್ತ್​ ಚಾಂದ್​(Unmukt Chand) ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಇದಕ್ಕೆ ಸಂಬಂಧಿಸಿದಂತೆ ಖುದ್ದಾಗಿ ಟ್ವಿಟರ್​ನಲ್ಲಿ ಮಾಹಿತಿ ಶೇರ್​ ಮಾಡಿಕೊಂಡಿದ್ದಾರೆ. ಬಹುದಿನಗಳ ಪ್ರೇಯಸಿ ಸಿಮ್ರಾನ್( Simran Khosla)​​ ಜೊತೆ ಕುಟುಂಬಸ್ಥರು ಹಾಗೂ ಆಪ್ತರ ಸಮ್ಮುಖದಲ್ಲಿ ನಿನ್ನೆ ಹೊಸ ಇನ್ನಿಂಗ್ಸ್​ ಆರಂಭಿಸಿದ್ದಾರೆ.

ದಾಂಪತ್ಯ ಜೀವನಕ್ಕೆ ಕಾಲಿಟ್ಟ ಉನ್ಮುಕ್ತ್​-ಸಿಮ್ರಾನ್​​

ಈಗಾಗಲೇ ಭಾರತೀಯ ಕ್ರಿಕೆಟ್​ಗೆ ನಿವೃತ್ತಿ ಘೋಷಿಸಿರುವ ಉನ್ಮುಕ್ತ್​ ಚಾಂದ್​​​ ಆಸ್ಟ್ರೇಲಿಯಾದ ಟಿ-20 ಲೀಗ್​ ಬಿಗ್​ಬ್ಯಾಷ್​​ನಲ್ಲಿ ಆಡಲು ಸಜ್ಜಾಗಿದ್ದಾರೆ. ಇದರ ಬೆನ್ನಲ್ಲೇ ಇದೀಗ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಸಿಮ್ರಾನ್​​ ಫಿಟ್ನೆಸ್​​ ಹಾಗೂ ನ್ಯೂಟ್ರಿಷನ್​ ಕೋಚ್​ ಆಗಿ ಕಾರ್ಯನಿರ್ವಹಿಸುತ್ತಿದ್ದು, ಕಳೆದ ಕೆಲ ವರ್ಷಗಳಿಂದ ಇಬ್ಬರು ಪರಸ್ಪರ ಪ್ರೀತಿಸುತ್ತಿದ್ದರು.

ಬಹುದಿನಗಳ ಪ್ರೇಯಸಿ ಸಿಮ್ರಾನ್ ಜೊತೆ ಮ್ಯಾರೇಜ್​​

2012ರಲ್ಲಿ ಆಸ್ಟ್ರೇಲಿಯಾದ ವಿರುದ್ಧ ನಡೆದ ಅಂಡರ್​-19 ವಿಶ್ವಕಪ್​ ಫೈನಲ್​(U-19 World Cup 2012) ಪಂದ್ಯದಲ್ಲಿ ಉನ್ಮುಕ್ತ್​ ಚಾಂದ್​​​ 111 ರನ್​ಗಳಿಸಿ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ನಿರ್ವಹಿಸಿದ್ದರು.

ಸಿಮ್ರಾನ್ ಜೊತೆ ಉನ್ಮುಕ್ತ್​ ಮದುವೆ

ಇದನ್ನೂ ಓದಿರಿ:PUBG ಆಟದಿಂದ ಪ್ರಾಣಕ್ಕೆ ಕುತ್ತು.. ರೈಲ್ವೆ ಹಳಿ ಮೇಲೆ ಕುಳಿತು ಪಬ್​ಜಿ ಆಡುತ್ತಿದ್ದ ಇಬ್ಬರು ವಿದ್ಯಾರ್ಥಿಗಳು ದುರ್ಮರಣ..

ABOUT THE AUTHOR

...view details