ನವದೆಹಲಿ: 19 ವರ್ಷದೊಳಗಿನವರ ಕ್ರಿಕೆಟ್ ವಿಶ್ವಕಪ್ ವಿಜೇತ ತಂಡದ ನಾಯಕರಾಗಿದ್ದ ಮಾಜಿ ಕ್ರಿಕೆಟಿಗ ಉನ್ಮುಕ್ತ್ ಚಾಂದ್ ಅಮೆರಿಕದ ಸಿಲಿಕಾನ್ ವ್ಯಾಲಿ ಸ್ಟ್ರೈಕರ್ಸ್ ತಂಡದೊಂದಿಗೆ ಒಪ್ಪಂದವೊಂದಕ್ಕೆ ಸಹಿ ಹಾಕಿದ್ದಾರೆ.
ಅಮೆರಿಕದ ಮೈನರ್ ಕ್ರಿಕೆಟ್ ಲೀಗ್ (ಎಂಎಲ್ಸಿ)ಯ 2021ನೇ ಆವೃತ್ತಿಗಾಗಿ ಉನ್ಮುಕ್ತ್ ಚಾಂದ್ ಸಹಿ ಹಾಕಿದ್ದು, ಶುಕ್ರವಾರವಷ್ಟೇ ಎಲ್ಲಾ ವಿಭಾಗದ ಕ್ರಿಕೆಟ್ಗೆ ರಾಜೀನಾಮೆಯನ್ನು ಘೋಷಣೆ ಮಾಡಿದ್ದರು.
ರಾಜೀನಾಮೆ ನೀಡಿದ ನಂತರ ಅಮೆರಿಕ ಸಿಲಿಕಾನ್ ವ್ಯಾಲಿ ಸ್ಟ್ರೈಕರ್ಸ್ ತಂಡದ ಪರವಾಗಿ ಟೊಯೋಟಾ ಮೈನರ್ ಕ್ರಿಕೆಟ್ ಲೀಗ್ ಚಾಂಪಿಯನ್ಶಿಪ್ನಲ್ಲಿ ಉನ್ಮುಕ್ತ್ ಚಾಂದ್ ಮೈದಾನಕ್ಕೆ ಇಳಿಯಲಿದ್ದು, ಮೊದಲ ಪಂದ್ಯವನ್ನು ಸೋಕಲ್ ಲ್ಯಾಶಿಂಗ್ಸ್ ವಿರುದ್ಧ ಆಡಲಿದ್ದಾರೆ.
ಮೋರ್ಗಾನ್ ಹಿಲ್ ಔಟ್ಡೋರ್ ಸ್ಫೋರ್ಟ್ಸ್ ಕಾಂಪ್ಲೆಕ್ಸ್ನಲ್ಲಿ ಹಣಾಹಣಿ ನಡೆಯಲಿದೆ. ಈಗಾಗಲೇ ಅಮೆರಿಕದ ಸ್ಯಾನ್ ಫ್ರಾನ್ಸಿಸ್ಕೋಗೆ ಉನ್ಮುಕ್ತ್ ಚಾಂದ್ ಸ್ಥಳಾಂತರಗೊಂಡಿದ್ದಾರೆ.