ಕರ್ನಾಟಕ

karnataka

ETV Bharat / sports

ದಕ್ಷಿಣ ಆಫ್ರಿಕಾ ವಿರುದ್ಧ ಟಿ20 ಸರಣಿ: ಪರಿಷ್ಕ್ರತ ಭಾರತ ತಂಡ ಪ್ರಕಟ - ದಕ್ಷಿಣ ಆಫ್ರಿಕಾ ಭಾರತ ಪಂದ್ಯ

ದಕ್ಷಿಣ ಆಫ್ರಿಕಾ ವಿರುದ್ಧ ಟಿ-20 ಸರಣಿಗೆ ಭಾರತ ತಂಡವನ್ನು ಪರಿಷ್ಕರಿಸಲಾಗಿದ್ದು, ಶ್ರೇಯಸ್​ ಅಯ್ಯರ್​, ಶಹಬಾಜ್​ ಅಹ್ಮದ್​, ಉಮೇಶ್​ ಯಾದವ್ ಸ್ಥಾನ ಪಡೆದಿದ್ದಾರೆ.

ndia-for-t20is-against-south-africa
ದಕ್ಷಿಣ ಆಫ್ರಿಕಾ ವಿರುದ್ಧ ಟಿ20 ಸರಣಿ

By

Published : Sep 28, 2022, 3:33 PM IST

ಆಸ್ಟ್ರೇಲಿಯಾದಲ್ಲಿ ನಡೆಯುವ ಟಿ20 ವಿಶ್ವಕಪ್​ಗೆ ಭಾರತ ತಂಡವನ್ನು ಸಜ್ಜುಗೊಳಿಸಲಾಗಿದ್ದು, ಇಂದಿನಿಂದ ದಕ್ಷಿಣ ಆಫ್ರಿಕಾ ವಿರುದ್ಧ ಆರಂಭವಾಗುವ 3 ಪಂದ್ಯಗಳ ಟಿ-20 ಸರಣಿ ಟ್ರಯಲ್​ ರನ್​ ಆಗಿದೆ. ಇಲ್ಲಿ ಕೆಲ ಬಾಕಿ ಇರುವ ಯೋಜನೆಗಳನ್ನು ಜಾರಿ ಮಾಡುವ ಮೂಲಕ ತಂಡವನ್ನು ಸಮರ್ಥವಾಗಿ ಸಂಯೋಜಿಸಲಾಗುತ್ತದೆ.

ವಿಶ್ವಕಪ್​ ಕಾದಾಟಕ್ಕೆ ಕೆಲ ದಿನಗಳೇ ಬಾಕಿ ಇರುವ ಕಾರಣ ತಂಡದ ಪ್ರಮುಖ ಆಟಗಾರರಿಗೆ ವಿಶ್ರಾಂತಿ ನೀಡಲಾಗಿದ್ದು, ಹರಿಣಗಳ ವಿರುದ್ಧ ಪ್ರಕಟಿಸಲಾಗಿದ್ದ ತಂಡದಲ್ಲಿ ಅಲ್ಪ ಬದಲಾವಣೆ ಮಾಡಲಾಗಿದೆ. ಟಿ20 ಸರಣಿಗೆ ಉಮೇಶ್​ ಯಾದವ್​, ಶ್ರೇಯಸ್​ ಅಯ್ಯರ್​ ಮತ್ತು ಆಲ್​ರೌಂಡರ್​ ಶಹಬಾಜ್​ ಅಹ್ಮದ್​ಗೆ ಸ್ಥಾನ ನೀಡಲಾಗಿದೆ.

ಕೊರೊನಾದಿಂದ ಚೇತರಿಸಿಕೊಳ್ಳದ ಮೊಹಮದ್​ ಶಮಿ, ಬೆನ್ನುನೋವಿಗೆ ತುತ್ತಾಗಿರುವ ದೀಪಕ್​ ಹೂಡಾ ಸರಣಿಯಿಂದ ಹೊರ ಬಿದ್ದಿದ್ದಾರೆ. ವಿಶ್ವಕಪ್​ ಹಿನ್ನೆಲೆಯಲ್ಲಿ ಹಾರ್ದಿಕ್​ ಪಾಂಡ್ಯಾ ಮತ್ತು ಭುವನೇಶ್ವರ್​ ಕುಮಾರ್​ಗೆ ವಿಶ್ರಾಂತಿ ನೀಡಲಾಗಿದೆ. ಇವರ ಜಾಗದಲ್ಲಿ ಅಯ್ಯರ್​, ಉಮೇಶ್​, ಶಹಬಾಜ್​ರನ್ನು ಸೇರಿಸಿಕೊಳ್ಳಲಾಗಿದೆ.

ವಿಶ್ವಕಪ್​ ತಂಡದಲ್ಲಿರುವ ಜಸ್ಪ್ರೀತ್​ ಬೂಮ್ರಾ, ಅಕ್ಸರ್​ ಪಟೇಲ್​, ಅರ್ಷದೀಪ್​ ಸಿಂಗ್​ಗೆ ಪೂರ್ಣ ಪ್ರಮಾಣದ ಜವಾಬ್ದಾರಿ ಮತ್ತು ಅಭ್ಯಾಸ ಸಿಗಲಿದೆ. ಹಾರ್ದಿಕ್​ ಪಾಂಡ್ಯಾಗೆ ವಿಶ್ರಾಂತಿ ನೀಡಿರುವ ಕಾರಣ ವಿಕೆಟ್​ ಕೀಪರ್​ ರಿಷಬ್​ ಪಂತ್​ಗೆ ತಂಡದಲ್ಲಿ ಸ್ಥಾನ ಸಿಗಲಿದ್ದು, ತಮ್ಮ ಸಾಮರ್ಥ್ಯ ಸಾಬೀತು ಮಾಡಬೇಕಿದೆ.

ಆಫ್ರಿಕಾ ವಿರುದ್ಧದ ಮೊದಲ ಟಿ20 ಪಂದ್ಯ ಕೇರಳದ ತಿರುವನಂತಪುರಂನಲ್ಲಿ ಇಂದು ನಡೆಯಲಿದೆ. ನಂತರ ಅಕ್ಟೋಬರ್ 2 ಮತ್ತು 4 ರಂದು ಉಳಿದ ಪಂದ್ಯಗಳು ನಡೆಯಲಿವೆ. ಟಿ20 ಸರಣಿಯ ಬಳಿಕ ಅಕ್ಟೋಬರ್ 6 ರಿಂದ ಮೂರು ಏಕದಿನ ಪಂದ್ಯಗಳು ನಡೆಯಲಿವೆ.

ಟಿ20 ಸರಣಿಗೆ ಭಾರತ ತಂಡ:ರೋಹಿತ್ ಶರ್ಮಾ (ನಾಯಕ), ಕೆಎಲ್ ರಾಹುಲ್ (ಉಪನಾಯಕ), ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್, ರಿಷಬ್ ಪಂತ್, ದಿನೇಶ್ ಕಾರ್ತಿಕ್, ಆರ್. ಅಶ್ವಿನ್, ಯಜುವೇಂದ್ರ ಚಹಲ್, ಅಕ್ಷರ್ ಪಟೇಲ್, ಅರ್ಷದೀಪ್ ಸಿಂಗ್, ಹರ್ಷಲ್ ಪಟೇಲ್, ದೀಪಕ್ ಚಹರ್, ಜಸ್ಪ್ರೀತ್ ಬುಮ್ರಾ, ಉಮೇಶ್ ಯಾದವ್, ಶ್ರೇಯಸ್ ಅಯ್ಯರ್, ಶಹಬಾಜ್ ಅಹ್ಮದ್.

ಓದಿ:India vs South Africa T20.. ದೇವರನಾಡಿನಲ್ಲಿಂದು ದಕ್ಷಿಣ ಆಫ್ರಿಕ-ಭಾರತ ಹಣಾಹಣಿ

ABOUT THE AUTHOR

...view details