ಶಾರ್ಜಾ:ಯೂನಿವರ್ಸ್ ಬಾಸ್ ಖ್ಯಾತಿಯ ಕ್ರಿಸ್ ಗೇಲ್ ಕುರಿತು ಹೇಳಿಕೆ ನೀಡಿದ್ದ ಮಾಜಿ ಬೌಲರ್ ಕರ್ಟ್ನಿ ಆಂಬ್ರೋಸ್ ಮೇಲೆ ಗೇಲ್ ಇದೀಗ ಅಸಮಾಧಾನ ಹೊರಹಾಕಿದ್ದು, ಅವರ ಬಗ್ಗೆ ನನಗೆ ಯಾವುದೇ ರೀತಿಯ ಗೌರವ ಉಳಿದಿಲ್ಲ ಎಂದಿದ್ದಾರೆ.
ಐಸಿಸಿ ಟಿ-20 ವಿಶ್ವಕಪ್ನಲ್ಲಿ ವೆಸ್ಟ್ ಇಂಡೀಸ್ ತಂಡ ಆಯ್ಕೆಯಾಗಿದ್ದು, ಸ್ಫೋಟಕ ಬ್ಯಾಟರ್ ಕ್ರಿಸ್ ಗೇಲ್ ಅವಕಾಶ ಪಡೆದುಕೊಂಡಿದ್ದಾರೆ. ಈ ವಿಚಾರವಾಗಿ ಮಾತನಾಡಿದ್ದ ವೆಸ್ಟ್ ಇಂಡೀಸ್ ದಿಗ್ಗಜ ಬೌಲರ್ ಆಂಬ್ರೋಸ್, ತಂಡದಲ್ಲಿ ಗೇಲ್ ಆಡುವ 11ರ ಮೊದಲ ಆಯ್ಕೆಯ ಪ್ಲೇಯರ್ ಆಗಿರಬಾರದು ಎಂದು ಹೇಳಿಕೆ ನೀಡಿದ್ದರು. ಇದಕ್ಕೆ ಅಸಮಾಧಾನ ಹೊರಹಾಕಿರುವ ಗೇಲ್, ನಾನು ವೆಸ್ಟ್ ಇಂಡೀಸ್ ತಂಡದ ಪರ ಪದಾರ್ಪಣೆ ಮಾಡಿದಾಗ ಆಂಬ್ರೋಸ್ ನನ್ನ ಆದರ್ಶವಾಗಿದ್ದರು. ಆದರೆ, ಇದೀಗ ಅವರನ್ನ ನಾನು ಏಕವಚನದಲ್ಲಿ ಕರೆಯುತ್ತಿದ್ದು, ಅವರ ಬಗ್ಗೆ ಯಾವುದೇ ರೀತಿಯ ಗೌರವ ಉಳಿದಿಲ್ಲ ಎಂದು ಹೇಳಿಕೊಂಡಿದ್ದಾರೆ.